ಈ ಶಾಲೆಯ 1ನೇ ಕ್ಲಾಸ್‌ಗೆ ಸೇರಿದ್ರು 17 ಸೆಟ್ ಅವಳಿ ಮಕ್ಕಳು: ಟ್ವಿನ್‌ಗಳಿಂದಲೇ ದಾಖಲೆ ಬರೆದ ಶಾಲೆ

By Anusha Kb  |  First Published Aug 15, 2023, 2:45 PM IST

ಈ ಶಾಲೆಯೊಂದರ ಒಂದನೇ ತರಗತಿಗೆ 17 ಜೊತೆ ಅವಳಿ ಮಕ್ಕಳು ಸೇರಿದ್ದು ಈ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.


ಸ್ಕಾಟ್ಲೆಂಡ್: ಅವಳಿಗಳ ಲೋಕವೇ ಒಂದು ಅದ್ಬುತ ಅವಳಿ ಮಕ್ಕಳಿಗೆ ಎಲ್ಲವೂ ಒಂದೇ ರೀತಿ ಇರಬೇಕು ಎಲ್ಲವನ್ನು ಅವರು ಒಟ್ಟೊಟ್ಟಿಗೆ ಮಾಡುತ್ತಾರೆ ಎಂಬ ನಂವಿಕೆಗಳಿವೆ. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಈ ಅವಳಿಗಳು ಎರಡು ದೇಹ ಒಂದು ಜೀವವಿದ್ದಂತೆ. ಸಾಮಾನ್ಯವಾಗಿ ಒಂದು ಶಾಲೆಯಲ್ಲಿ ಒಂದು ಜೊತೆ ಅವಳಿ ಅಥವಾ ಊರಿನ ಒಂದು ಕುಟುಂಬದಲ್ಲಿ ಒಂದು ಜೊತೆ ಅವಳಿಗಳು ಹೀಗೆ ವಿರಳವಾಗಿ ಅವಳಿಗಳು ಕಾಣ ಸಿಗುತ್ತಾರೆ. ಆದರೆ ಈ ಶಾಲೆಯೊಂದರ ಒಂದನೇ ತರಗತಿಗೆ 17 ಜೊತೆ ಅವಳಿ ಮಕ್ಕಳು ಸೇರಿದ್ದು ಈ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಅಂದಹಾಗೆ ಈ 17 ಸೆಟ್‌ ಅವಳಿಗಳು ಒಟ್ಟಿಗೆ ಶಾಲೆ ಸೇರಿರುವುದು ಸ್ಕಾಟ್ಲೆಂಡ್‌ನ ಶಾಲೆಯೊಂದರಲ್ಲಿ,  ಇಲ್ಲಿನ ಇನ್ವರ್‌ಕ್ಲೈಡ್ ಪ್ರದೇಶದ ಶಾಲೆಯೊಂದರಲ್ಲಿ  ಪ್ರತಿವರ್ಷವೂ ಅವಳಿ ಮಕ್ಕಳು ದಾಖಲಾಗುವ ಮೂಲಕ ಈ ಶಾಲೆ ದಾಖಲೆ ನಿರ್ಮಿಸಿದೆ. ಆದರೆ ಈ ಬಾರಿ ಬರೋಬ್ಬರಿ 17 ಸೆಟ್ ಅವಳಿಗಳು ಶಾಲೆ ಸೇರುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇಲ್ಲಿ ಈಗಾಗಲೇ 147 ಸೆಟ್‌ ಅವಳಿಗಳು ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದು, ಈ 17 ಸೆಟ್‌ ಅವಳಿಗಳು ಆ ಲಿಸ್ಟ್‌ಗೆ ಹೊಸ ಸೇರ್ಪಡೆಯಾಗಿದೆ. ಈ ಮೂಲಕ ಅತೀ ಹೆಚ್ಚು ಅವಳಿಗಳನ್ನು ಹೊಂದಿರುವ ಶಾಲೆಯಾಗಿ ಇದು ಹೊರ ಹೊಮ್ಮಿದೆ. 

Tap to resize

Latest Videos

undefined

ಒಬ್ಬರಲ್ಲ ನಾವೀಗ ಇಬ್ಬರು: ಸಯಾಮಿ ಅವಳಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಏಮ್ಸ್ ಆಸ್ಪತ್ರೆ

ದಿ ಮೆಟ್ರೋ ವರದಿ ಪ್ರಕಾರ,  2015ರಲ್ಲಿ 19 ಅವಳಿಗಳನ್ನು ಶಾಲೆಗೆ ದಾಖಲೀಕರಿಸಿಕೊಳ್ಳುವ ಮೂಲಕ ಈ ಶಾಲೆ ದಾಖಲೆ ನಿರ್ಮಿಸಿತ್ತು.  ಹೀಗೆ ಅತೀ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಈ ಶಾಲೆಯ ಸೇಂಟ್ ಪ್ಯಾಟ್ರಿಕ್ಸ್ ಫ್ರೈಮರಿ ಸ್ಕೂಲ್, ತಮ್ಮ ಶಾಲಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ 17ರಲ್ಲಿ 15 ಅವಳಿ ಜೋಡಿಗಳು ಒಟ್ಟಾಗಿದ್ದು ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   ಇನ್ವರ್‌ಕ್ಲೈಡ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವ  ಸೇಂಟ್ ಪ್ಯಾಟ್ರಿಕ್ ಶಾಲೆ ಹಾಗೂ ಅರ್ಡಗೋವನ್ ಪ್ರೈಮರಿ ಶಾಲೆ  ಪ್ರತಿವರ್ಷವೂ ವಿಶಿಷ್ಟ ಸಂಖ್ಯೆಯ ಅಳಿಗಳನ್ನು ಸ್ವಾಗತಿಸುತ್ತದೆ. ಹೀಗಾಗಿ ಇಲ್ಲಿ ಅವಳಿ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸುವ ಪದ್ಧತಿಯೊಂದು ಜಾರಿಗೆ ಬಂದಿದೆ.  ಅಲ್ಲದೇ  ಇನ್ವರ್‌ಕ್ಲೈಡ್ ಅನ್ನು ಈಗ ಜನ ಟ್ವಿನರ್‌ಕ್ಲೇಡ್ ಎಂದು ಕೂಡ ಕರೆಯಲಾಗುತ್ತಿದೆ. 

ನಮ್ಮ ಅವಳಿಗಳನ್ನು ಸ್ವಾಗತಿಸಲು  ಇನ್ವರ್ಕ್ಲೈಡ್ ಅಥವಾ ಟ್ವಿನ್ವಕ್ಲೈರ್ಡ್‌ನಲ್ಲಿ ಪ್ರತಿ ವರ್ಷ ವಾರ್ಷಿಕವಾಗಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಗ್ರೇಮ್ ಬ್ರೂಕ್ ಅವರು ಹೇಳಿದ್ದಾರೆ.  ಮುಂದಿನ ವಾರ ಹೊಸ ಬ್ಯಾಚ್‌ ಮೊದಲನೇ ತರಗತಿಗೆ ಆಗಮಿಸಲಿದ್ದು, ಅವಳಿಗಳ ಆಗಮನದಿಂದ ಇಲ್ಲಿ ಉತ್ಸಾಹ ಹೆಚ್ಚಾಗಿದೆ. ಅವರನ್ನು ಶಾಲಾ ಸಮವಸ್ತ್ರದಲ್ಲಿ ನೋಡುವುದಕ್ಕೆ ಕಾತುರದಿಂದ ಕಾಯಲಾಗುತ್ತಿದೆ. ಇದು ಮಕ್ಕಳ ಪೋಷಕರಿಗೂ ಖುಷಿಯ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.  

ಅಪ್ಪಂದಿರ ದಿನ: ಅಮ್ಮನಿಲ್ಲದೇ ಅವಳಿ ಮಕ್ಕಳಿಗೆ ಅಪ್ಪನಾದ ಅವಿವಾಹಿತ ಯುವಕನ ಕತೆ

ಈ ಹಿಂದೆ ಕೇರಳದ ಕೊಂಡಿನಿ ಗ್ರಾಮ ಅತೀ ಹೆಚ್ಚು ಅವಳಿಗಳನ್ನು ಹೊಂದಿರುವ ಗ್ರಾಮ ಎಂಬ ಕಾರಣಕ್ಕೆ ಸುದ್ದಿಯಾಗಿತ್ತು. ಇಲ್ಲಿ ಸುಮಾರು 550 ಅವಳಿ ಮಕ್ಕಳಿದ್ದಾರೆ. ಇಲ್ಲಿ ಆಗುವ  ಪ್ರತಿ ಸಾವಿರ ಹೆರಿಗೆಯಲ್ಲಿ 40 ಹೆರಿಗೆಗಳು ಅವಳಿ ಮಕ್ಕಳಿಗೆ ಜನ್ಮ ನೀಡುತ್ತವೆ.

click me!