Save Soil ಆಂದೋಲನ, ಲಂಡನ್‌ನಿಂದ ಭಾರತಕ್ಕೆ 100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು!

Published : Mar 21, 2022, 08:31 PM ISTUpdated : Mar 21, 2022, 08:32 PM IST
Save Soil ಆಂದೋಲನ, ಲಂಡನ್‌ನಿಂದ ಭಾರತಕ್ಕೆ 100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು!

ಸಾರಾಂಶ

100 ದಿನಗಳ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು ಜಗ್ಗಿ ವಾಸುದೇವ್ 27 ರಾಷ್ಟ್ರಗಳ ಸುತ್ತಿ ಭಾರತಕ್ಕೆ ಆಗಮಿಸಲಿದ್ದಾರೆ ಸದ್ಗುರು ಮಣ್ಣು ಉಳಿಸಲು  30,00 ಕಿ.ಮೀ ಏಕಾಂಗಿ ಬೈಕ್ ರ‍್ಯಾಲಿ  

ಲಂಡನ್(ಮಾ.21): ಕಾವೇರಿ ಕೂಗೂ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿವಾಸುದೇವ್(Sadhguru) ಇದೀಗ ಮಣ್ಣು ಉಳಿಸಿ ಅಭಿಯಾನ(save soil campaign ಭರ್ಜರಿಯಾರಿ ಆರಂಭಿಸಿದ್ದಾರೆ. ಲಂಡನ್‌ನಿಂದ(London) ಏಕಾಂಗಿಯಾಗಿ ಬೈಕ್ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ. 27 ರಾಷ್ಟ್ರಗಳ ಸುತ್ತಿ ಬರೋಬ್ಬರಿ 30,000 ಕಿಲೋಮೀಟರ್ ಕ್ರಮಿಸಿ ಭಾರತ ಪ್ರವೇಶಿಸಲಿದ್ದಾರೆ. 

ಲಂಡನ್‌ನಿಂದ ಆರಂಭಗೊಳ್ಳುವ ಮಣ್ಣು ಉಳಿಸಿ ಬೈಕ್ ರ‍್ಯಾಲಿ(Motorcycle Journey) ಕರ್ನಾಟಕದ(Karnataka) ಕಾವೇರಿಯಲ್ಲಿ ಅಂತ್ಯಗೊಳ್ಳಲಿದೆ. ಬರೋಬ್ಬರಿ 100 ದಿನ ಸದ್ಗುರು ಬೈಕ್ ಮೂಲಕ 27 ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಚರಿಸಲಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಟ್ರಾಫಲ್ಗರ್ ಸ್ಕ್ವಾರ್‌ನಿಂದ ಸೇವ್ ಸಾಯಿಲ್ ಅಭಿಯಾನದ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಗಿದೆ.

Cauvery Calling Movement: ಸಸಿ ನೆಡುವ ಚಳವಳಿ ಇಡೀ ದೇಶ ವ್ಯಾಪಿಸಲಿ

100 ದಿನಗಳ ಬೈಕ್ ಸಂಚಾರದಲ್ಲಿ 27 ರಾಷ್ಟ್ರಗಳಲ್ಲಿ ಸದ್ಗುರು ಆಯಾ ದೇಶದ ಪ್ರಮುಖರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪ್ರತಿ ದೇಶದಲ್ಲಿ ಮಾಧ್ಯಮದ ಜೊತೆ ಪರಿಸರ ಜಾಗೃತಿ ಮೂಡಿಸಲಿದ್ದಾರೆ. ಈಗಾಗಲೇ ಕೆರಿಬಿಯನ್‌ನ 6 ದೇಶಗಳು ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದೆ.

 

 

ಅಭಿಯಾನವು ಮಾ.21​ರಿಂದ ಆರಂಭ​ವಾ​ಗಲಿದ್ದು ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗೆ ‘ಮಣ್ಣು ಉಳಿಸಿ’ (ಸೇವ್‌ ಸಾಯ್‌್ಲ) ಬೈಕ್‌ ರಾರ‍ಯಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾರ‍ಯಲಿಯು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಕೊನೆಗೊಳ್ಳಲಿದೆ. ಒಟ್ಟು ನೂರು ದಿನಗಳ ಬೈಕ್‌ ರಾರ‍ಯಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಅಭಿಯಾನದಡಿ ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ 30 ಸಾವಿರ ಕಿಲೋಮೀಟರ್‌ ಕ್ರಮಿಸುವ ಮೂಲಕ ಬರ್ಲಿನ್‌, ಪ್ಯಾರಿಸ್‌, ಜಿನೇವಾ ಸೇರಿದಂತೆ 27 ರಾಷ್ಟ್ರಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿ ಸುಮಾರು 350 ಕೋಟಿ ಜನರಿಗೆ ಮಣ್ಣಿನ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

ಶಿವನ ಜಪ ಮಾಡಿ ಕುಣಿದ ಸ್ಟಾರ್ ಹೀರೋಯಿನ್ಸ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸದ್ಗುರು, ‘ಮಣ್ಣಿನ ಸವಕಳಿಯು ಆಹಾರ ಉತ್ಪಾದನೆ, ಹವಾಮಾನ ಸ್ಥಿರತೆ ಮತ್ತು ಈ ಭೂಮಿಯ ಮೇಲಿನ ಜೀವಕ್ಕೆ ಅಪಾಯವನ್ನುಂಟುಮಾಡುವ ಮಟ್ಟವನ್ನು ಸಮೀಪಿಸುತ್ತಿದೆ. ಭೂಮಿಯ ಮೇಲಿನ ಅತ್ಯಂತ ಉತ್ಸಾಹಭರಿತ ವಸ್ತು ಮಣ್ಣು ಎಂಬುದನ್ನು ನಾವು ಮರೆತಿದ್ದೇವೆ. ಮಣ್ಣು ಪ್ರತಿಯೊಬ್ಬರ ಜೀವನಕ್ಕೂ ಆಧಾರವಾಗಿದೆ. ಮಣ್ಣು ಉಳಿಸಿ ಎಂಬುದು ಜಾಗತಿಕ ಆಂದೋಲನವಾಗಿದ್ದು, ಕೃಷಿಯೋಗ್ಯ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರಗಳು ರಾಷ್ಟ್ರೀಯ ನೀತಿಗಳನ್ನು ಜಾರಿಗೆ ತರುವಂತೆ ಮನವೊಲಿಸುವ ಅಭಿಯಾನವಾಗಿದೆ ಎಂದು ಹೇಳಿದರು.

ಮಣ್ಣಿನ ಸವಕಳಿಯಿಂದ ಯುವಪೀಳಿಗೆಗೆ ಮುಂದಿನ 50 ವರ್ಷದಲ್ಲಿ ಆಹಾರ ಸಮಸ್ಯೆ ಉಂಟಾಗಲಿದೆ. ನಿರ್ಲಕ್ಷಿಸಿದರೆ ಇದು ಜಾಗತಿಕ ಸಮಸ್ಯೆಯಾಗಲಿದೆ. ಹೀಗಾಗಿ ಮಣ್ಣಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಕುರಿತು ಕೆಲವು ತಿಂಗಳ ಹಿಂದೆ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಮಣ್ಣಿನ ರಕ್ಷಣೆಗಾಗಿ ನೀತಿ ರೂಪಿಸುವಂತೆ ಆಗ್ರಹಿಸಿದ್ದೇವೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ತಿಳಿಸಿದ್ದಾರೆ.

ವಿವಿಧ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಭೂಮಿ, ಕೃಷಿ ಪದ್ಧತಿಗನುಗುಣವಾಗಿ ಮಣ್ಣಿನ ರಕ್ಷಣೆ ಕುರಿತು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಸಂಬಂಧ ಯುನೈಟೆಡ್‌ ನೇಷನ್ಸ್‌ ಕನ್‌ವೆನ್ಷನ್‌ ಕಾಂಬಟ್‌ ಡೆಸರ್ಟಿಫಿಕೇಷನ್‌ (ಯುಎನ್‌ಸಿಸಿಡಿ), ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಮತ್ತು ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಗಳು ಅಭಿಯಾನದ ಪಾಲುದಾರಿಕೆ ಹೊಂದಿವೆ ಎಂದು ಈಶ ಫೌಂಡೇಷನ್‌ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!