ಬ್ರಿಟನ್‌ ಸಂಪುಟದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿಗೆ ಉನ್ನತ ಸಚಿವ ಹುದ್ದೆ?

By Suvarna NewsFirst Published Dec 26, 2019, 1:49 PM IST
Highlights

ಬ್ರಿಟನ್‌ ಸಂಪುಟದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿಗೆ ಉನ್ನತ ಸಚಿವ ಹುದ್ದೆ?| ಪ್ರಧಾನಿ ಜಾನ್ಸನ್‌ರ ಅತ್ಯಾಪ್ತರಾಗಿರುವ ರಿಷಿ

ಲಂಡನ್‌[ಡಿ.26]: ಇತ್ತೀಚೆಗೆ ಬ್ರಿಟನ್‌ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬೋರಿಸ್‌ ಜಾನ್ಸನ್‌ ನೇತೃತ್ವದ ಸಚಿವ ಸಂಪುಟದಲ್ಲಿ, ಇಸ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ.

ಪ್ರಧಾನಿ ಜಾನ್ಸನ್‌ರ ಅತ್ಯಾಪ್ತರಾಗಿರುವ ರಿಷಿ, ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಜೊತೆಗೆ ಬ್ರಿಟನ್‌ ಬಹುವಾಗಿ ನಿರೀಕ್ಷಿಸುತ್ತಿರುವ ಬ್ರೆಕ್ಸಿಟ್‌ ಪರ ರಿಷಿ ಪ್ರಬಲ ನಿಲುವು ಹೊಂದಿದ್ದಾರೆ. ಜೊತೆಗೆ ಹಿಂದಿನ ಸಂಪುಟದಲ್ಲಿ ಹಣಕಾಸು ಸಚಿವಾಲಯದ ಕಿರಿಯ ಸಚಿವರಾಗಿಯೂ ರಿಷಿ ಗಮನ ಸೆಳೆದಿದ್ದಾರೆ.

ಹೀಗಾಗಿ ಈ ಬಾರಿ ಅವರಿಗೆ ಪೂರ್ಣ ಪ್ರಮಾಣದ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನಮಾನ ನೀಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಹಲವಾರು ವಿಭಾಗಗಳನ್ನು ಹೊಂದಿರುವ ಹಣಕಾಸು ಖಾತೆಯ ಮುಖ್ಯ ಸಚಿವರಾಗಿಯೇ ರಿಷಯ ನೇಮಕವಾಗು ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಮುಂದಿನ ಫೆಬ್ರವರಿಯಲ್ಲಿ ಸಚಿವ ಸಂಪುಟ ಪುನಾರಚಿಸಲಾಗುತ್ತಿದ್ದು, ಈ ವೇಳೆ ರಿಷಿಗೆ ಶುಭ ಸುದ್ದಿ ನೀಡಲಾಗುವುದು ಎನ್ನಲಾಗಿದೆ.

click me!