ಸೊಮಾಲಿಯಾದಲ್ಲಿ ಭೀಕರ ಟ್ರಕ್ ಬಾಂಬ್ ಸ್ಫೋಟ: 76 ಸಾವು!

Suvarna News   | others
Published : Dec 28, 2019, 07:50 PM IST
ಸೊಮಾಲಿಯಾದಲ್ಲಿ ಭೀಕರ ಟ್ರಕ್ ಬಾಂಬ್ ಸ್ಫೋಟ: 76 ಸಾವು!

ಸಾರಾಂಶ

ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ಭೀಕರ ಟ್ರಕ್ ಬಾಂಬ್ ಸ್ಫೋಟ| ಕನಿಷ್ಠ 76 ಜನರ ಸಾವು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ| ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿ ಉಗ್ರರಿಂದ ಆತ್ಮಹತ್ಯಾ ಬಾಂಬ್ ದಾಳಿ| 

ಮೊಗದಿಶು(ಡಿ.28): ಸೊಮಾಲಿಯಾ ರಾಜಧಾನಿ ಮೊಗದಿಶುನ ಹೊರವಲಯದಲ್ಲಿ ಉಗ್ರರು ಟ್ರಕ್ ಬಾಂಬ್ ಸ್ಫೋಟಿಸಿದ್ದು, ಕನಿಷ್ಟ 76 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.  

ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿರುವ ಭದ್ರತಾ ತಪಾಸಣಾ ಕೇಂದ್ರದ ಸಮೀಪ ಆತ್ಮಾಹುತಿ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 76 ಮಂದಿ ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಇಸ್ಮಾಯಿಲ್ ಮುಖ್ತಾರ್ ಸ್ಪಷ್ಟಪಡಿಸಿದ್ದಾರೆ.

ಸುಡಾನ್‌ ಫ್ಯಾಕ್ಟರಿಯಲ್ಲಿ ಸ್ಫೋಟ: 18 ಭಾರತೀಯರು ಸೇರಿ 23 ಜನರ ದುರ್ಮರಣ!

ದಾಳಿಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಇದುವರೆಗೆ 76 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಯೂಸಫ್ ಮಾಹಿತಿ ನೀಡಿದ್ದಾರೆ.

ಕಳೆದ ಡಿ. 10ರಂದು ಮೊಗದಿಶು ನಗರದ ಪ್ರಸಿದ್ಧ ಶಬಾಬ್ ಹೋಟೆಲ್ ಅನ್ನು ಉಗ್ರರು ಸ್ಫೋಟಿಸಿದ್ದರು. ಈ ಘಟನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ