‘ಬ್ರಹ್ಮ’ನ ಹೆಸರಲ್ಲಿ ಬಿಯರ್‌: ಜಾಹೀರಾತಿನಲ್ಲಿ ಬಿಕಿನಿಧಾರಿಣಿ!

By Suvarna News  |  First Published Jul 7, 2020, 12:39 PM IST

‘ಬ್ರಹ್ಮ’ನ ಹೆಸರಲ್ಲಿ ಬಿಯರ್‌: ಆಕ್ರೋಶ| ಬಿಯರ್‌ ಜಾಹೀರಾತಿನಲ್ಲಿ ಬಿಕಿನಿಧಾರಿಣಿ!| ಬಿಯರ್‌ ಹಾಗೂ ಜಾಹೀರಾತನ್ನು ಹಿಂಪಡೆಯಲು ಕ್ರಮ ಜರುಗಿಸುವಂತೆ ಒತ್ತಾಯ


ಬ್ರಸೆಲ್ಸ್‌(ಜು.07): ಬೆಲ್ಜಿಯಂನಲ್ಲಿ ‘ಬ್ರಹ್ಮ’ ಹೆಸರಿನ ಬಿಯರ್‌ ಬಿಡುಗಡೆ ಆಗಿರುವುದು ಹಾಗೂ ಈ ಬಿಯರ್‌ ಜಾಹೀರಾತಿನಲ್ಲಿ ನಿತಂಬ ಕಾಣಿಸುವಂತೆ ನಿಂತ ಯುವತಿಯೊಬ್ಬಳು ಪೋಸ್‌ ಕೊಡುತ್ತಿರುವುದು ಹಿಂದೂ ಧರ್ಮೀಯರನ್ನು ಕೆರಳಿಸಿದೆ.

ಈ ಹೆಸರಿನ ಬಿಯರ್‌ ಹಾಗೂ ಜಾಹೀರಾತನ್ನು ಹಿಂಪಡೆಯಲು ಕ್ರಮ ಜರುಗಿಸಬೇಕು ಎಂದು ಹಿಂದೂ ಸಂಘಟನೆಗಳು ಬೆಲ್ಜಿಯಂ ಸರ್ಕಾರವನ್ನು ಹಾಗೂ ಉತ್ಪಾದಕ ಕಂಪನಿಯನ್ನು ಒತ್ತಾಯಿಸಿವೆ. ‘ಆನ್ಹೆಯೂಸರ್‌-ಬುಶ್‌ ಇನ್‌ ಬೆವ್‌’ ಎಂಬುದು ವಿಶ್ವದ ಅತಿ ದೊಡ್ಡ ಬಿಯರ್‌ ಉತ್ಪಾದಕ ಕಂಪನಿ ಆಗಿದ್ದು, ತನ್ನ ಹೊಸ ಬಿಯರ್‌ ಬ್ರ್ಯಾಂಡ್‌ಗೆ ‘ಬ್ರಹ್ಮ’ ಎಂದು ಹೆಸರಿಟ್ಟಿದೆ.

Tap to resize

Latest Videos

undefined

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

‘ಬ್ರಹ್ಮ’ ಬಿಯರ್‌ ಜಾಹೀರಾತಿನಲ್ಲಿ ಹಾಲಿವುಡ್‌ ಸೆಲೆಬ್ರಿಟಿಗಳಾದ ಮೇಗನ್‌ ಫಾಕ್ಸ್‌ ಹಾಗೂ ಜೆನ್ನಿಫರ್‌ ಲೋಪೆಜ್‌ ಕೂಡ ನಟಿಸಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಯುನಿವರ್ಸಲ್‌ ಸೊಸೈಟಿ ಆಫ್‌ ಹಿಂದುಯಿಸಂ ಸಂಸ್ಥೆಯ ಅಧ್ಯಕ್ಷ ರಾಜನ್‌ ಝೇಡ್‌ ಆಕ್ಷೇಪಿಸಿದ್ದಾರೆ. ‘ಮದ್ಯವೊಂದಕ್ಕೆ ಬ್ರಹ್ಮ ದೇವರ ಹೆಸರಿಟ್ಟಿದ್ದು ಖಂಡನಾರ್ಹ. ಬಿಯರ್‌ ಕಂಪನಿಯು ಧಾರ್ಮಿಕ ಭಾವನೆಗಳ ಜತೆ ಚೆಲ್ಲಾಟವಾಡಬಾರದು. ಜಾಹೀರಾತಿನಲ್ಲಿ ಹಿಂದೂ ದೇವರು, ಧರ್ಮದ ಸಂಕೇತ ಇತ್ಯಾದಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ’ ಎಂದಿದ್ದಾರೆ.

click me!