Russia Ukraine War ಎರಡು ಪ್ರಮುಖ ಷರತ್ತಿಗೆ ಉಕ್ರೇನ್‌ ಒಪ್ಪಿಗೆ, ಶಾಂತವಾಗುತ್ತಾ ರಷ್ಯಾ?

Published : Mar 09, 2022, 01:16 AM IST
Russia Ukraine War ಎರಡು ಪ್ರಮುಖ ಷರತ್ತಿಗೆ ಉಕ್ರೇನ್‌ ಒಪ್ಪಿಗೆ, ಶಾಂತವಾಗುತ್ತಾ ರಷ್ಯಾ?

ಸಾರಾಂಶ

- ನ್ಯಾಟೋ ಸೇರ್ಪಡೆ ಪ್ರಸ್ತಾಪ ಕೈಬಿಟ್ಟಉಕ್ರೇನ್‌ - ಬಂಡುಕೋರ ಪ್ರದೇಶಗಳ ವಿಚಾರದಲ್ಲಿ ರಾಜಿಗೆ ಸಿದ್ಧ - ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಘೋಷಣೆ  

ಕೀವ್‌ (ಮಾ.9): ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ‘ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ (Ukraine President  Volodymyr Zelensky) ಮಂಗಳವಾರ ರಾತ್ರಿ ಘೋಷಿಸಿದ್ದಾರೆ. ಅಲ್ಲದೆ, ‘ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ 2 ರಷ್ಯಾ-ಪರ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ’ ಎಂದೂ ಅವರು ಹೇಳಿದ್ದಾರೆ. ರಷ್ಯಾದ 4 ಷರತ್ತುಗಳ ಪೈಕಿ 2 ಷರತ್ತಿಗೆ ಈಗ ಉಕ್ರೇನ್‌ ಒಪ್ಪಿಕೊಂಡಂತಾಗಿದೆ. ಹೀಗಾಗಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧದ ತೀವ್ರತೆ ಕಡಿಮೆ ಮಾಡಬಹುದೇ ಎಂಬ ಆಶಾಕಿರಣ ಮೂಡಿದೆ.

ಉಕ್ರೇನ್‌ ಸರ್ಕಾರವು ರಷ್ಯಾ ವಿರುದ್ಧದ ಒಕ್ಕೂಟವಾದ 30 ಪಾಶ್ಚಾತ್ಯ ದೇಶಗಳ ‘ನ್ಯಾಟೋ’ (NATO) ಸೇರ್ಪಡೆ ಆಗಲು ಮುಂದಾಗಿದ್ದೇ ಯುದ್ಧಕ್ಕೆ ಮೂಲ ಕಾರಣವಾಗಿತ್ತು. ಈ ಪಟ್ಟನ್ನು ಉಕ್ರೇನ್‌ ಸಡಿಲ ಮಾಡದ ಹೊರತು ನಾವು ಯುದ್ಧ ನಿಲ್ಲಸಲ್ಲ ಎಂದು ರಷ್ಯಾ(Russia) ಷರತ್ತು ವಿಧಿಸಿತ್ತು. ಈ ಪಟ್ಟಿಗೆ ಮಣಿದಿರುವ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ, ‘ನ್ಯಾಟೋ ಕುರಿತ ನಮ್ಮ ನಿಲುವಿನಿಂದ ಹಿಂದೆ ಸರಿದಿದ್ದೇವೆ. ನಮ್ಮನ್ನು ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ. ರಷ್ಯಾ ಮೇಲೆ ಯುದ್ಧ ಮಾಡಿ ಅಪಾಯ ತಂದುಕೊಳ್ಳಲು ನ್ಯಾಟೋ ಸಿದ್ಧವಿಲ್ಲ’ ಎಂದು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ವೇಳೆ, ‘ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ರಷ್ಯಾ ಪರ ಬಂಡುಕೋರ ಪ್ರದೇಶಗಳಾದ ಡೊನೆಟ್ಸ್ಕ್ ಹಾಗೂ ಲುಗಾನ್ಸ್ಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ’ ಎಂದೂ ಜೆಲೆನ್‌ಸ್ಕಿ ಹೇಳಿದ್ದಾರೆ.

ಎಲ್ಲೂ ಅವಿತುಕೊಂಡಿಲ್ಲ, ಹೆದರಿಕೊಂಡಿಲ್ಲ: ಜೆಲೆನ್‌ಸ್ಕಿ
ಕೀವ್‌:
ರಾಜಧಾನಿ ಕೀವ್‌ (Kyiv) ವಶಕ್ಕೆ ರಷ್ಯಾ ತನ್ನ ಯತ್ನ ತೀವ್ರಗೊಳಿಸಿರುವ ಬೆನ್ನಲ್ಲೇ, ತಾನು ಎಲ್ಲಿಯೂ ಅವಿತುಕೊಂಡಿಲ್ಲ. ಯಾರಿಗೂ ಹೆದರಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮೀರ್‌ ಜೆಲೆನ್‌ಸ್ಕಿ ಘೋಷಿಸಿದ್ದಾರೆ. ಈ ಕುರಿತು ಮಂಗಳವಾರ ವಿಡಿಯೋ ಬಿಡುಗಡೆ ಮಾಡಿರುವ ಅವರು ‘ನಾನು ಕೀವ್‌ನ ಬಂಕೋವಾ ಸ್ಟ್ರೀಟ್‌ನಲ್ಲಿಯೇ (Bunkova Street) ಇದ್ದೇನೆ. ನಾನೇನು ಅಡಗಿ ಕುಳಿತಿಲ್ಲ, ಹಾಗೆ ನನಗೆ ಯಾರ ಭಯವೂ ಇಲ್ಲ. ದೇಶಭಕ್ತಿಯ ಈ ಯುದ್ಧವನ್ನು ಗೆಲ್ಲಲು ಎಷ್ಟೋ ಸಾಧ್ಯವೋ ಅಷ್ಟುಮಾಡಲು ಸಿದ್ಧ ಎಂದಿದ್ದಾರೆ.

ಉಕ್ರೇನ್‌ ವಶಕ್ಕೆ ನಾನಾ ಯತ್ನ ನಡೆಸುತ್ತಿರುವ ರಷ್ಯಾ, ಚೆಚೆನ್‌ ಉಗ್ರರನ್ನು ಬಳಸಿಕೊಂಡು ಜೆಲೆನ್‌ಸ್ಕಿ ಸೇರಿದಂತೆ ರಾಜಕೀಯ ನಾಯಕರನ್ನು (Political Leaders) ಬಂಧಿಸುವ ಇಲ್ಲವೇ ಹತ್ಯೆ ಮಾಡುವ ಸಂಚು ರೂಪಿಸಿದೆ. ಜೆಲೆನ್‌ಸ್ಕಿ ಇಂಥ ನಾಲ್ಕು ಆತ್ಮಹತ್ಯಾ ದಾಳಿಯಿಂದ ( assassination attempt) ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಪರಾರಿಯಾಗಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಅದರ ಬೆನ್ನಲ್ಲೇ ಅವರು ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಉಕ್ರೇನ್‌ನಿಂದ 20 ಲಕ್ಷ ಜನರ ವಲಸೆ
ಕೀವ್‌:
ರಷ್ಯಾ ಉಕ್ರೇನ್‌ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ದೇಶ ತೊರೆಯುವವರ ಸಂಖ್ಯೆ ಹೆಚ್ಚಾಗಿದ್ದು, ಇದುವರೆಗೂ ಉಕ್ರೇನ್‌ನಿಂದ 20 ಲಕ್ಷ ಜನ ವಲಸೆ ( fled ) ಹೋಗಿದ್ದಾರೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಯುದ್ಧದ (World War) ನಂತರ ಯುರೋಪ್‌ನಲ್ಲಿ (Europe) ನಡೆಯುತ್ತಿರುವ ಅತಿ ದೊಡ್ಡ ಯುದ್ಧ ಇದಾಗಿದ್ದು, ರಷ್ಯಾದ ಆಕ್ರಮಣದಿಂದಾಗಿ (russia invasion) ಉಕ್ರೇನ್‌ನ ಹಲವು ನಗರಗಳಲ್ಲಿ ಆಹಾರ, ನೀರು ಮತ್ತು ಔಷಧಿಯ ಕೊರತೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ದೇಶ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!