Russia Ukraine War 30 ದಿನದಲ್ಲೇ 6 ಮಿಲಿಯನ್ ಫಾಲೋವರ್ಸ್ ಸಂಪಾದಿಸಿದ ಝೆಲೆನ್ಸ್ಕಿ!

Published : Mar 08, 2022, 08:14 PM ISTUpdated : Mar 08, 2022, 08:15 PM IST
Russia Ukraine War 30 ದಿನದಲ್ಲೇ 6 ಮಿಲಿಯನ್ ಫಾಲೋವರ್ಸ್ ಸಂಪಾದಿಸಿದ ಝೆಲೆನ್ಸ್ಕಿ!

ಸಾರಾಂಶ

ಯುದ್ಧದ ಪ್ರತಿಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಪ್ರತಿ ವಿಚಾರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚುತ್ತಿರುವ ಉಕ್ರೇನ್ ಅಧ್ಯಕ್ಷ  30 ದಿನದಲ್ಲೇ ಝೆಲೆನ್ಸ್ಕಿಗೆ 6 ಮಿಲಿಯನ್ ಫಾಲೋವರ್ಸ್  

ಬೆಂಗಳೂರು (ಮಾ.8): ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ (Russia) ಆಕ್ರಮಣ 2ನೇ ವಾರಕ್ಕೆ ಕಾಲಿಡುವ ಹಂತದಲ್ಲಿದೆ. ಉಕ್ರೇನ್ ನ ಬಹುತೇಕ ಪಟ್ಟಣಗಳನ್ನು ತನ್ನ ಸುಪರ್ದಿಗೆ ತಂದಿಟ್ಟುಕೊಂಡಿರುವ ರಷ್ಯಾ, ರಾಜಧಾನಿ ಕೈವ್(Kyiv) ಅನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ಇನ್ನೂ ಹೋರಾಟ ನಡೆಸುತ್ತಿದೆ. ಅದಕ್ಕೆ ಕಾರಣ ಉಕ್ರೇನ್ ಸೇನೆಯ (Ukraine Army) ಪ್ರತಿರೋಧ, ಯಾವುದೇ ಕಾರಣಕ್ಕೂ ರಾಜಧಾನಿಯ ರಕ್ಷಣೆಯ ಹಾದಿಯಲ್ಲಿ ಪಣತೊಟ್ಟಿರುವ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (volodymyr zelensky), ಖ್ಯಾತ ವಿಡಿಯೋ ಹಾಗೂ ಫೋಟೋ ಶೇರಿಂಗ್‌ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ನಲ್ಲಿ(Instagram) 30 ದಿನಗಳಲ್ಲಿಯೇ ಬರೋಬ್ಬರಿ 6 ಮಿಲಿಯನ್ (Million) ಫಾಲೋವರ್ಸ್ ಗಳನ್ನು ಸಂಪಾದನೆ ಮಾಡಿದ್ದಾರೆ.

ಸರಿಯಾಗಿ 30 ದಿನಗಳ ಹಿಂದೆ ಅಂದರೆ, ಫೆಬ್ರವರಿ 6 ರ ಸುಮಾರಿಗೆ 9 ಮಿಲಿಯನ್ ಫಾಲೋವರ್ ಗಳನ್ನು (Followers) ಹೊಂದಿದ್ದ ಝೆಲೆನ್ಸ್ಕಿ ಮಾರ್ಚ್ 8ರ ವೇಳೆಗೆ 15.26 ಮಿಲಿಯನ್ ಫಾಲೋವರ್ ಗಳನ್ನು ಸಂಪಾದನೆ ಮಾಡಿದ್ದಾರೆ.  ಶೇ. 64.66 ರಲ್ಲಿ ಅವರ ಫಾಲೋವರ್ ಗಳ ಪ್ರಗತಿ ಏರಿಕೆ ಕಂಡಿದೆ. ಈ ಹಾದಿಯಲ್ಲಿ ಅವರು ಒಟ್ಟಾರೆ 6 ಮಿಲಿಯನ್ ಫಾಲೋವರ್ ಗಳನ್ನು ಸಂಪಾದನೆ ಮಾಡಿದ್ದಾರೆ ಎನ್ನುವುದು ಇನ್ಸ್ಟಾಗ್ರಾಮ್ ಅನಾಲಿಟಿಕ್ಸ್ ನ ಮಾಹಿತಿ.

ಝೆಲೆನ್ಸ್ಕಿ ಇನ್ಸ್ ಟಾಗ್ರಾಮ್ ನಲ್ಲಿ ಮಾತ್ರವಲ್ಲದೆ, ಮತ್ತೊಂದು ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಟಿಕ್ ಟಾಕ್ ನಲ್ಲೂ ಯುದ್ಧದ ಕುರಿತಾದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ ಟಾಗ್ರಾಮ್ ನಲ್ಲಿ ಝೆಲೆನ್ಸ್ಕಿ ಹಂಚಿಕೊಂಡಿರುವ ಬಹುತೇಕ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿವೆ. ಅದರಲ್ಲೂ ರಷ್ಯಾದ ಸೇನೆ ಯುರೋಪ್ ನ ಅತೀದೊಡ್ಡ ಅಣುಸ್ಥಾಪವ ಝಫೋರಿಝ್ಯ ಮೇಲೆ ದಾಳಿ ಮಾಡಿದೆ ಎಂದು ತಿಳಿಸಲು ಅವರು ಪೋಸ್ಟ್ ಮಾಡಿದ ವಿಡಿಯೋ 13 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ಇನ್ನು ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೂ ಇನ್ಸ್ ಟಾಗ್ರಾಮ್ ನಲ್ಲಿ 100ಕ್ಕೂ ಅಧಿಕ ಪೋಸ್ಟ್ ಗಳನ್ನು ಝೆಲೆನ್ಸ್ಕಿ ಮಾಡಿದ್ದಾರೆ.

ಉಕ್ರೇನ್ ನಲ್ಲಿ ರಷ್ಯಾದ ಸೇನೆಯಿಂದ ಅಗುತ್ತಿರುವ ಆಕ್ರಮಣಗಳನ್ನು ತಿಳಿಸಲು ಹಾಗೂ ತಾವಿನ್ನೂ ಉಕ್ರೇನ್ ನಲ್ಲಿಯೇ ಇದ್ದೇನೆ ಎನ್ನುವುದನ್ನು ಹೊರಜಗತ್ತಿಗೆ ತಿಳಿಸಲು ಸಾಮಾಜಿಕ ಮಾಧ್ಯಮವನ್ನು ವೇದಿಕೆ ಮಾಡಿಕೊಂಡಿರುವ ಝೆಲೆನ್ಸ್ಕಿ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ.

Russia Ukraine War : ಉಕ್ರೇನ್ ನಿಂದ ತಿರುಗಿ ಬಂದ ವಿದ್ಯಾರ್ಥಿನಿ ಹೇಳಿದ ಕಟು ವಾಸ್ತವ
ಝೆಲೆನ್ಸ್ಕಿ ಮಾತ್ರವಲ್ಲದೆ, ಉಕ್ರೇನ್ ದೇಶದಲ್ಲಿ ಆಗುತ್ತಿರುವ ಬಾಂಬ್ ಆರ್ಭಟ, ಶೆಲ್, ಮಿಸೈಲ್ ಗಳ ದಾಳಿ, ಸಾಮಾನ್ಯ ಉಕ್ರೇನ್ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಹೊರಜಗತ್ತಿಗೆ ತಿಳಿಸಲು ಸಾಮಾಜಿಕ ಮಾಧ್ಯಮವನ್ನು ವೇದಿಕೆ ಮಾಡಿಕೊಳ್ಳಲಾಗಿದೆ. ವಿಶ್ವದ ಪ್ರಮುಖ ವ್ಯಕ್ತಿಗಳು ಈಗಾಗಲೇ ಈ ಯುದ್ಧವನ್ನು,"ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರವ ಮೊದಲ ಯುದ್ಧ" ಎಂದು ಬಣ್ಣಿಸಿದ್ದಾರೆ. ಅದರ ಸರಳವಾದ ಎಡಿಟಿಂಗ್ ಸಾಫ್ಟ್‌ವೇರ್ ಬಳಕೆದಾರರಿಗೆ ಚಿತ್ರೀಕರಣಗೊಂಡ ಕೆಲವೇ ಸೆಕೆಂಡುಗಳಲ್ಲಿ ತುಣುಕನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಅದರ ಪ್ರಬಲ ಆಲ್ಗರಿದಮ್ ಮೂಲಕ ಕೋಟಿಗಟ್ಟಲೆ ವೀಕ್ಷಕರಿಗೆ ಇದನ್ನು ತೋರಿಸಲು ಸಾಧ್ಯವಾಗುತ್ತದೆ.

Animal Love : ಉಕ್ರೇನ್‌ನಿಂದ ಬಂದ ವಿದ್ಯಾರ್ಥಿ ಪ್ರಾಣಿ ಪ್ರೀತಿ.. ಹಾವು ಸಂರಕ್ಷಣೆ ಶುರುವಾಗೈತಿ!
ಇನ್ಸ್ಟಾಗ್ರಾಮ್ ನಲ್ಲಿ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಝೆಲೆನ್ಸ್ಕಿ, ಟ್ವಿಟರ್ ನಲ್ಲಿ 5 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಇದರ ನಡುವೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೈವ್ ತೊರೆದು ಪೋಲೆಂಡ್ಗೆ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳನ್ನೂ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಲ್ಲಗಳೆದಿದ್ದಾರೆ. ರಷ್ಯಾ ಅನೇಕ ಬಾರಿ ಹೀಗೊಂದು ವಾದ ಮುಂದಿಟ್ಟಿದೆ. ಆದರೆ ಝೆಲೆನ್ಸ್ಕಿ ಈ ಎಲ್ಲಾ ವಾದ ಮತ್ತು ವದಂತಿಗಳನ್ನು ತಳ್ಳಿಹಾಕಿದ್ದಾರೆ. ಮಂಗಳವಾರ, ಝೆಲೆನ್ಸ್ಕಿ (Zelenskyy) ಕೀವ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಪೋಸ್ಟ್ ಮಾಡುತ್ತಾ, 'ನಾನು ರಾಜಧಾನಿ ಕೀವ್ನಲ್ಲಿದ್ದೇನೆ ಮತ್ತು ಯಾರಿಗೂ ಹೆದರುವುದಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಬಹಿರಂಗ ಸವಾಲೆಸೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!