ಕಾಳಿ ದೇವಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಿದ ಉಕ್ರೇನ್‌: ಭಾರತೀಯ ಸಂಸ್ಕೃತಿ ಬಗ್ಗೆ ಗೌರವವಿದೆ ಎಂದು ಟ್ವೀಟ್‌

Published : May 02, 2023, 12:39 PM IST
ಕಾಳಿ ದೇವಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಿದ ಉಕ್ರೇನ್‌: ಭಾರತೀಯ ಸಂಸ್ಕೃತಿ ಬಗ್ಗೆ ಗೌರವವಿದೆ ಎಂದು ಟ್ವೀಟ್‌

ಸಾರಾಂಶ

ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವತೆಯನ್ನು ವಿಕೃತವಾಗಿ ಚಿತ್ರಿಸಿದ ನಂತರ ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಮಂಗಳವಾರ ಕ್ಷಮೆಯಾಚಿಸಿದ್ದಾರೆ.

ನವದೆಹಲಿ (ಮೇ 2, 2023): ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವತೆಯನ್ನು ವಿಕೃತವಾಗಿ ಚಿತ್ರಿಸಿತ್ತು. ಇದಕ್ಕೆ ಭಾರತೀಯರು ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತ ಉಕ್ರೇನ್‌ ಸರ್ಕಾರ ಭಾರತೀಯರ ಕ್ಷಮೆ ಕೇಳಿದೆ. ಅಲ್ಲದೆ, ಯುರೋಪ್‌ನ ರಾಷ್ಟ್ರ ವಿಶಿಷ್ಟವಾದ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆ" ಎಂದು ತಿಳಿಸಿದ್ದಾರೆ.

ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವತೆಯನ್ನು ವಿಕೃತವಾಗಿ ಚಿತ್ರಿಸಿದ ನಂತರ ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಮಂಗಳವಾರ ಕ್ಷಮೆಯಾಚಿಸಿದ್ದಾರೆ.  ರಕ್ಷಣಾ ಸಚಿವಾಲಯವು ಕಾಳಿ ದೇವಿಯನ್ನು "ವಿಕೃತ ರೀತಿಯಲ್ಲಿ" ಚಿತ್ರಿಸಿರುವುದನ್ನು ಉಕ್ರೇನ್ "ವಿಷಾದಿಸುತ್ತದೆ" ಮತ್ತು ಯುರೋಪಿಯನ್ ದೇಶವು "ವಿಶಿಷ್ಟ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಭಾರತದಿಂದ ಬೆಂಬಲವನ್ನು ಹೆಚ್ಚು ಪ್ರಶಂಸಿಸುತ್ತದೆ" ಎಂದು ಎಮಿನ್ ಝಪರೋವಾ ಟ್ವೀಟ್‌ ಮಾಡಿದ್ದಾರೆ. 

ಇದನ್ನು ಓದಿ: ಕಾಳಿ ದೇವತೆಗೆ ಅವಮಾನ ಮಾಡಿದ ಉಕ್ರೇನ್‌ ರಕ್ಷಣಾ ಇಲಾಖೆ, ಭಾರತೀಯರ ಕಿಡಿ!

ಉಕ್ರೇನ್‌ ರಕ್ಷಣಾ ಸಚಿವಾಲಯ ಮಾಡಿದ್ದ ಟ್ವೀಟ್‌ಗೆ ತೀವ್ರ ಆಕ್ರೋಶ ವ್ಯಕ್ತವಾದ 1 ದಿನದ ನಂತರ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ ರಕ್ಷಣಾ ಸಚಿವಾಲಯ ಕಾಳಿ ದೇವತೆಯನ್ನು ಮಾಡೆಲ್‌ ಮರ್ಲಿನ್‌ ಮನ್ರೋನಂತೆ ಚಿತ್ರಿಸಿ ಟ್ವೀಟ್‌ ಮಾಡಿತ್ತು. ಅಲ್ಲದೆ, ಸಂಪೂರ್ಣ ಹೊಗೆ ತುಂಬಿಕೊಂಡಿರುವ ಸ್ಫೋಟಕ್ಕೂ ಇದನ್ನು ಹೋಲಿಸಿತ್ತು. ಇದಕ್ಕೆ
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಅವರು ಈ ಚಿತ್ರ "ಹಿಂದೂ ಭಾವನೆಗಳ ಮೇಲಿನ ಆಕ್ರಮಣ" ಎಂದು ಹೇಳಿದ್ದರು. ಅಲ್ಲದೆ, ಉಕ್ರೇನ್‌ ಈ ಬಗ್ಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ ಅನೇಕ ನೆಟ್ಟಿಗರಲ್ಲಿ ಇವರೂ ಒಬ್ಬರಾಗಿದ್ದರು. 
 
ಭಾರತದಿಂದ ಸಹಾಯ ಕೇಳಿದ ಉಕ್ರೇನ್‌, ನಮ್ಮ ದೇಶದಲ್ಲಿ ಹೆಚ್ಚು ಪೂಜಿಸಲ್ಪಡುವ ದೇವಿಯನ್ನು  ಅವಮಾನಿಸುತ್ತಿದೆ ಎಂದು ಹಲವರು ಉಕ್ರೇನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಮಿನ್ ಝಪರೋವಾ ಭಾರತಕ್ಕೆ ಭೇಟಿ ನೀಡಿದ ಕೆಲವೇ ದಿನಗಳಲ್ಲಿ ರಕ್ಷಣಾ ಸಚಿವಾಲಯ ಈ ಟ್ವೀಟ್‌ ಮಾಡಿತ್ತು. ಸದ್ಯ, ಈ ಟ್ವೀಟ್‌ ಅನ್ನು ಅವರು ಡಿಲೀಟ್‌ ಮಾಡಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ  ಭಾರತಕ್ಕೆ ಭೇಟಿ ನೀಡಿದ ಮೊದಲ ಉನ್ನತ ಶ್ರೇಣಿಯ ಉಕ್ರೇನ್‌ ಅಧಿಕಾರಿ ಇವರೇ.

ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ಧದ ಪಾಪ: ಪುಟಿನ್‌ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ

ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಉಕ್ರೇನ್‌ನ ಉಪ ವಿದೇಶಾಂಗ ಸಚಿವರು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಭೇಟಿ ಮಾಡಿದ್ದರು ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಅವರು ಹಸ್ತಾಂತರ ಮಾಡಿದ್ದರು.  ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ಮಧ್ಯಸ್ಥಿಕೆಯನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಈ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: 400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!