Omcricon ಆತಂಕ, ವಿಶೇಷ ಲಸಿಕೆ ತಯಾರಿಸುತ್ತಿದೆ ಅಮೆರಿಕ, ಜನವರಿಯಿಂದ ಲಭ್ಯ ಸಾಧ್ಯತೆ!

By Suvarna NewsFirst Published Dec 3, 2021, 7:28 AM IST
Highlights

* ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ 

* ವಿಶ್ವಾದ್ಯಂತ ಆತಂಕ ಮೂಡಿಸಿರುವ ಒಮಿಕ್ರಾನ್‌

* ಒಮಿಕ್ರಾನ್ ವಿರೋಧಿ ಲಸಿಕೆ ತಯಾರಿಸಲು ಅಮೆರಿಕದ ಕಂಪನಿ ಸಜ್ಜು

ವಾಷಿಂಗ್ಟನ್(ಡಿ.03): ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ (Omicron) ಪ್ರಪಂಚದಾದ್ಯಂತ ಹರಡುತ್ತಿದೆ. ಇದರ ರೋಗಿಗಳು ಭಾರತದಲ್ಲಿಯೂ ಕಂಡುಬಂದಿದ್ದಾರೆ. ಕೊರೋನಾ ವೈರಸ್‌ನ (Coronavirus) ಸ್ಪೈಕ್ ಪ್ರೋಟೀನ್ ಒಮಿಕ್ರಾನ್ ರೂಪಾಂತರದಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಉಂಟುಮಾಡಿದೆ. ಈ ಕಾರಣದಿಂದಾಗಿ, ಪ್ರಸ್ತುತ ಬಳಸುತ್ತಿರುವ ಕೊರೋನಾ ಲಸಿಕೆಗಳು (Vaccines) ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಕೊರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡವರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ.

ಲಸಿಕೆ ಕಡಿಮೆ ಪರಿಣಾಮಕಾರಿಯಾಗಲು ಕಾರಣವೆಂದರೆ ಹೊಸ ತಳಿಯ ಸ್ಪೈಕ್ ಪ್ರೋಟೀನ್‌ನಲ್ಲಿನ ರೂಪಾಂತರ. ಕೊರೋನಾದ ಮೊದಲ ರೂಪಾಂತರದ ಸ್ಪೈಕ್ ಪ್ರೊಟೀನ್ ಆಧಾರಿತ ಲಸಿಕೆ ಹೊಸ ರೂಪಾಂತರದಲ್ಲಿ ಎಷ್ಟು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತಿದೆ ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ. ಏತನ್ಮಧ್ಯೆ, ಕೊರೋನಾ ಲಸಿಕೆಯನ್ನು ತಯಾರಿಸುವ ಯುಎಸ್ ಕಂಪನಿ ನೊವಾವ್ಯಾಕ್ಸ್ (Novax), ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡಲು ನಿರ್ದಿಷ್ಟವಾಗಿ ಲಸಿಕೆಯನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಇದರ ಉತ್ಪಾದನೆಯು ಜನವರಿ 2022 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಜನವರಿಯಿಂದ ಉತ್ಪಾದನೆ ಆರಂಭವಾಗಬಹುದು

Novavax ಕಂಪನಿಯು ಮುಂದಿನ ವರ್ಷದ ಜನವರಿಯಿಂದ Omicron ರೂಪಾಂತರದ ವಿರುದ್ಧ ಲಸಿಕೆಯ ವಾಣಿಜ್ಯ ತಯಾರಿಕೆಯನ್ನು ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. Omicron ರೂಪಾಂತರದ ದೃಷ್ಟಿಯಿಂದ, ಕಂಪನಿಯು ಈ ಲಸಿಕೆಯನ್ನು ವಿಶೇಷವಾಗಿ ತಯಾರಿಸಿದೆ. ಇನ್ನೆರಡು ತಿಂಗಳಲ್ಲಿ ಉತ್ಪಾದನೆ ಆರಂಭವಾಗಲಿದೆ. Novavax ನ ಅಸ್ತಿತ್ವದಲ್ಲಿರುವ ಲಸಿಕೆ ಓಮಿಕ್ರಾನ್ ರೂಪಾಂತರಗಳ ವಿರುದ್ಧ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದರ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಇನ್ನು ಕೆಲವೇ ವಾರಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.

ಒಮಿಕ್ರಾನ್ ರೂಪಾಂತರಗಳ ಸೋಂಕು ಹೆಚ್ಚಾದಂತೆ, ಅಮೆರಿಕ, ಬ್ರಿಟನ್ ಮತ್ತು ಇತರ ದೇಶಗಳು ತಮ್ಮ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ತೀವ್ರಗೊಳಿಸಿವೆ ಎಂಬುವುದು ಉಲ್ಲೇಖನೀಯ. ಯುಎಸ್ ಅಧ್ಯಕ್ಷ ಜೋ ಬೈಡನ್ ಸಾಮೂಹಿಕ ವ್ಯಾಕ್ಸಿನೇಷನ್ ಪ್ರಾರಂಭವನ್ನು ಘೋಷಿಸಿದ್ದಾರೆ. ಅದೇ ಸಮಯದಲ್ಲಿ, ಯುಕೆ ಸರ್ಕಾರವು ಫೈಜರ್-ಬಯೋಎನ್‌ಟೆಕ್ ಮತ್ತು ಮಾಡೆರ್ನಾದಿಂದ 114 ಮಿಲಿಯನ್ ಲಸಿಕೆ ಡೋಸ್‌ಗಳನ್ನು ಖರೀದಿಸುವುದಾಗಿ ಘೋಷಿಸಿದೆ. ಮಾಡೆರ್ನಾದಿಂದ 6 ಕೋಟಿ ಶಾಟ್‌ಗಳನ್ನು ಮತ್ತು ಫೈಜರ್-ಬಯೋಎನ್‌ಟೆಕ್‌ನಿಂದ 54 ಮಿಲಿಯನ್ ಶಾಟ್‌ಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ. ಇನ್ನೆರಡು ತಿಂಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮೂರನೇ ಡೋಸ್ ನೀಡಲಾಗುತ್ತದೆ. 

ಕರುನಾಡಿನ ಮೂಲಕ ಭಾರತಕ್ಕೆ ವಕ್ಕರಿಸಿದ ಒಮಿಕ್ರಾನ್

ಕೊರೋನಾ ಮೊದಲ ಹಾಗೂ ಎರಡನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ ಮತ್ತೊಂದು ಅಲೆ ದಾಳಿ ಇಡುವ ಸಾಧ್ಯತೆ ಕಂಡು ಬಂದಿದೆ. ಹೌದು ದಕ್ಷಿಣ ಆಫ್ರಿಕಾದಿಂದ ಬಂದ ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ (Omicron) ಪತ್ತೆಯಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯವು (Union Health Ministry) ಸುಮಾರು 29 ದೇಶಗಳಲ್ಲಿ ಇಲ್ಲಿಯವರೆಗೆ 373 ಒಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ವರದಿಯಾಗುವೆ ಎಂದು ಹೇಳಿದರು.

"ಆರೋಗ್ಯ ಸಚಿವಾಲಯ ಸ್ಥಾಪಿಸಿದ 37 ಪ್ರಯೋಗಾಲಯಗಳ INSACOG ಒಕ್ಕೂಟದ ಜೀನೋಮ್ ಅನುಕ್ರಮ (Genome sequencing effort of INSACOG consortium) ಪ್ರಯತ್ನದ ಮೂಲಕ" ಲಭ್ಯವಾದ ವರದಿಯನ್ವಯ ವಿದೇಶದಿಂದ ಆಗಮಿಸಿದ ಕರ್ನಾಟಕದ ಇಬ್ಬರು ಪುರುಷರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಎರಡು ಪ್ರಕರಣಗಳು" ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

45 ವರ್ಷದ ಓರ್ವ ಹಾಗೂ 66 ವರ್ಷದ ಓರ್ವ ವೃದ್ಧನಿಗೆ ಈ ಸೋಂಕು ಕಾಣಿಸಿಕೊಂಡಿದೆ. ಎರಡೂ ಓಮಿಕ್ರಾನ್ ಪ್ರಕರಣಗಳ ಪ್ರಾಥಮಿಕ, ದ್ವಿತೀಯಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ಇದೇ ವೇಳೆ ಜನರು ಭಯಭೀತರಾಗದಂತೆ ಮನವಿ ಮಾಡಿಕೊಂಡಿರುವ ಕೇಂದ್ರ, ಕೊರೋನಾ ತಡೆಗಟ್ಟಲು ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. 

 

click me!