ಹಾಲುಗಲ್ಲದ ಪುಟ್ಟ ಮಗುವಿಗೆ ಮೊದಲ ಬಾರಿಗೆ ತಿನ್ನಿಸುವ ಪ್ರತಿಯೊಂದು ವಸ್ತುವೂ ಮಗುವಿಗೆ ಹೊಸದೇ ಆಗಿರುವುದು. ಇದಕ್ಕೆ ಮಗು ಪ್ರತಿಕ್ರಿಯಿಸುವ ರೀತಿ ತುಂಬಾ ವಿಭಿನ್ನ ಹಾಗೂ ಮುದ್ದಾಗಿರುವುದು. ಇದೇ ರೀತಿ ಇಲ್ಲಿ ಮಗುವೊಂದು ಮೊದಲ ಬಾರಿಗೆ ಕೊಕಾಕೋಲಾದ ರುಚಿ ನೋಡಿದ್ದು, ಇದಕ್ಕೆ ಮಗು ಪ್ರತಿಕ್ರಿಯಿಸಿದ ರೀತಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ಮಗು ವಿದೇಶಿ ಆಗಿದ್ದು, ವಿದೇಶದಲ್ಲಿ ಚಿತ್ರೀಕರಣಗೊಂಡ ವಿಡಿಯೋ ಇದಾಗಿದೆ. ತನ್ನ ಪೋಷಕರೊಂದಿಗೆ ಮ್ಯಾಕ್ ಡೊನಾಲ್ಡ್ ಶಾಪ್‌ಗೆ ತೆರಳುವ ಮಗುವಿಗೆ ಮೊದಲ ಬಾರಿಗೆ ಕೊಕಾಕೋಲಾ ನೀಡಲಾಗುತ್ತದೆ. ಅದುವರೆಗೆ ಕೊಕಾಕೋಲಾದ ರುಚಿ ನೋಡಿರದ ಮಗು ಕೊಕಾಕೋಲಾವನ್ನು ಒಂದು ಸಿಪ್ ಕುಡಿದು ಮುಖ ಕಿವುಚಿ ಕೊಳ್ಳುತ್ತದೆ. ಮಗುವಿನ ಆ ಪ್ರತಿಕ್ರಿಯೆ ತುಂಬಾ ಮುದ್ದಾಗಿದೆ.
ಸ್ಟ್ರಾ ಸಹಾಯದಿಂದ ಲೋಟದಿಂದ ಒಂದು ಗುಟುಕು ತೆಗೆದುಕೊಂಡ ಆಕೆ ಒಮ್ಮೆಗೆ ಗಾಬರಿಯಾಗುತ್ತಾಳೆ. ನಂತರ ಪಾನೀಯದ ಜುಮ್ಮೆನಿಸುವಿಕೆಯಿಂದ ಅವಳು ಆಶ್ಚರ್ಯಚಕಿತಳಾಗುತ್ತಾಳೆ. ಮತ್ತು ಆ ರುಚಿಯನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾಳೆ. ನಂತರ ಮುಗುಳ್ನಕ್ಕು ಮತ್ತೊಂದು ಸಿಪ್ ಕುಡಿಯುತ್ತಾಳೆ ಈ ಮೂಲಕ ಕೊನೆಗೂ ಆ ಪಾನೀಯವನ್ನು ಆಕೆ ನಿಜವಾಗಿಯೂ ಇಷ್ಟಪಟ್ಟಿದ್ದಾಳೆ ಎಂಬುದನ್ನು ಸಾಬೀತುಪಡಿಸುತ್ತಾಳೆ. ಇದಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಿಡಿಯೋ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದರೆ ಮತ್ತೂ ಕೆಲವರು ಇದು ಮಕ್ಕಳಿಗೆ ಕೊಡುವಂತಹ ಪಾನೀಯ ಅಲ್ಲ. ಸಣ್ಣ ಮಕ್ಕಳು ಈ ಕೊಕಾಕೋಲಾ ಪಾನೀಯವನ್ನು ಕುಡಿಯಬಾರದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಪ್ರೀತಿಯ ನಾಯಿಯೊಂದಿಗೆ ಪುಟ್ಟ ಬಾಲಕಿಯ ಸಾಹಸ... ನೋಡಿ viral video
ಈ ವೈರಲ್ ವಿಡಿಯೋ Buitengebieden ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆಗಿದ್ದು, ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ತಿನ್ನುವ ವಸ್ತುವಿನಿಂದ ಹಿಡಿದು ಹೊಸ ಜನ, ಹೊಸ ವಸ್ತು ಹೀಗೆ ಪ್ರತಿಯೊಂದನ್ನು ಮೊದಲ ಬಾರಿಗೆ ಮಕ್ಕಳು ನೋಡಿದಾಗ ನೀಡುವ ಪ್ರತಿಕ್ರಿಯೆ ಮಕ್ಕಳ ಪೋಷಕರ ಪಾಲಿಗೆ ತುಂಬಾ ವಿಶೇಷವೆನಿಸುತ್ತದೆ.
ಶ್ವಾನವನ್ನು ಮೊದಲ ಬಾರಿ ನೋಡಿದ ಮಗು
ಈ ಹಿಂದೆ ಶ್ವಾನವನ್ನು ಮೊದಲ ಬಾರಿಗೆ ಮಗು ನೋಡಿದಾಗ ಪ್ರತಿಕ್ರಿಯಿಸಿದ ರೀತಿ ಎಲ್ಲೆಡೆ ವೈರಲ್ ಆಗಿತ್ತು. ಶ್ವಾನ(dog) ಹಾಗೂ ಮನುಷ್ಯರ ನಡುವಿನ ಸಂಬಂಧ ತುಂಬಾ ಅವಿನಾಭಾವವಾದುದು ಇದಕ್ಕೆ ಮನುಷ್ಯನ ಮೇಲೆ ಶ್ವಾನದ ಪ್ರೀತಿ ಊಹೆಗೂ ನಿಲುಕದು. ಮಾಲೀಕ ಸತ್ತಾಗ ಶ್ವಾನವೂ ಪ್ರಾಣ ಬಿಟ್ಟಂತಹ ಅನೇಕ ಘಟನೆಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಆದರೆ ಇಲ್ಲಿಕ್ಯೂಟ್ ಕ್ಯೂಟ್ ಆದ ಮಗು ನಾಯಿಯನ್ನು ಮೊದಲ ಬಾರಿ ನೋಡಿದಾಗ ಮಗುವಿನ ಪ್ರತಿಕ್ರಿಯೆ ಹೇಗಿತ್ತು ಎಂಬುದು. ಹೌದು ಈ ವಿಡಿಯೋದಲ್ಲಿ ಮಗುವು ನಾಯಿಯನ್ನು ನೋಡಿ ಕೂಡಲೇ ಫುಲ್ ಖುಷಿಯಾಗಿ ಚಪ್ಪಾಳೆ ತಟ್ಟುತ್ತಾ ಡಾನ್ಸ್ ಮಾಡಲು ಶುರು ಮಾಡುತ್ತದೆ. ಜೊತೆಗೆ ನಾಯಿಯ ಪಕ್ಕವೇ ಈ ಮಗು ಮಲಗಲು ನೋಡುತ್ತದೆ.
Flight Birth : ವಿಮಾನದಲ್ಲಿ ಮಗು ಹುಟ್ಟಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ?
ಈ ವೇಳೆ ನಾಯಿ ಮಗುವಿನ ಮುಖವನ್ನು ನೆಕ್ಕಿ ಮುದ್ದು ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಒಮ್ಮೆ ಗಾಬರಿಯಾದ ಮಗು ಕೂಡಲೇ ಅಲ್ಲಿಂದ ಎದ್ದು ಮತ್ತೆ ನಾಯಿಯ ಮುಖವನ್ನು ಮುಟ್ಟಿ ಮುದ್ದು ಮಾಡಲು ಶುರು ಮಾಡುತ್ತದೆ. ಈ ವೇಳೆ ಕುಳಿತಿದ್ದ ನಾಯಿ ಮತ್ತೆ ಎದ್ದು ಮಗುವಿನ ಮುಖ ನೆಕ್ಕಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಆದರೆ ಮತ್ತೆ ಗಾಬರಿಗೊಳಗಾದ ಸಣ್ಣ ಮಗು ಅಲ್ಲಿಂದ ಓಡಲು ಶುರು ಮಾಡುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 4 ಮಿಲಿಯನ್‌ಗೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ.