ಇಂಗ್ಲೆಂಡ್‌ನ ಅತ್ಯಂತ ಹಿರಿಯ ಪೆಂಗ್ವಿನ್‌ ನರಿ ದಾಳಿಗೆ ಬಲಿ

By Suvarna NewsFirst Published Aug 14, 2022, 11:36 AM IST
Highlights

ತನ್ನ ಜೀವಿತಾವಧಿಗಿಂತ ಎರಡು ಪಟ್ಟು ದೀರ್ಘಾಕಾಲ ಜೀವಿಸಿದ್ದ ಇಂಗ್ಲೆಂಡ್‌ನ ಅತ್ಯಂತ ಹಿರಿಯ ಪೆಂಗ್ವಿನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪೆಂಗ್ವಿನ್ ಒಂದನ್ನು ನರಿಯೊಂದು ಕೊಂದು ಹಾಕಿದೆ.

ತನ್ನ ಜೀವಿತಾವಧಿಗಿಂತ ಎರಡು ಪಟ್ಟು ದೀರ್ಘಾಕಾಲ ಜೀವಿಸಿದ್ದ ಇಂಗ್ಲೆಂಡ್‌ನ ಅತ್ಯಂತ ಹಿರಿಯ ಪೆಂಗ್ವಿನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪೆಂಗ್ವಿನ್ ಒಂದನ್ನು ನರಿಯೊಂದು ಕೊಂದು ಹಾಕಿದೆ. ಬ್ರಿಟನ್‌ನ ಎಡಿನ್‌ಬರ್ಗ್‌ನ ಮೃಗಾಲಯದಲ್ಲಿ ಇದು ವಾಸವಿತ್ತು. ಇದರ ಸಾವಿನ ಬಗ್ಗೆ ಎಡಿನ್‌ಬರ್ಗ್‌ನ ಮೃಗಾಲಯ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಹಿರಿಯ ಪೆಂಗ್ವಿನ್‌ ಸಾವಿನ ಬಗ್ಗೆ ಖಚಿತಪಡಿಸಿದೆ. 35 ವರ್ಷದ ಪೆಂಗ್ವಿನ್‌ ವೊಲೊವಿಟ್ಜ್  ಮೃತಪಟ್ಟಿದ್ದು, ಅವಳ ಬೃಹತ್‌ ವ್ಯಕ್ತಿತ್ವವನ್ನು ಮೃಗಾಲಯ ಕಳೆದುಕೊಂಡಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಳ್ಳಲಾಗಿದೆ. ಆಗಸ್ಟ್‌ 10ರಂದು ಈ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಇದೇ ಝೂನಲ್ಲಿದ್ದ ಇತರ ಯಾವುದೇ ಪೆಂಗ್ವಿನ್‌ಗಳಿಗೆ ಹಾನಿಯಾಗಿಲ್ಲ ಎಂದು ಮೃಗಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ಮೃಗಾಲಯದಲ್ಲಿ ಈ ದುರಂತ ಸಂಭವಿಸಿದೆ. ನರಿಯೊಂದು ಪೆಂಗ್ವಿನ್‌ಗಳಿದ್ದ ಮೃಗಾಲಯದ ಅವರಣವನ್ನು ಬೇಧಿಸಿ ಬಂದು ಈ ವಯಸ್ಸಾದ ಹಾಗೂ ಅತ್ಯಂತ ಹಿರಿಯ ಪೆಂಗ್ವಿನ್‌ ವೊಲೊವಿಟ್ಜ್‌ನ್ನು ಹತ್ಯೆ ಮಾಡಿದೆ. 1987 ರಲ್ಲಿ ಜನಿಸಿದ ವೊಲೊವಿಟ್ಜ್, ಇಂಗ್ಲೆಂಡ್‌ನ ಅತ್ಯಂತ ಹಳೆಯ ಪೆಂಗ್ವಿನ್‌ ಆಗಿತ್ತು. ವೊಲೊವಿಟ್ಜ್  ಪೆಂಗ್ವಿನ್‌, ಎಡಿನ್‌ಬರ್ಗ್ ಮೃಗಾಲಯದಲ್ಲಿನ ನಾರ್ತರ್ನ್‌ ರಾಕ್‌ಹಾಪರ್ ಪೆಂಗ್ವಿನ್‌ಗಳಲ್ಲಿ ಒಂದಾಗಿತ್ತು. 

We know so many of you loved Mrs Wolowitz, our oldest penguin 🐧

Sadly, we lost her last night after a fox broke into our penguin enclosure. Thankfully, the rest of our colony are unharmed and are doing well.

Her massive personality will be missed 💛 pic.twitter.com/fGEu0QHzkE

— Edinburgh Zoo (@EdinburghZoo)

ಮೃಗಾಲಯ ಸಿಬ್ಬಂದಿಯ ಪ್ರಕಾರ, ಈ ವೋಲ್ಫೊವಿಟ್ಜ್ ತನ್ನ ಜೀವಿತಾವಧಿಯನ್ನು ದ್ವಿಗುಣಗೊಳಿಸಿದ್ದಳು. ಸಾಮಾನ್ಯವಾಗಿ ಪೆಂಗ್ವಿನ್‌ಗಳ ಸರಾಸರಿ ಜೀವಿತಾವಧಿ 15 ರಿಂದ 20 ವರ್ಷ. ವೋಲ್ಫೊವಿಟ್ಜ್  ಸಾವಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರು ಎಡಿನ್‌ಬರ್ಗ್‌ ಮೃಗಾಲಯ ಸಿಬ್ಬಂದಿ ಇದು ಮೃಗಾಲಯದ ಅತ್ಯಂತ ಹಿರಿಯ ಪೆಂಗ್ವಿನ್ ಆಗಿತ್ತು. ಆಕೆಯ ಒಡನಾಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮಲ್ಲಿ ಅನೇಕರು ನಮ್ಮ ಹಿರಿಯ ಪೆಂಗ್ವಿನ್ ವೊಲೊವಿಟ್ಜ್‌ನ್ನು ಇಷ್ಟಪಡುತ್ತಿದ್ದೀರಿ. ಆದರೆ ದುಃಖಕರ ವಿಷಯವೆಂದರೆ ಕಳೆದ ರಾತ್ರಿ ಪೆಂಗ್ವಿನ್ ವಾಸವಿದ್ದ ಆವರಣಕ್ಕೆ ನುಗ್ಗಿದ್ದ ನರಿ, ವೋಲ್ಫೊವಿಟ್ಜ್ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಅದೃಷ್ಟವಶಾತ್ ಅದೇ ಗೂಡಿನಲ್ಲಿದ್ದ ಉಳಿದ ಪೆಂಗ್ವಿನ್‌ಗಳು ಯಾವುದೇ ಹಾನಿಗೊಳಗಾಗದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ. 

ಸಿಗಲಾರೆ ಸಿಗಲಾರೆ... ಚಿಟ್ಟೆಯ ಬೆನ್ನಟ್ಟುವ ಪೆಂಗ್ವಿನ್‌ಗಳು : ವಿಡಿಯೋ ನೋಡಿ

ರಾಕ್‌ಹಾಪರ್ ಪೆಂಗ್ವಿನ್‌ಗಳು ಕ್ರೆಸ್ಟೆಡ್ ಪೆಂಗ್ವಿನ್‌ಗಳ ಮೂರು ನಿಕಟ ಸಂಬಂಧಿತ ಜಾತಿಗೆ ಸೇರಿವೆ. ಇವುಗಳನ್ನು ಒಂದೇ ಜಾತಿಯಾಗಿ ಪರಿಗಣಿಸಲಾಗಿದೆ ಮತ್ತು ಕೆಲವೊಮ್ಮೆ ಮೂರು ಜಾತಿಗಳಾಗಿ ವಿಭಜಿಸಲಾಗಿದೆ. ಇವು ಪೆಂಗ್ವಿನ್‌ಗಳ ಸಣ್ಣ ಜಾತಿಗಳಲ್ಲಿ ಸೇರಿವೆ. ಇವು ಪೂರ್ಣ ಬೆಳವಣಿಗೆಯನ್ನು ತಲುಪಿದ ನಂತರ, ಸುಮಾರು 20 ಇಂಚುಗಳು ಅಥವಾ 50 ಸೆಂಟಿಮೀಟರ್ ಉದ್ದ ಇರುತ್ತವೆ. Britannica.com ಪ್ರಕಾರ, ಅವುಗಳು ತಮ್ಮ ಕೆಂಪು ಕಣ್ಣುಗಳು, ಪ್ರತಿ ಕಣ್ಣಿನ ಮೇಲಿರುವ ಬಿಲ್‌,  ತಲೆಯ ಹಿಂಭಾಗಕ್ಕೆ ಚಾಚಿರುವ ನೇರವಾದ ಹಳದಿ ಗರಿಗಳು ಮತ್ತು ತಲೆಯ ಮೇಲ್ಭಾಗದಲ್ಲಿ ನೇರವಾಗಿ ನಿಂತಿರುವ ಕಪ್ಪು ಗರಿಗಳ ಕ್ರೆಸ್ಟ್‌ನಿಂದಾಗಿ ಸುಲಭವಾಗಿ ಗುರುತಿಸಲ್ಪಡುತ್ತವೆ. 

ಲೆಸ್ಬಿಯನ್ ಪೆಂಗ್ವಿನ್‌ನಿಂದ ಮೊಟ್ಟೆಯ ಗೂಡನ್ನೇ ಕದ್ದೊಯ್ದ ಗೇ ಪೆಂಗ್ವಿನ್..!

ಪೆಂಗ್ವಿನ್‌‌ಗಳು ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವ ಜಲಚರಗಳು, ಇವು ಹಾರಲಾರದ ಪಕ್ಷಿಗಳ ಒಂದು ಗುಂಪಾಗಿದೆ. ನೀರಿನಲ್ಲಿನ ಜೀವನಕ್ಕೆ ಹೊಂದಿಕೊಂಡಿರುವ ಪೆಂಗ್ವಿನ್‌‌ಗಳು, ವಿರುದ್ಧಛಾಯೆಯ ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ. ಅವುಗಳ ರೆಕ್ಕೆಗಳು ಈಜುಗೈಗಳಾಗಿ ಮಾರ್ಪಟ್ಟಿವೆ. ಬಹುಪಾಲು ಪೆಂಗ್ವಿನ್‌‌ಗಳು ಪುಟ್ಟ ಕಡಲಕಳೆ ಚಿಪ್ಪುಜೀವಿಗಳು, ಮೀನು, ಸ್ಕ್ವಿಡ್‌, ಮತ್ತು ನೀರೊಳಗೆ ಸಿಗುವ ಇತರ ಕಡಲ ಪ್ರಾಣಿಗಳನ್ನು ತಿನ್ನುತ್ತವೆ. ಅವು ತಮ್ಮ ಜೀವಿತಾವಧಿಯ ಸುಮಾರು ಅರ್ಧಭಾಗವನ್ನು ಭೂಮಿಯ ಮೇಲೆ ಕಳೆದರೆ, ಉಳಿದರ್ಧ ಭಾಗವನ್ನು ಮಹಾಸಾಗರಗಳಲ್ಲಿ ಕಳೆಯುತ್ತವೆ.
 

click me!