Russia Ukraine War ನೀವು ಟಿಕ್‌ಟಾಕ್‌ನಲ್ಲಿ ಸ್ಟಾರ್, ವೊಲೊಡಿಮಿರ್ ಝೆಲೆನ್ಸ್ಕಿಗೆ ಹೇಳಿದ ಗಾಯಾಳು ಯುವತಿ!

Suvarna News   | Asianet News
Published : Mar 18, 2022, 06:52 PM IST
Russia Ukraine War ನೀವು ಟಿಕ್‌ಟಾಕ್‌ನಲ್ಲಿ ಸ್ಟಾರ್, ವೊಲೊಡಿಮಿರ್ ಝೆಲೆನ್ಸ್ಕಿಗೆ ಹೇಳಿದ ಗಾಯಾಳು ಯುವತಿ!

ಸಾರಾಂಶ

ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಉಕ್ರೇನ್ ಅಧ್ಯಕ್ಷ ಈ ವೇಳೆ ನೀವು ಟಿಕ್ ಟಾಕ್ ನಲ್ಲಿ ದೊಡ್ಡ ಸ್ಟಾರ್ ಎಂದ ಗಾಯಾಳು ಯುವತಿ ದೇಶದ ಕಠಿಣ ಪರಿಸ್ಥಿತಿಯ ನಡುವೆಯೂ ತಮಾಷೆಯಾಗಿ ಉತ್ತರಿಸಿದ ಝೆಲೆನ್ಸ್ಕಿ

ಕೈವ್ (ಮಾ. 18): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ( Volodymyr Zelensky ) ಗಾಯಗೊಂಡ ಯುವಕ ಯುವತಿಯುರನ್ನು ಇತ್ತೀಚೆಗೆ ಆಸ್ಪತ್ರೆಯಲ್ಲಿ ಭೇಟಿಯಾದರು. ಇದೇ ವೇಳೆ ಗಾಯಾಳು ಯುವತಿಯೊಬ್ಬಳು ಜನಪ್ರಿಯ ವಿಡಿಯೋ ಹಂಚಿಕೆ ತಾಣದಲ್ಲಿ ನೀವು ದೊಡ್ಡ ಸ್ಟಾರ್ ಎಂದು ಝೆಲೆನ್ಸ್ಕಿಗೆ ಹೇಳುತ್ತಿರುವ ವಿಡಿಯೋ (Video) ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದಕ್ಕೆ ಝೆಲೆನ್ಸ್ಕಿ ಕೂಡ ತಮಾಷೆಯಾಗಿ ಉತ್ತರಿಸಿದ್ದು ನೆಟ್ಟಿಗರ ಗಮನಸೆಳೆದಿದೆ. ರಾಜಧಾನಿ ಕೈವ್ ( Kiyv ) ಬಳಿಕ ವೊರ್ಜೆಲ್ (Vorzel)ಪಟ್ಟಣದಿಂದ ಹೊರಡುವ ವೇಳೆ ರಷ್ಯಾದ (Russia) ಶೆಲ್ (Shell) ದಾಳಿಯಿಂದ 16 ವರ್ಷದ ಯುವತಿ ಗಾಯಗೊಂಡಿದ್ದರು.

"ಟಿಕ್‌ಟಾಕ್‌ನಲ್ಲಿ (TikTok) ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ" ಎಂದು ಕಟ್ಯಾ ವ್ಲಾಸೆಂಕೊ (Katya Vlasenko) ಎಂದು ಗುರುತಿಸಲಾದ ಹುಡುಗಿ ಉಕ್ರೇನ್ ಅಧ್ಯಕ್ಷರಿಗೆ ಹೇಳಿದ್ದಾರೆ. "ಓಹ್ ಹೌದೇ, ಹಾಗಿದ್ದರೆ ನಾವು ಟಿಕ್ ಟಾಕ್ ಅನ್ನು ಆಕ್ರಮಿಸಿಕೊಳ್ಳಲು ಯಶಸ್ವಿಯಾಗಿದ್ದೇವೆ'' ಎಂದು ಮುಖದಲ್ಲಿ ನಗವನ್ನು ಹೊತ್ತು ಝೆಲೆನ್ಸ್ಕಿ ಉತ್ತರ ನೀಡಿದ್ದಾರೆ. ದೇಶ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದರೂ, ಸಾಮಾನ್ಯ ನಾಗರಿಕರೊಂದಿಗೆ ಸರಳವಾಗಿ ಬೆರೆತು ತಮಾಷೆಯ ಕ್ಷಣಗಳನ್ನು ಕಳೆದ ಝೆಲೆನ್ಸ್ಕಿ ವರ್ತನೆಯನ್ನು ವಿಶ್ವದ ಹಲವು ನಾಯಕರು ಹಾಗೂ ಅಭಿಮಾನಿಗಳು ಮೆಚ್ಚಿದ್ದಾರೆ.

"ಎಲ್ಲರೂ ನಿಮ್ಮ ಬಗ್ಗೆ ಮಾತನಾಡುತ್ತಾರೆ, ಒಟ್ಟಾರೆ ಅಲ್ಲಿನ ಮಾತುಕತೆಗಳೇ ನಿಮ್ಮ ಬಗ್ಗೆ," ಎಂದು ಆಕೆ ಉತ್ತರ ನೀಡಿದ್ದಾಳೆ. ಚಿಕಿತ್ಸೆಗಾಗಿ ಹಾಸಿಗೆಯಲ್ಲಿ ಮಲಗಿದ್ದ ಹುಡುಗಿಗೆ ಬಿಳಿ ಹಾಗೂ ಗುಲಾಬಿ ಹೂವುಗಳ ಗುಚ್ಛವನ್ನು ಉಕ್ರೇನ್ ಅಧ್ಯಕ್ಷರು ನೀಡಿದರು. ಇದು ಸುಲಭವಲ್ಲ, ಯಾಕೆಂದರೆ ನಾವು ಸರಿಯಾದುದನ್ನೇ ಮಾಡಿದ್ದೇವೆ ಎಂದು ಆಕೆಗೆ ಹೇಳಿದ್ದಾರೆ.


ರಾಜಧಾನಿ ಸಮೀಪದ ತಮ್ಮ ಊರಿನಿಂದ ಹೊರಬರುವ ವೇಳೆ, ರಷ್ಯಾದ ಶೆಲ್ಲಿಂಗ್ ದಾಳಿ ವಿಪರೀತವಾಗಿ ನಡೆಯುತ್ತಿತ್ತು. ಈ ವೇಳೆ ತನ್ನ 8 ವರ್ಷದ ತಮ್ಮ ಇಹೋರ್ ಅನ್ನು ರಕ್ಷಣೆ ಮಾಡುವ ಸಲುವಾಗಿ ಆತನನ್ನು ಮುಚ್ಚಿಕೊಂಡು ಕಟ್ಯಾ ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿದ್ದರು. ಈ ವೇಳೆ ಶಾರ್ಪ್ನೆಲ್ ಗಳು ಆಕೆಗೆ ತಾಗಿ ಗಾಯವಾಗಿತ್ತು. ಈಕೆಯ ತಂದೆ, ಮಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲು ಮಾಡಿದ್ದರು. ರಷ್ಯಾದ ದಾಳಿಯ ನಡುವೆಯೂ ಉಕ್ರೇನ್ ಅಧ್ಯಕ್ಷರ ಧೈರ್ಯವನ್ನು ಜಾಗತಿಕವಾಗಿ ಪ್ರಶಂಸೆ ಮಾಡಲಾಗುತ್ತಿದೆ. ಝೆಲೆನ್ಸ್ಕಿ ದೇಶವನ್ನು ತೊರೆಯಲು ಅಮೆರಿಕ ನೀಡಿದ್ದ ಪ್ರಸ್ತಾಪವನ್ನು ನಿರಾಕರಿಸಿದ್ದಲ್ಲದೆ, ತನ್ನ ದೇಶದಲ್ಲೇ ಉಳಿದು ಹೋರಾಟ ನಡೆಸುವ ಪ್ರತಿಜ್ಞೆ ಮಾಡಿದ್ದರು.

Russia Ukraine War ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !
ಉಕ್ರೇನ್ ಯುದ್ಧದ ವಿಚಾರವಾಗಿ ವಿಶ್ವದ ಅಗ್ರ ಟಿಕ್ ಟಾಕ್ ತಾರೆಗಳೊಂದಿಗೆ ಇತ್ತೀಚೆಗೆ ವೈಟ್ ಹೌಸ್ ( White House ) ಝೂಮ್ ನಲ್ಲಿ ವರ್ಚುವಲ್ ಸಭೆ ನಡೆಸಿತ್ತು. ಸಂಘರ್ಷದ ಬಗ್ಗೆ ನಕಲಿ ಸುದ್ದಿಗಳನ್ನು ಹೊರಹಾಕಲು ಸಹಾಯ ಮಾಡುವಂತೆ ಅಮೆರಿಕದ ಅಧಿಕಾರಿಗಳು ಜನಪ್ರಿಯ ಇಂಟರ್ನೆಟ್ ತಾರೆಗಳಲ್ಲಿ( Internet Stars ) ಮನವಿ ಮಾಡಿಕೊಂಡಿದೆ. ಇದಕ್ಕಾಗಿ ಟಿಕ್ ಟಾಕ್ ಇನ್ ಫ್ಲುಯೆನ್ಸರ್ ಗಳಿಗೆ ಹಣ ಪಾವತಿ ಮಾಡಲಾಗುತ್ತದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಜೆನ್ ಝಡ್ ಫಾರ್ ಚೇಂಜ್ ಎಂಬ ಲಾಭರಹಿತ ಸಂಸ್ಥೆಯೊಂದಿಗೆ ಅವರ ಕೆಲಸದಿಂದಾಗಿ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.

'ಭಾರತ, ಚೀನಾ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಬೇಕು, ಪುಟಿನ್ ನಡೆ ಸರಿಯಲ್ಲ'
ಕೆಲವರು ಈ ಕ್ರಮವನ್ನು ಟೀಕಿಸಬಹುದು ಅಥವಾ ಇದು ನಿರೂಪಣೆಯನ್ನು ನಿಯಂತ್ರಿಸುತ್ತದೆ ಎಂದು ವಾದಿಸಬಹುದು, ಟಿಕ್‌ಟಾಕ್ ಯುವ ಪೀಳಿಗೆಗೆ ಮಾಹಿತಿಯ ದೊಡ್ಡ ಮೂಲವಾಗಿದ್ದು, ಯುಎಸ್ ಆಡಳಿತದ ಅಧಿಕಾರಿಗಳು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವುದು ಮುಖ್ಯವೆಂದು ಅರಿತುಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ