
ಕೀವ್(ಮಾ.22): ಆಯಕಟ್ಟಿನ ನಗರವಾದ ಮರಿಯುಪೋಲ್ ಅನ್ನು ತಮ್ಮ ವಶಕ್ಕೆ ನೀಡಿ, ಶರಣಾಗುವಂತೆ ರಷ್ಯಾ ಸೇನೆ ಮಾಡಿದ್ದ ಪ್ರಸ್ತಾಪವನ್ನು ಉಕ್ರೇನ್ ಸೇನೆ ಸಾರಾಸಗಟಾಗಿ ತಿರಸ್ಕರಿಸಿದೆ. ಮರಿಯುಪೋಲ್ ನಮ್ಮ ವಶದಲ್ಲಿದೆ. ಹೀಗಾಗಿ ನೀವು ಶಸ್ತ್ರಾಸ್ತ್ರ ಕೆಳಗಿಳಿಸಿ, ಶಾಂತಿಯ ಸಂಕೇತವಾದ ಬಿಳಿಯ ಧ್ವಜ ಹಾರಿಸಿ. ನಾವು ನಿಮಗೆ ಸುರಕ್ಷಿತ ಕಾರಿಡಾರ್ ಮೂಲಕ ತೆರಳು ಅವಕಾಶ ಮಾಡಿಕೊಡುತ್ತೇವೆ ಎಂದು ಯುದ್ಧದ 26ನೇ ದಿನವಾದ ಸೋಮವಾರ ರಷ್ಯಾ ಸೇನೆ, ಉಕ್ರೇನ್ ಸೇನೆಗೆ ಸಲಹೆ ನೀಡಿತ್ತು.
ಆದರೆ ಇದನ್ನು ತಿರಸ್ಕರಿಸಿರುವ ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್, ‘ಶರಣಾಗತಿ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ. ರಷ್ಯಾದ ತಂತ್ರಗಳಿಗೆ ಉಕ್ರೇನ್ ಮಣಿಯುವುದಿಲ್ಲ. ಈ ಕುರಿತಾಗಿ ನಮ್ಮ ನಿರ್ಣಯವನ್ನು ರಷ್ಯಾಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಉಕ್ರೇನ್ ಬೈರೆಕ್ಟರ್ ಡ್ರೋನ್‌ಗೆ ಪ್ರತಿಯಾಗಿ ನಿರ್ಬಂಧಿತ ಈರುಳ್ಳಿ ಬಾಂಬ್ ಹಾಕಿತಾ ರಷ್ಯಾ?
ಉಕ್ರೇನ್ ಸೈನಿಕರು ಅಜೋವ್ ಸಮುದ್ರದ ಬಂದರನ್ನು ತ್ಯಜಿಸಿ, ಶಸ್ತ್ರಾಸ್ತ್ರಗಳನ್ನು ತೊರೆದು, ನಾಗರಿಕರನ್ನು ಸ್ಥಳಾಂತರಿಸಲು ನಿರ್ಮಿಸಲಾಗಿರುವ ಮಾನವೀಯ ಕಾರಿಡಾರ್ ಮೂಲಕ ಸೈನಿಕರು ನಿರ್ಗಮಿಸಬಹುದು. ಶಸ್ತ್ರಾಸ್ತ್ರ ತ್ಯಜಿಸಿರುವುದರಿಂದ ಎಲ್ಲರಿಗೂ ಮರಿಯುಪೋಲ್‌ನಿಂದ ಸುರಕ್ಷಿತ ನಿರ್ಗಮನವನ್ನು ಖಾತ್ರಿ ಪಡಿಸಲಾಗುವುದು ಎಂದು ರಷ್ಯಾ ಹೇಳಿತ್ತು. ಇದಕ್ಕಾಗಿ ಸೋಮವಾರ ಮುಂಜಾನೆ 5ರವರೆಗೆ ಗಡುವನ್ನು ನೀಡಲಾಗಿತ್ತು.
ಉಕ್ರೇನ್ ಪ್ರಸ್ತಾಪ ತಿರಸ್ಕರಿಸಿದ ಬೆನ್ನಲ್ಲೇ, ಆ ನಗರದ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಮರಿಯುಪೋಲ್ ಅತ್ಯಂತ ಆಯಕಟ್ಟಿನ ನಗರವಾಗಿದ್ದು, ಇದು ಪೂರ್ಣವಾಗಿ ವಶವಾದರೆ, 2014ರಲ್ಲಿ ತಾನು ಉಕ್ರೇನ್‌ನಿಂದ ವಶಪಡಿಸಿಕೊಂಡಿರುವ ಕ್ರೆಮಿಯಾ ಪ್ರದೇಶಕ್ಕೆ ಸುಲಲಿತವಾಗಿ ನೀರು ಪೂರೈಕೆ ಮಾಡುವುದು ರಷ್ಯಾಕ್ಕೆ ಸಾಧ್ಯವಾಗಲಿದೆ. ಹೀಗಾಗಿ ಉಳಿದೆಲ್ಲಾ ನಗರಗಳಿಗಿಂತ ಈ ನಗರವನ್ನೇ ರಷ್ಯಾ ಹೆಚ್ಚು ಗುರಿ ಮಾಡಿದೆ. ಪರಿಣಾಮ ಈ ನಗರವೊಂದರಲ್ಲೇ 2000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ.
ಚೀನಾದಿಂದ ಸೇನಾ ನೆರವು ಕೋರಿದ ರಷ್ಯಾ?: ಅಮೆರಿಕ ಗಂಭೀರ ಆರೋಪ!
ಮರಿಯುಪೋಲ್‌ನಿಂದ 40000 ಜನರ ಪಲಾಯನ
ಯುದ್ಧಪೀಡಿತ ಉಕ್ರೇನಿನ ಮರಿಯುಪೋಲ್‌ನಿಂದ 40,000ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರ್ಡಿಯನ್ಸ್$್ಕನಿಂದ ಝಪೊರಿಝಿಯಾ ಮಾನವೀಯ ಕಾರಿಡಾರ್ ಬಳಸಿ ಸುಮಾರು 8000 ವಾಹನಗಳಲ್ಲಿ 39,426 ನಾಗರಿಕರು ಸುರಕ್ಷಿತವಾಗಿ ಸ್ಥಳಾಂತರ ಹೊಂದಿದ್ದಾರೆ. ಈ ಮೂಲಕ 4.3 ಲಕ್ಷ ಜನಸಂಖ್ಯೆ ಹೊಂದಿರುವ ಮರಿಯುಪೋಲ್‌ನ ಸುಮಾರು ಶೇ. 10 ರಷ್ಟುಜನರು ನಗರವನ್ನು ತೊರೆದಿದ್ದಾರೆ.
ಶನಿವಾರ ಒಂದೇ ದಿನ ಉಕ್ರೇನಿನಿಂದ 6,623 ಜನರು ಪಲಾಯನ ಮಾಡಿದ್ದು, ಇದರಲ್ಲಿ 4,128 ಜನರು ಮರಿಯುಪೋಲ್‌ನವರಾಗಿದ್ದರು. ರಷ್ಯಾದ ಯೋಧರು ನಗರವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದು, ಸತತವಾಗಿ ಬಾಂಬ್ ಶೆಲ್ ದಾಳಿ ನಡೆಸುತ್ತಿದ್ದಾರೆ. ರಷ್ಯಾದ ದಾಳಿಯಲ್ಲಿ ಸುಮಾರು 2300 ಜನರು ಬಲಿಯಾಗಿದ್ದಾರೆ.
400 ಜನರು ತಂಗಿದ್ದ ಶಾಲೆ ಮೇಲೆ ರಷ್ಯಾ ದಾಳಿ
ಮರಿಯುಪೋಲ್‌ನಲ್ಲಿ ಸುಮಾರು 400 ಜನರಿಗೆ ಆಶ್ರಯ ನೀಡಿದ್ದ ಕಲಾ ಶಾಲೆಯ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುವ ಮೂಲಕ ವಿಧ್ವಂಸಕ ಕೃತ್ಯ ಮುಂದುವರೆಸಿವೆ. ತನ್ಮೂಲಕ ಒಂದು ವಾರದಲ್ಲಿ 2ನೇ ಬಾರಿ ನಿವಾಸಿಗಳ ಕಟ್ಟಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ.ಕಳೆದ ಬುಧವಾರ ನಗರದ ಥಿಯೇಟರ್ ಮೇಲೆ ಬಾಂಬ್ ಆಕ್ರಮಣ ನಡೆಸಿತ್ತು. ಈ ಬೆನ್ನಲ್ಲೇ ಭಾನುವಾರ ಶಾಲೆಯ ಮೇಲೆ ಭೀಕರ ದಾಳಿ ನಡೆಸಿದೆ. ದಾಳಿಯ ಸಾವು-ನೋವಿನ ಬಗ್ಗೆ ತತ್‌ಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.ಮರಿಯುಪೋಲ… ಅಜೋವ್ ಸಮುದ್ರದ ಆಯಕಟ್ಟಿನ ಬಂದರಾಗಿದ್ದು, ಯುದ್ಧ ಆರಂಭವಾದಾಗಿನಿಂದ ನಗರದ ಮೇಲೆ ರಷ್ಯಾ ಪಡೆಗಳು ಸತತ ಬಾಂಬ್ ಮತ್ತು ಶೆಲ್ ದಾಳಿ ನಡೆಸುತ್ತಿವೆ. ಪರಿಣಾಮ ಯುದ್ಧದಲ್ಲಿ ಕನಿಷ್ಠ 2,300 ಜನರು ಸಾವನ್ನಪ್ಪಿದ್ದಾರೆ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ