ಭಾರತದ ವೈದ್ಯಕೀಯ ಪದವೀಧರರಿಗೆ ಜಾಗತಿಕ ಮನ್ನಣೆ, ವಿದೇಶಗಳಲ್ಲೂ ಅಧ್ಯಯನ, ವೃತ್ತಿಗೆ ಅವಕಾಶ
ದೇಶದ ವೈದ್ಯಕೀಯ ಪದವೀಧರರು ಇನ್ನುಮುಂದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಲ್ಲಿ ತಮ್ಮ ಸ್ನಾತಕೋತ್ತರ ತರಬೇತಿ ಮತ್ತು ವೃತ್ತಿಯನ್ನು ಮಾಡಬಹುದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ನವದೆಹಲಿ (ಸೆ.23): ದೇಶದ ವೈದ್ಯಕೀಯ ಪದವೀಧರರು ಇನ್ನುಮುಂದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಲ್ಲಿ ತಮ್ಮ ಸ್ನಾತಕೋತ್ತರ ತರಬೇತಿ (ಟ್ರೈನಿಂಗ್) ಮತ್ತು ವೃತ್ತಿಯನ್ನು ಮಾಡಬಹುದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಭಾರತೀಯ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ಯು ಜಾಗತಿಕ ವೈದ್ಯಕೀಯ ಶಿಕ್ಷಣ ಸಂಸ್ಥೆ (ಡಬ್ಲೂಎಫ್‌ಎಂಇ)ಯಿಂದ 10 ವರ್ಷಗಳ ಅವಧಿಗೆ ವೈದ್ಯಕೀಯ ಶಿಕ್ಷಣದ ಮಾನ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಈ ಮೇಲಿನ ದೇಶಗಳು ಡಬ್ಲೂಎಫ್‌ಎಂಇ ಮಾನ್ಯತೆ ಪಡೆದಿವೆಯಾದ್ದರಿಂದ ಇಲ್ಲಿಯೂ ಭಾರತದ ವೈದ್ಯಕೀಯ ಪದವೀಧರರು ಟ್ರೈನಿಂಗ್ ಪಡೆದುಕೊಳ್ಳಬಹುದಾಗಿದೆ.
ಭಾರತ ಮತ್ತು ಕೆನಡಾ ಶೈಕ್ಷಣಿಕ ಅಭಿವೃದ್ಧಿಗಾಗಿ ಒಪಿ ಜಿಂದಾಲ್ ವಿವಿ ಜೊತೆ ಕೆನಡಾ ಯಾರ್ಕ್‌ಒಪ್ಪಂದ
ಇನ್ನು ಈ ಮಾನ್ಯತೆಯಿಂದಾಗಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ 706 ವೈದ್ಯಕೀಯ ಕಾಲೇಜುಗಳು ಹಾಗೂ ಮುಂಬರುವ 10 ವರ್ಷಗಳಲ್ಲಿ ಸ್ಥಾಪಿತವಾಗುವ ಎಲ್ಲ ವೈದ್ಯಕೀಯ ಕಾಲೇಜುಗಳು ನೇರವಾಗಿ ಡಬ್ಲೂಎಫ್‌ಎಂಇ ಮಾನ್ಯತೆ ಪಡೆದುಕೊಳ್ಳುತ್ತವೆ.
ಡಬ್ಲೂಎಫ್‌ಎಂಇ ಮಾನ್ಯತೆ ಪಡೆಯಬೇಕಾದರೆ ದೇಶದ ಪ್ರತಿ ವೈದ್ಯಕೀಯ ಕಾಲೇಜಿಗೆ 49 ಲಕ್ಷ ರು. ಶುಲ್ಕ ನೀಡಬೇಕಾಗುತ್ತದೆ. ಅಂತೆಯೇ ತನ್ನ 706 ಕಾಲೇಜುಗಳಿಗಾಗಿ ಭಾರತ ಒಟ್ಟು 351.9 ಕೋಟಿ ರು. ಶುಲ್ಕ ನೀಡಿದೆ.
6 ನೇ ತರಗತಿಯಲ್ಲಿ ಮದುವೆ, ನೀಟ್ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗಲು ಹೊರಟವನಿಗೆ 20
ಇನ್ನು ಜಾಗತಿಕ ಮಾನ್ಯತೆಯಿಂದಾಗಿ ವಿಶ್ವದ ಇತರ ವಿದ್ಯಾರ್ಥಿಗಳೂ ಭಾರತದೆಡೆಗೆ ಆಕರ್ಷಿತರಾಗುತ್ತಾರೆ. ಅಲ್ಲದೇ ದೇಶದ ಮನ್ನಣೆ ಹಾಗೂ ಶಿಕ್ಷಣದಲ್ಲಿ ಉತ್ತಮ ಬೆಳವಣಿಗೆಗಳು ನಡೆಯುತ್ತವೆ.
- ಜಾಗತಿಕ ವೈದ್ಯಕೀಯ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ
- ಇದರಿಂದ ವೈದ್ಯಕೀಯ ಪದವೀಧರರಿಗೆ ಹೆಚ್ಚಿನ ಅವಕಾಶ