Tonga Volcano ಟೊಂಗಾದಲ್ಲಿ ಭುಗಿಲೆದ್ದ ಜ್ವಾಲಾಮುಖಿ ಹಿರೋಶಿಮಾಕ್ಕಿಂತ 100 ಪಟ್ಟು ಭೀಕರ!

By Suvarna NewsFirst Published Jan 25, 2022, 4:01 AM IST
Highlights
  • ದ್ವೀಪದೇಶದ 65 ಕಿ.ಮೀ. ನೆಲ ಬೂದಿಯಿಂದ ನಾಶ
  • ವಿಷಪೂರಿತ ಧೂಳು, ನೀರಿನಿಂದ ಜನರಿಗೆ ರೋಗ
  • ಒಂದೇ ಸಲ 3 ಕೋಟಿ ಟನ್‌ ಶಕ್ತಿ ಬಿಡುಗಡೆ: ನಾಸಾ

ನುಕುವಾಲೋಫಾ(ಜ.25): ಪೆಸಿಫಿಕ್‌ ಸಾಗರದ ದ್ವೀಪ ದೇಶ ಟೊಂಗಾದಲ್ಲಿ(Tonga Volcano) ಇತ್ತೀಚೆಗೆ ಸ್ಫೋಟಿಸಿದ ಜ್ವಾಲಾಮುಖಿಯು ಜಾಗತಿಕ ಇತಿಹಾಸದಲ್ಲಿ ಕಾಣಿಸಿಕೊಂಡ ಅತ್ಯಂತ ಭೀಕರ ಜ್ವಾಲಾಮುಖಿಗಳಲ್ಲಿ ಒಂದು ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ(NASA) ಹೇಳಿದೆ. ವಿಶ್ವ ಮಹಾಯುದ್ಧದ ವೇಳೆ ಜಪಾನ್‌(Japan) ಮೇಲೆ ಅಮೆರಿಕ ಹಾಕಿದ್ದ ಅಣುಬಾಂಬ್‌ಗಿಂತ(atomic bomb) ನೂರಾರು ಪಟ್ಟು ಹೆಚ್ಚಿನ ಶಕ್ತಿ ಈ ಜ್ವಾಲಾಮುಖಿಯಿಂದ ಬಿಡುಗಡೆಯಾಗಿದೆ ಎಂದೂ ನಾಸಾ ತಿಳಿಸಿದೆ.

ಜ.15ರಂದು ಟೊಂಗಾ ಗಣರಾಜ್ಯದಲ್ಲಿ ಜ್ವಾಲಾಮುಖಿ ಸ್ಫೋಟಿಸಿತ್ತು. ಸುಮಾರು 1 ಲಕ್ಷ ಜನ ವಾಸಿಸುವ ದ್ವೀಪ ದೇಶದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಸುತ್ತಲಿನ ಹತ್ತಾರು ದೇಶಗಳಲ್ಲಿ ಸುನಾಮಿ(tsunami) ಉಂಟಾಗಿತ್ತು. ಆ ವೇಳೆ ಮೃತಪಟ್ಟಿದ್ದು ಬೆರಳೆಣಿಕೆಯ ಜನರಾಗಿದ್ದರೂ, ಜ್ವಾಲಾಮುಖಿಯ ಪರಿಣಾಮ ಮಾತ್ರ ಭಾರಿ ಭೀಕರವಾಗಿದೆ. ಹುಂಗಾ ಟೊಂಗಾ ಹುಂಗಾ ಹಾಪೆಯ್‌ ಎಂದು ಹೆಸರಿಡಲಾದ ಜ್ವಾಲಾಮುಖಿಯು ಸುಮಾರು 40 ಕಿ.ಮೀ. ಎತ್ತರಕ್ಕೆ ವಾತಾವರಣದಲ್ಲಿ ಬೂದಿ ಹಾಗೂ ಕಸ ಉಗುಳಿದೆ. ಅದರ ಪರಿಣಾಮವಾಗಿ ಹೆಚ್ಚುಕಮ್ಮಿ ಇಡೀ ದೇಶದ ಜನರು ಈಗ ಅನಾರೋಗ್ಯ ಸೇರಿದಂತೆ ನಾನಾ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

Indonesia volcano eruption:ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಬಲಿ, ಹಲವರು ಕಣ್ಮರೆ

30 ಮೆಗಾಟನ್‌ ಶಕ್ತಿ ಬಿಡುಗಡೆ:
ಮಹಾಯುದ್ಧದಲ್ಲಿ ಜಪಾನ್‌ ಮೇಲೆ ಅಮೆರಿಕ ಹಾಕಿದ ಅಣುಬಾಂಬ್‌ ಸುಮಾರು 15 ಕಿಲೋಟನ್‌ (15 ಸಾವಿರ ಟನ್‌) ಶಕ್ತಿಯುಳ್ಳದ್ದಾಗಿತ್ತು. ಆದರೆ ಟೊಂಗಾ ಜ್ವಾಲಾಮುಖಿ 5ರಿಂದ 30 ಮೆಗಾಟನ್‌ (50 ಲಕ್ಷದಿಂದ 3 ಕೋಟಿ ಟನ್‌) ಶಕ್ತಿ ಉಗುಳಿದೆ. ಅದರ ಬೂದಿ ಹಾಗೂ ತ್ಯಾಜ್ಯದಿಂದ ಟೊಂಗಾದ 65 ಕಿ.ಮೀ. ಭೂಭಾಗ ನಿಷ್ೊ್ರಯೋಜಕವಾಗಿದೆ. ಎರಡು ಹಳ್ಳಿಗಳು ಸಂಪೂರ್ಣ ನಾಶವಾಗಿವೆ. ವಿಷಪೂರಿತ ಬೂದಿಯಿಂದ ಕೃಷಿ ಭೂಮಿಗಳು ಬರಡಾಗಿದ್ದು, ಕುಡಿಯುವ ನೀರು ಕೂಡ ವಿಷಪೂರಿತವಾಗಿ ಜನರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ ಎಂದು ನಾಸಾ ತಿಳಿಸಿದೆ.

ಜನರ ಕಣ್ಣು, ಬಾಯಿಯಲ್ಲೂ ಬೂದಿ:
ಈಗಲೂ ಗಾಳಿಯಲ್ಲಿ ಜ್ವಾಲಾಮುಖಿಯ ಬೂದಿ ಇರುವುದರಿಂದ ಟೊಂಗಾದ ಜನರ ಕಣ್ಣು, ಮೂಗು ಹಾಗೂ ಬಾಯಿಗಳಲ್ಲಿ ಬೂದಿ ತುಂಬಿಕೊಳ್ಳುತ್ತಿದೆ. ಅವರ ಉಗುರುಗಳು ಕೆಸರು ತುಂಬಿಕೊಂಡು ಕಪ್ಪಾಗಿವೆ. ಜ್ವಾಲಾಮುಖಿಯಿಂದ ಇಡೀ ದೇಶ ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಜಪಾನ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾ ದೇಶಗಳು ನೆರವು ರವಾನಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿ ಪತ್ರಕರ್ತೆಯೊಬ್ಬರು ತಿಳಿಸಿದ್ದಾರೆ.

ದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ

ಟೋಂಗಾ ಜ್ವಾಲಾಮುಖಿ ಸ್ಫೋಟ: ವಿಶ್ವದ ಹಲವು ದೇಶಕ್ಕೆ ಸುನಾಮಿ
ಟೋಂಗಾ ದ್ವೀಪ ರಾಷ್ಟ್ರದಲ್ಲಿ ಸಮುದ್ರತಳದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಿಸಿದ್ದರಿಂದ ಸುನಾಮಿ ಸೃಷ್ಟಿಯಾಗಿದೆ. ಇದರಿಂದಾಗಿ ಟೋಂಗಾದ ತೀರ ಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಅನಾಹುತವಾಗಿದೆ. ಪೆಸಿಫಿಕ್‌ ಸಾಗರದಲ್ಲಿರುವ ಹಲವು ದೇಶಗಳಲ್ಲೂ ಎತ್ತರದ ಅಲೆಗಳು ಕಂಡುಬಂದಿವೆ. ಮತ್ತೊಂದೆಡೆ, ಜ್ವಾಲಾಮುಖಿಯಿಂದ 63 ಸಾವಿರ ಅಡಿ (19 ಸಾವಿರ ಮೀ.) ಎತ್ತರಕ್ಕೆ ಬೂದಿ ಚಿಮ್ಮಿದೆ. ಇದರಿಂದ ಸಿಡಿದೆದ್ದಿರುವ ಕಲ್ಲು ಹಾಗೂ ಬೂದಿ ಕೂಡ ಮನೆ ಮೇಲೆ ಬಂದು ಬೀಳುತ್ತಿರುವುದರಿಂದ ಟೋಂಗಾ ಪ್ರಜೆಗಳು ಆತಂಕಕ್ಕೆ ಒಳಗಾಗಿದ್ದಾರೆ.

ಜ್ವಾಲಾಮುಖಿ ಭೀಕರವಾಗಿ ಸ್ಫೋಟಿಸಿದ್ದು, ಅದರ ಶಬ್ದ 10 ಸಾವಿರ ಕಿ.ಮೀ. ದೂರದಲ್ಲಿರುವ ಅಲಾಸ್ಕವರೆಗೂ ಕೇಳಿಸಿದೆ. ಪೆಸಿಫಿಕ್‌ ಸಾಗರದ ಹಲವು ದೇಶಗಳಲ್ಲಿ ಐದೂವರೆ ಅಡಿ ಎತ್ತರದ ಅಲೆಗಳು ಸೃಷ್ಟಿಯಾಗಿವೆ. ಟೋಂಗಾದಿಂದ 10 ಸಾವಿರ ಕಿ.ಮೀ. ದೂರದಲ್ಲಿರುವ ಚಿಲಿಯಲ್ಲೂ ಇಷ್ಟುಎತ್ತರದ ಅಲೆಗಳು ಕಂಡುಬಂದಿವೆ. ಪೆಸಿಫಿಕ್‌ ಕರಾವಳಿಯಲ್ಲಿರುವ ಮೆಕ್ಸಿಕೋ ಹಾಗೂ ಅಲಾಸ್ಕಾದಲ್ಲೂ ಎತ್ತರದ ಅಲೆಗಳು ಅಪ್ಪಳಿಸಿವೆ. ಜಪಾನ್‌ನಲ್ಲಿ 4 ಅಡಿ ಎತ್ತರದ ಅಲೆಗಳು ಸೃಷ್ಟಿಯಾಗಿವೆ. ಸಂಪರ್ಕ ಕಡಿತಗೊಂಡಿರುವುದರಿಂದ ಟೋಂಗಾದಲ್ಲಿನ ಅನಾಹುತದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಆದರೆ ಕ್ರಮೇಣ ಸುನಾಮಿ ಭೀತಿ ಕಡಿಮೆಯಾಗುತ್ತಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಲಾಗಿದೆ.

click me!