
ಹೊಟೆಲ್‌ನಲ್ಲಿ ತಂಗುವ ಮೊದಲು ಬಹುತೇಕರು ಹೊಟೆಲ್ ರೂಂ ಶುಚಿತ್ವ, ವಿಸ್ತೀರ್ಣ, ವಾಶ್ ರೂಂ, ಫ್ರೆಶ್ ಟವೆಲ್, ಹೊದಿಕೆ ಸೇರಿದಂತೆ ಎಲ್ಲವನ್ನೂ ಪರಿಶೀಲಿಸುತ್ತಾರೆ. ಇವೆಲ್ಲವೂ ಉತ್ತಮವಾಗಿದ್ದರೆ ಮಾತ್ರ ಹೊಟೆಲ್‌ನಲ್ಲಿ ತಂಗಲು ಮನಸು ಮಾಡುತ್ತಾರೆ. ಆದರೆ ಟ್ರಾವೆಲ್ ಇನ್‌ಫ್ಲುಯೆನ್ಸರ್ ಮಾಡಿದ ವಿಡಿಯೋ ಒಂದು ಇದೀಗ ಹೊಟೆಲ್ ರೂಂನಲ್ಲಿ ತಂಗಿದರೂ ಅಲ್ಲಿನ ವಸ್ತುಗಳನ್ನು ಬಳಕೆ ಮಾಡಲು ಹಿಂದೇಟು ಹಾಕುವಂತೆ ಮಾಡಿದೆ. ಈ ಮಹಿಳಾ ಟ್ರಾವೆಲ್ ಇನ್‌ಪ್ಲುಯೆನ್ಸರ್ ತನ್ನ ಅಂಡರ್‌ವೇರ್‌ನ್ನು ಹೊಟೆಲ್ ಕಾಫಿ ಮೇಕರ್‌ನಲ್ಲಿ ತೊಳೆದು ಧರಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದರೆ. ಈ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಹೊಟೆಲ್‌ನಲ್ಲಿನ ಕಾಫಿ ಮೇಕರ್ ಸೇರಿದಂತೆ ಇತರ ವಸ್ತುಗಳ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
@HustleBitch ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತು ವಿಡಿಯೋ ಪೋಸ್ಟ್ ಮಾಡಲಾಗಿದೆ. ಟ್ರಾವೆಲ್ ಇನ್‌ಫ್ಲುಯೆನ್ಸರ್ ತನ್ನ ಒಳ ಉಡುಪು ಕಾಫಿ ಮೇಕರ್‌ನಲ್ಲಿ ಶುಚಿಗೊಳಿಸಿ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ. ಈಕೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋದಲ್ಲಿರುವ ಮಹಿಳಾ ಇನ್‌ಫ್ಲುಯೆನ್ಸರ್ ತನ್ನ ಪ್ರವಾಸದ ವೇಳೆ ಈ ರೀತಿ ಮಾಡಿದ್ದಾಳೆ. ಇಷ್ಟೇ ಅಲ್ಲ ನೀವೂ ಪ್ರವಾಸದ ವೇಳೆ ಅಂಡರ್‌ವೇರ್ ಹೆಚ್ಚು ತಂದಿಲ್ಲದಿದ್ದರೆ ಈ ರೀತಿ ಮಾಡಿ ಬಳಸಿ ಎಂದು ಸಲಹೆ ನೀಡಿದ್ದಾಳೆ.
ಹೊಟೆಲ್ ರೂಂನಲ್ಲಿ ತಂಗಿದ ಈ ಇನ್‌ಫ್ಲುಯೆನ್ಸರ್ ಇತರರಿಗೆ ತಾನು ಅಂಡರ್‌ವೇರ್ ಕ್ಲೀನ್ ಮಾಡಿದ್ದು ಹೇಗೆ, ನೀವು ಏನು ಮಾಡಬೇಕು ಎಂದು ಟಿಪ್ಸ್ ನೀಡಿದ್ದಾಳೆ. ನೀವು ಪ್ರವಾಸದಲ್ಲಿದ್ದೀರಿ. ಆದರೆ ಪ್ರವಾಸ ಮಾಡುವಾಗ ಹೆಚ್ಚು ಅಂಡ್‌ವೇರ್ ಪ್ಯಾಕ್ ಮಾಡಿ ತೆಗೆದುಕೊಳ್ಳಲು ಮರೆತಿದ್ದರೆ, ತಲೆಬಿಸಿ ಇಲ್ಲ. ನಾಳೆ ಏನು ಮಾಡಲಿ, ಅಂಡರ್‌ವೇರ್ ಹೇಗೆ ಧರಿಸಲಿ ಎಂಬ ಚಿಂತೆ ಬೇಡ. ನೀವು ತಂಗುವ ಪ್ರತಿ ಹೊಟೆಲ್ ರೂಂನಲ್ಲಿ ಕಾಫಿ ಮೇಕರ್ ಇದ್ದೇ ಇರುತ್ತೆ. ಈ ಕಾಫಿ ಮೇಕರ್‌ನಲ್ಲಿ ಅಂಡರ್‌ವೇರ್ ತೊಳೆಯಲು ಸಾಧ್ಯ. ಅತ್ಯಂತ ಶುಚಿಯಾಗಿ ತೊಳೆಯಲು ಸಾಧ್ಯವಾಗುತ್ತದೆ ಎಂದು ಟಿಪ್ಸ್ ನೀಡಿದ್ದಾರೆ.
ಕಾಫಿ ಪುಡಿಗಳನ್ನು ಇಡುವ ಜಾಗದಲ್ಲಿ ಅಂಡರ್‌ವೇರ್ ಇಡಬೇಕು. ಬಳಿಕ ಇದರ ಮುಚ್ಚಳ ಕ್ಲೋಸ್ ಮಾಡಬೇಕು. ಬಳಿಕ ಕಾಫಿಗಾಗಿ ಪ್ರೆಸ್ ಮಾಡಬೇಕು. ಈ ವೇಳೆ ಬಿಸಿಯಾದ ನೀರು ಮೇಲಿನಿಂದ ಕಾಫಿ ಪುಡಿಗಳ ಮೇಲೆ ಬೀಳಲಿದೆ. ಆದರೆ ಇಲ್ಲಿ ಅಂಡರ್‌ವೇರ್ ಮೇಲೆ ಬಿಸಿ ನೀರುಗಳು ಬೀಳಲಿದೆ. ಇದರಿಂದ ನಿಮ್ಮ ಅಂಡರ್‌ವೇರ್ ಶುಚಿಯಾಗಲಿದೆ. ಬಳಿಕ ಹೇರ್ ಡ್ರೈಯರ್ ಮೂಲಕ ಡ್ರೈ ಮಾಡಿದರೆ ಕೆಲಸ ಮುಗೀತು ಎಂದು ವಿಡಿಯೋ ಮೂಲಕ ಹೇಳಿದ್ದಾಳೆ.
ಈ ವಿಡಿಯೋ ನೋಡಿ ಹಲವರು ಆಕ್ರೋಶಗೊಂಡಿದ್ದಾರೆ. ಇಂತಹ ಇನ್‌ಫ್ಲುಯೆನ್ಸರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ