
ವಿಶ್ವಸಂಸ್ಥೆ(ಜ.11): ವಿಶ್ವಸಂಸ್ಥೆಗೆ ಸಲ್ಲಿಸಬೇಕಾಗಿದ್ದ ಬಾಕಿ ಮೊತ್ತದ ಎರಡನೇ ಕಂತನ್ನು ಪಾವತಿಸಿರುವ ಭಾರತಕ್ಕೆ, ವಿಶ್ವಸಂಸ್ಥೆ ಧನ್ಯವಾದ ಅರ್ಪಿಸಿದೆ. ಇದುವರೆಗೂ ಕೇವಲ ಕೆಲವೇ ಕೆಲವು ರಾಷ್ಟ್ರಗಳು ಬಾಕಿ ಮೊತ್ತ ಪಾವತಿಸಿದ್ದು, ಬಾಕಿ ತೀರಿಸದ ರಾಷ್ಟ್ರಗಳಿಗೆ ಶೀಘ್ರ ಪಾವತಿಗಾಗಿ ಮನವಿ ಮಾಡಿದೆ.
ಆರ್ಥಿಕ ಹೊರೆಯಿಂದ ಸಂಕಷ್ಟ ಎದುರಿಸುತ್ತಿರುವ ವಿಶ್ವಸಂಸ್ಥೆ, ವೆಚ್ಚ ಕಡಿತಕ್ಕೆ ಮುಂದಾಗಿತ್ತು. ಅಲ್ಲದೇ ಸಂಸ್ಥೆಯ ಸುಗಮ ಆಡಳಿತಕ್ಕಾಗಿ ಬಾಕಿ ಮೊತ್ತ ಪಾವತಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿತ್ತು.
ವಿಶ್ವ’ಕ್ಕೆ ಬುದ್ದಿ ಹೇಳೋ ‘ಸಂಸ್ಥೆ’ ಬಳಿ ದುಡ್ಡಿಲ್ಲ: ಕೊಡಬೇಕಾದವರೇ ಕೊಡ್ತಿಲ್ಲ!
ಅದರಂತೆ ಭಾರತ 23,396,496 ಡಾಲರ್ ಬಾಕಿ ಮೊತ್ತ ಪಾವತಿಸಿದ್ದು, ಇದಕ್ಕಾಗಿ ವಿಶ್ವಸಂಸ್ಥೆ ಭಾರತಕ್ಕೆ ಧನ್ಯವಾದ ಹೇಳಿದೆ. ಇದಿವರೆಗೂ ಕೇವಲ ಅರ್ಮಾನಿಯಾ, ಪೋರ್ಚುಗಲ್, ಉಕ್ರೇನ್ ಹಾಗೂ ಭಾರತ ಮಾತ್ರ ಬಾಕಿ ಮೊತ್ತವನ್ನು ಪಾವತಿಸಿವೆ.
ಈ ಕುರಿತು ಟ್ವಿಟ್ ಮಾಡಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಗೆ ನೀಡಬೇಕಾಗಿದ್ದ ಬಾಕಿ ಮೊತ್ತವನ್ನು ಪಾವತಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಗೆ ಕೊಡ್ಬೇಕಾದ್ದನ್ನು ಕೊಟ್ಟ ಭಾರತ: ‘ಬಾಕಿ’ ಏನಾದ್ರೂ ಉಳೀತಾ?
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಅವರ ಮಾಧ್ಯಮ ವಕ್ತಾರ ಸ್ಟಿಫನ್ ದುಜಾರಿಕ್, ಉಳಿದೆಲ್ಲಾ ಸದಸ್ಯ ರಾಷ್ಟ್ರಗಳು ಬಾಕಿ ಮೊತ್ತ ಪಾವತಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ