ಸ್ಮಾರ್ಟ್ ಕ್ಯಾಟ್‌: ಹೊಂಡಕ್ಕೆ ಬಿದ್ದ ಕೀಯನ್ನು ಸಾಹಸದಿಂದ ತೆಗೆದ ಮೀಯಾಂವ್‌

Published : Jul 07, 2022, 01:20 PM ISTUpdated : Jul 07, 2022, 01:33 PM IST
ಸ್ಮಾರ್ಟ್ ಕ್ಯಾಟ್‌: ಹೊಂಡಕ್ಕೆ ಬಿದ್ದ ಕೀಯನ್ನು ಸಾಹಸದಿಂದ ತೆಗೆದ ಮೀಯಾಂವ್‌

ಸಾರಾಂಶ

 ಬೆಕ್ಕು ತನ್ನ ಮಾಲೀಕರಿಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬೆಕ್ಕುಗಳು ಆಟವಾಡುವುದರಲ್ಲಿ ತುಂಬಾ ಸ್ಮಾರ್ಟ್, ಬೆಕ್ಕೊಂದು ಮನೆಯಲ್ಲಿದ್ದರೆ, ಮನೆಯವರ ಹಿಂದೆ ಮುಂದೆ ಸುತ್ತಾಡುತ್ತಾ ನೀವು ಎಲ್ಲಿ ಹೋಗುತ್ತಿರೋ ಅಲ್ಲೆಲ್ಲಾ ಬರುತ್ತಿರುತ್ತದೆ. ಕೂತರೆ ತೊಡೆ ಮೇಲೆ ಬಂದು ಮಲಗಿ ಬೆಚ್ಚನೆ ನಿದ್ದೆ ಮಾಡಲು ಬಯಸುವ ಬೆಕ್ಕು ಮನೆಯವರ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ. ಹಾಗೆಯೇ ಇಲ್ಲೊಂದು ಬೆಕ್ಕು ತನ್ನ ಮಾಲೀಕರಿಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮನೆಯವರ ಬೀಗ ಕೀಯೊಂದು ಅಂಗಳ ಪಕ್ಕದಲ್ಲಿರುವ ಕಾಂಪೌಂಡ್‌ನಲ್ಲಿರುವ ತೂತಿನೊಳಗೆ ಅಚಾನಕ್ ಆಗಿ ಬಿದ್ದು, ಹೋಗುತ್ತದೆ. ಮಹಿಳೆ ಎಷ್ಟೇ ಪ್ರಯತ್ನ ಮಾಡಿದರು ಈ ಕೀಯನ್ನು ಆ ತೂತಿನಿಂದ ಹೊರ ತರಲು ಸಾಧ್ಯವಾಗುವುದಿಲ್ಲ. ಈ ವೇಳೆ ಸಹಾಯ ಮಾಡುವ ಕರಿ ಬಣ್ಣದ ಬೆಕ್ಕು ಆ ತೂತಿನೊಳಗೆ ತನ್ನ ಕೈಯನ್ನು ಹಾಕಿ ಹಲವು ಬಾರಿ ಕೀಯನ್ನು ಹೊರಗೆ ತೆಗೆಯಲು ಪ್ರಯತ್ನಿಸುತ್ತದೆ. ಕೊನೆಯದಾಗಿ ಕೀಯನ್ನು ಮೇಲೆತ್ತುವಲ್ಲಿ ಬೆಕ್ಕು ಯಶಸ್ವಿಯಾಗುತ್ತದೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅನೇಕರು ಬೆಕ್ಕಿನ ಚಾಣಾಕ್ಷತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಲ್ಲಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಆಟವಾಡ್ತಿರುವ ಮಾರ್ಜಾಲ : ವಿಡಿಯೋ ವೈರಲ್

ಮಗು ಅಮ್ಮನ ಕೀಯನ್ನು ಬೀಳಿಸಿತ್ತು, ಆದರೆ ಬೆಕ್ಕು ಅದರ ರಕ್ಷಣೆಗೆ ಬಂತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆರಂಭದಲ್ಲಿ ಮಹಿಳೆ ಕೀಯನ್ನು ಹೊರತರಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ. ಆದರೆ ಅಲ್ಲೇ ಇದ್ದ ಬೆಕ್ಕು, ತನ್ನ ಕೈಯನ್ನು ಕೆಳಗಿಳಿಸಿ ನಿಧಾನವಾಗಿ ಕೀಯನ್ನು ಮೇಲೆತ್ತುತ್ತದೆ. ಈ ವಿಡಿಯೋ ಪೋಸ್ಟ್ ಆದಾಗಿನಿಂದ 20,000 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಬೆಕ್ಕಿಗೆ ಸ್ಪೆಷಲ್‌ ಟ್ರಿಟ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಈ ವಿಡಿಯೋವನ್ನು ರೆಕಾರ್ಡ್‌ ಮಾಡದೇ ಇದ್ದಲ್ಲಿ ಯಾರೊಬ್ಬರು ನಂಬುತ್ತಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 
ಮಾರ್ಜಾಲದ ಮಹಿಮೆ: ಬೆಕ್ಕೇ ಈ ಊರ ಗ್ರಾಮ ದೇವತೆ, ಗದ್ದುಗೆ ನಿರ್ಮಿಸಿ ಗ್ರಾಮಸ್ಥರ ಪೂಜೆ

ಬೆಕ್ಕೊಂದು ಮಲಗಿರುವ ಪುಟ್ಟ ಮಗುವಿನ ಬೆನ್ನ ಮೇಲೆ ನಿಂತು ಮಗುವಿಗೆ ತನ್ನ ಕೈಗಳಿಂದ ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ (viral)ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಹಾಲುಗಲ್ಲದ ಕೂಸನ್ನು ಹಾಸಿಗೆ ಮೇಲೆ ಮಲಗಿಸಲಾಗಿದೆ. ಪುಟ್ಟ ಮಗುವಿನ ಬೆನ್ನೇರುವ ಬೆಕ್ಕು ತನ್ನ ಕೈಗಳಿಂದ ಮಗುವಿನ ಬೆನ್ನಿಗೆ ಮಸಾಜ್ ಮಾಡುತ್ತದೆ.  ಡಚ್‌ನ ಪ್ರಾಣಿ ಪ್ರಿಯರೊಬ್ಬರು ಬಿಟಿಂಗ್‌ ಬಿಡ್ಡೆನ್‌ ಎಂಬ ತಮ್ಮ ಟ್ವಿಟ್ಟರ್‌ (Twitter) ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಸಾಜ್‌ ಟೈಮ್ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಮಗುವೂ (Baby) ಕೂಡ ಯಾವುದೇ ಅಂಜಿಕೆ ಭಯ ಇಲ್ಲದೇ ಬೆಕ್ಕಿನ ಮಸಾಜ್‌ನ್ನು ಆನಂದಿಸುತ್ತದೆ. ನನ್ನ ಬೆಕ್ಕು (cat) ಮಸಾಜ್ ಮಾಡುವುದನ್ನು ಇಷ್ಟ ಪಡುತ್ತದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅಲ್ಲದೇ ನಮ್ಮ ಬೆಕ್ಕು ಕೂಡ ಇದೇ ರೀತಿ ಮಾಡುತ್ತದೆ ಎಂದು ಕಾಮಂಟ್‌ಗಳಲ್ಲಿ ತಿಳಿಸಿದ್ದಾರೆ. ಪ್ರಾಣಿಗಳ (Animal) ಇಂತಹ ಸಾಕಷ್ಟು ವಿಡಿಯೋಗಳು (video) ಸಾಮಾಜಿಕ ಜಾಲತಾಣಗಳಲ್ಲಿವೆ. ಇವು ನೋಡುಗರ ಮೂಡನ್ನು ಬದಲಾಯಿಸುವುದಲ್ಲದೇ ಖುಷಿ ನೀಡುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ