
ಬರ್ಲಿನ್: ಜರ್ಮನ್ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅಲ್ಲಿ ತಮಿಳುನಾಡಿನ ಹೊಸೂರು ಘಟಕದಿಂದ ನಿರ್ಮಾಣವಾಗಿರುವ ಟಿವಿಎಸ್ 450 ಸಿಸಿ ಬೈಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಭಾರತದ ಧ್ವಜ ಹಾರುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹರ್ಷಿಸಿದ್ದಾರೆ.
ರಾಹುಲ್ ಮ್ಯೂನಿಕ್‌ನಲ್ಲಿರುವ ಬಿಎಂಡಬ್ಲ್ಯೂ ಸ್ಥಾವರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿ ಅವರು ತಮಿಳುನಾಡಿನ ಹೊಸೂರಿನ ಘಟಕದಲ್ಲಿ ಟಿವಿಎಸ್ ಸಹಯೋಗದೊಂದಿಗೆ ಸಿದ್ಧವಾಗಿರುವ ಬಿಎಂಡಬ್ಲ್ಯು ಜಿ450ಜಿಎಸ್ ಬೈಕ್ ಕಂಡು ಖುಷಿ ಪಟ್ಟಿದ್ದು, ತಾವು ಬೈಕ್ ಮೇಲೆ ಕುಳಿತು ಫೋಟೋಗಳನ್ನು ಕ್ಲಿಕ್ಕಿಸಿದರು. ಆದರೆ ಈ ಬೈಕ್ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ.
ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ರಾಹುಲ್, ‘ಇದೊಂದು ಅದ್ಭುತ ಅನುಭವ. ಜರ್ಮನಿಯಲ್ಲಿ ಟಿವಿಎಸ್‌ನ 450 ಸಿಸಿ ಬೈಕ್ ನೋಡಿ ಖುಷಿಯಾಗಿದ್ದೇನೆ. ಇಲ್ಲಿ ಭಾರತದ ಧ್ವಜ ಹಾರುತ್ತಿರುವುದು ನೋಡಿ ಸಂತೋಷವಾಗಿದೆ. ದೇಶದ ಎಂಜಿನಿಯರ್‌ಗಳ ಕೌಶಲ್ಯಗಳನ್ನು ನೋಡಲು ಇದೊಂದು ಹೆಮ್ಮೆಯ ಕ್ಷಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಭಾರತದಲ್ಲಿ ವಾಹನ ಉತ್ಪಾದನೆ ಕುಂಠಿತವಾಗಿದೆ. ಅದನ್ನು ಹೆಚ್ಚಿಸಬೇಕು ಎಂದೂ ಹೇಳಿದರು.
ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಡತಗಳು ಇರುವ 51 ಪೆಟ್ಟಿಗೆಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈವರೆಗೂ ಸರ್ಕಾರಕ್ಕೆ ಹಸ್ತಾಂತರಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಆರೋಪಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ (ಪಿಎಂಎಂಎಲ್) ಇವನ್ನು ಸೋನಿಯಾ ಹಿಂದಿರುಗಿಸಿದರೆ, ಈ ಐತಿಹಾಸಿಕ ದಾಖಲೆಗಳನ್ನು ವಿದ್ವಾಂಸರು, ಜನರು ನೋಡಬಹುದು. ಇವು ಸಾರ್ವಜನಿಕ ಆಸ್ತಿಯಾಗಿದ್ದು, ಮುಚ್ಚಿಡಬಾರದು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ