ರಿಷಿ ಸುನಕ್‌ಗೆ 100 ಸಂಸದ ಬೆಂಬಲ, ಪ್ರಧಾನಿ ಪಟ್ಟಕ್ಕೇರಲು ಬೊರಿಸ್ ಜಾನ್ಸನ್ ಅಡ್ಡಿ!

Published : Oct 22, 2022, 06:33 PM IST
ರಿಷಿ ಸುನಕ್‌ಗೆ 100 ಸಂಸದ ಬೆಂಬಲ, ಪ್ರಧಾನಿ ಪಟ್ಟಕ್ಕೇರಲು ಬೊರಿಸ್ ಜಾನ್ಸನ್ ಅಡ್ಡಿ!

ಸಾರಾಂಶ

ಇನ್ಫೋಸಿಸ್ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಮತ್ತೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಇದೀಗ ಸುನಕ್‌ಗೆ ಬ್ರಿಟನ್ 100 ಸಂಸದರ ಬೆಂಬಲ ಸಿಕ್ಕಿದೆ.

ಲಂಡನ್(ಅ.22): ಬ್ರಿಟನ್ ಎರಡು ತಿಂಗಳಲ್ಲಿ ಮೂರನೇ ಪ್ರಧಾನಿಯನ್ನು ನೋಡಲಿದೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಹಾಗೂ ಲಿಜ್ ಟ್ರಸ್ ನಡುವೆ ಭಾರಿ ಪೈಪೋಟಿ ಎರ್ಪಟ್ಟಿತ್ತು. ಆದರೆ ಟ್ರಸ್ ಪ್ರಧಾನಿಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದರು. ಕೇವಲ 45 ದಿನದಲ್ಲೇ ಲಿಝ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಇದೀಗ ನೂತನ ಪ್ರಧಾನಿ ಯಾರು ಅನ್ನೋ ಹಗ್ಗಜಗ್ಗಾಟ ಶುರುವಾಗಿದೆ. ಮತ್ತೆ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿದೆ. ಇತ್ತ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ರೇಸ್‌ನಲ್ಲಿದ್ದಾರೆ. ಇದೀಗ ಸುನಕ್‌ಗೆ 100 ಸಂಸದರು ಬೆಂಬಲ ನೀಡಿದ್ದಾರೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ. ಆದರೆ ಸುನಕ್ ಹಾದಿ ಸುಗಮವಾಗಿಲ್ಲ. ಹಲವರು ಬೊರಿಸ್ ಜಾನ್ಸನ್ ಮತ್ತೆ ಪ್ರಧಾನಿಯಾಗಲಿ ಎಂದು ಬಯಸಿದ್ದಾರೆ.

ಪ್ರಧಾನಿ ಪಟ್ಟಕ್ಕೆ ನಾಮಪತ್ರ ಸಲ್ಲಿಸಲು ಕನಿಷ್ಠ 100 ಸಂಸದರ ಬೆಂಬಲ ಅಗತ್ಯವಿದೆ. ಇದು ರಿಷಿ ಸುನಕ್‌ಗೆ ಇದೆ. ಕನ್ಸರ್ವೇಟೀವ್ ಪಾರ್ಟಿಯ 357 ಸದಸ್ಯರ ಪೈಕಿ ಬೊರಿಸ್ ಜಾನ್ಸನ್ ಕೂಡ 100ಕ್ಕೂ ಹೆಚ್ಚು ಸಂಸದರ ಬೆಂಬಲ ಹೊಂದಿದ್ದಾರೆ. ಇದೀಗ ಇವರಿಬ್ಬರ ನಡುವೆ ಪ್ರಧಾನಿ ಪಟ್ಟಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 

ಸೂರ್ಯ ಮುಳುಗದ ನಾಡಿನಲ್ಲಿ ಕತ್ತಲು, 7 ವರ್ಷದಲ್ಲಿ 6ನೇ ಪ್ರಧಾನಿ ಆಯ್ಕೆಗೆ ಸಜ್ಜು!

ಪಕ್ಷಕ್ಕಾಗಿ ಈ ಬಾರಿ ಸ್ಥಾನ ಬಿಟ್ಟುಕೊಡಲು ರಿಷಿಗೆ ಕೇಳಿದ ಜಾನ್ಸನ್‌
2025ರಲ್ಲಿ ನಡೆಯುವ ಚುನಾವಣೆಯಲ್ಲೂ ಕನ್ಸರ್ವೇಟೀವ್‌ ಪಕ್ಷಕ್ಕೆ ಒಳಿತಾಗುವ ಫಲಿತಾಂಶ ಬರಬೇಕು ಎಂಬ ಕಾರಣದಿಂದ ಈ ಬಾರಿ ಪ್ರಧಾನಿ ಸ್ಥಾನವನ್ನು ನನಗಾಗಿ ತ್ಯಾಗ ಮಾಡುವಂತೆ ರಿಷಿ ಸುನಕ್‌ಗೆ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೇಳಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನಾನು ಮಾತ್ರ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಉಳಿಸಬಲ್ಲೆ ಎಂದು ಜಾನ್ಸನ್‌ ಹೇಳಿದ್ದಾರೆ. ಪ್ರಧಾನಿ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ ಬಳಿಕ ಇಸ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್‌ ಸೇರಿದಂತೆ ಹಲವರು ಪ್ರಧಾನಿ ರೇಸ್‌ನಲ್ಲಿದ್ದಾರೆ. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಸಹ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ ಇತಿಹಾಸದಲ್ಲೇ ಅಲ್ಪಾವಧಿ ಪ್ರಧಾನಿ

ಬ್ರಿಟನ್‌ ಪ್ರಧಾನಿ ಹುದ್ದೆಗೆ Liz Truss ರಾಜೀನಾಮೆ: ಮುಂದಿನ ಪ್ರಧಾನಿಯಾಗ್ತಾರಾ ಇನ್ಫಿ ಅಳಿಯ..?

- 28ರೊಳಗೆ ಲಿಸ್‌ ಟ್ರಸ್‌ ಉತ್ತರಾಧಿಕಾರಿ ಆಯ್ಕೆ
ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದು ಎಂದು ಟ್ರಸ್‌ ಹೇಳಿದ್ದು ಸ್ವಪಕ್ಷೀಯರ ಸಿಟ್ಟಿಗೆ ಕಾರಣವಾಗಿತ್ತು. ಹಣದುಬ್ಬರ ಕಡಿತಕ್ಕೆ ತೆರಿಗೆ ದರ ಇಳಿಸಿದ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಸಂಪುಟ ಸದಸ್ಯರೇ ಟ್ರಸ್‌ ವಿರುದ್ಧ ತಿರುಗಿಬಿದ್ದಿದ್ದರು. ಈ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.ಮತ್ತೊಂದೆಡೆ ದಿನೇ ದಿನೇ ಪೌಂಡ್‌ ಮೌಲ್ಯ ಕುಸಿಯತೊಡಗಿತ್ತು. ಹಣದುಬ್ಬರ 40 ವರ್ಷಗಳ ಗರಿಷ್ಠ ಮುಟ್ಟಿತ್ತು. ಇದು ಜನರು ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುವಂತೆ ಮಾಡಿತ್ತು. ಹೀಗಾಗಿ ಟೀಕೆಯಿಂದ ತಪ್ಪಿಸಿಕೊಳ್ಳಲು ಹಣಕಾಸು ಸಚಿವ ಕ್ವಾಸಿ ಕಾರ್ಟೆಂಗ್‌ ಅವರನ್ನು ಸಂಪುಟದಿಂದ ಟ್ರಸ್‌ ತೆಗೆದುಹಾಕಿದ್ದರು. ಇನ್ನು ಬುಧವಾರವಷ್ಟೇ ಭಾರತೀಯ ಮೂಲದ ಸಚಿವೆ ಸುಯೆಲ್ಲಾ ಕೂಡ ಕ್ಷುಲ್ಲಕ ಕಾರಣವೊಂದನ್ನು ಮುಂದಿಟ್ಟು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!