Donald Trump: ಟ್ರಂಪ್‌ರ 'Board of Peace'ಗೆ ಹಣದ ಹೊಳೆ! 700 ಕೋಟಿ ಡಾಲರ್ ನೀಡಿದ 9 ದೇಶಗಳು

Published : Feb 20, 2026, 08:18 AM IST
Nine Nations Pledge 700 Crore Dollars to Trumps Board of Peace Initiative

ಸಾರಾಂಶ

ವಿಶ್ವ ಶಾಂತಿ ಮತ್ತು ಗಾಝಾ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಿಸಿರುವ 'ಬೋರ್ಡ್ ಆಫ್ ಪೀಸ್' ಯೋಜನೆಗೆ 9 ದೇಶಗಳು 700 ಕೋಟಿ ಡಾಲರ್ ನೀಡುವುದಾಗಿ ಘೋಷಿಸಿವೆ. ಇಂಡೋನೇಷ್ಯಾ, ಮೊರಾಕ್ಕೊ, ಕಝಕಿಸ್ತಾನ್, ಕೊಸೊವೊ ಮತ್ತು ಅಲ್ಬೇನಿಯಾ ಈ ಪಟ್ಟಿಯಲ್ಲಿವೆ ಎಂದ ಟ್ರಂಪ್

ವಾಷಿಂಗ್ಟನ್: ಜಾಗತಿಕವಾಗಿ ಶಾಂತಿ ಸ್ಥಾಪಿಸಲು ಮತ್ತು ಗಾಝಾದ ಮರುನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಹೊಸ ಅಂತರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. 'ಬೋರ್ಡ್ ಆಫ್ ಪೀಸ್' ಹೆಸರಿನ ಈ ಯೋಜನೆಗೆ ಇದುವರೆಗೆ ಒಂಬತ್ತು ದೇಶಗಳು ಬರೋಬ್ಬರಿ 700 ಕೋಟಿ ಡಾಲರ್ ನೀಡುವುದಾಗಿ ಮುಂದೆ ಬಂದಿವೆ. ವಾಷಿಂಗ್ಟನ್‌ನಲ್ಲಿ ನಡೆದ 'ಬೋರ್ಡ್ ಆಫ್ ಪೀಸ್'ನ ಮೊದಲ ಸಭೆಯಲ್ಲಿ ಸ್ವತಃ ಡೊನಾಲ್ಡ್ ಟ್ರಂಪ್ ಈ ವಿಷಯವನ್ನು ತಿಳಿಸಿದ್ದಾರೆ.

ಈ ಯೋಜನೆಯನ್ನು ಮೊದಲು ಗಾಝಾದ ಪುನರ್ನಿರ್ಮಾಣಕ್ಕಾಗಿ ಅಂತಾನೇ ಶುರು ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಪ್ರಕಾರ, ಇಂಡೋನೇಷ್ಯಾ, ಮೊರಾಕ್ಕೊ, ಕಝಕಿಸ್ತಾನ್, ಕೊಸೊವೊ ಮತ್ತು ಅಲ್ಬೇನಿಯಾ ದೇಶಗಳು 700 ಕೋಟಿ ಡಾಲರ್ ನೀಡಲು ಒಪ್ಪಿಗೆ ಸೂಚಿಸಿವೆ.

ಗಾಝಾ ಪುನರ್ನಿರ್ಮಾಣಕ್ಕಾಗಿ ತಾವು ಮುಂದಾಳತ್ವ ವಹಿಸುವುದಾಗಿ ಮತ್ತು ಅಂತರಾಷ್ಟ್ರೀಯ ಶಾಂತಿ ಪಾಲನಾ ಪಡೆಯ ಭಾಗವಾಗುವುದಾಗಿ ಈ ಐದು ದೇಶಗಳು ಸಭೆಯಲ್ಲಿ ತಿಳಿಸಿವೆ. ದಕ್ಷಿಣ ಗಾಝಾದ ರಫಾದಲ್ಲಿ ಈ ಶಾಂತಿ ಪಾಲನಾ ಪಡೆಯನ್ನು ನಿಯೋಜಿಸಲಾಗುತ್ತದೆ. ಈಜಿಪ್ಟ್ ಮತ್ತು ಜೋರ್ಡಾನ್ ದೇಶಗಳು ಈ ಪಡೆಗೆ ತರಬೇತಿ ನೀಡಲಿವೆ.

ಆರಂಭದಲ್ಲಿ ಗಾಝಾದ ಪುನರ್ನಿರ್ಮಾಣಕ್ಕಾಗಿ ಘೋಷಣೆಯಾದ 'ಬೋರ್ಡ್ ಆಫ್ ಪೀಸ್' ಯೋಜನೆ, ನಂತರ ವಿಶ್ವಸಂಸ್ಥೆಗೆ ಪರ್ಯಾಯ ಎಂಬಂತೆ ಬಿಂಬಿತವಾಯಿತು. ಇದೇ ಕಾರಣಕ್ಕೆ ಹಲವು ದೇಶಗಳು ಟ್ರಂಪ್ ಅವರ ಈ ಯೋಜನೆಗೆ ಸೇರಲು ನಿರಾಕರಿಸಿದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಫೇಲ್‌ನಿಂದ ನಿಮ್ಮ ಸೇನೆಗೆ ಬಲ, ಆದರೂ ಟೀಕೆ ಏಕೆ?: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅಚ್ಚರಿ
AI Superpower: ಭಾರತ ಈಗ 'AI ಸೂಪರ್‌ಪವರ್', ಮೋದಿ ನಾಯಕತ್ವಕ್ಕೆ ರಿಷಿ ಸುನಕ್ ಮೆಚ್ಚುಗೆ!