2 ಕಾಲು, 1 ಕೈ ಇಲ್ಲದ ಗೋವಾ ಯುವಕ ಎವರೆಸ್ಟ್‌ ಬೇಸ್‌ಕ್ಯಾಂಪ್‌ ಏರಿ ದಾಖಲೆ!

By Kannadaprabha News  |  First Published May 24, 2024, 6:43 AM IST

ದೈಹಿಕ ನ್ಯೂನ್ಯತೆಗಳು ಸಾಧಿಸಬೇಕು ಎನ್ನುವ ಇಚ್ಛಾ ಶಕ್ತಿ ಹೊಂದಿರುವವರ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವ ಮಾತನ್ನು ಇಂತಹವರನ್ನೇ ನೋಡಿ ಹೇಳುವುದು ಅನಿಸುತ್ತದೆ.


ಕಾಠ್ಮಂಡು: ದೈಹಿಕ ನ್ಯೂನ್ಯತೆಗಳು ಸಾಧಿಸಬೇಕು ಎನ್ನುವ ಇಚ್ಛಾ ಶಕ್ತಿ ಹೊಂದಿರುವವರ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವ ಮಾತನ್ನು ಇಂತಹವರನ್ನೇ ನೋಡಿ ಹೇಳುವುದು ಅನಿಸುತ್ತದೆ.

 ಹೌದು ಮೂರು ವಿಧದ ಅಂಗವೈಕಲ್ಯವಿದ್ದರೂ ಗೋವಾ ಮೂಲದ 30 ವರ್ಷದ ತಿಂಕೇಶ್ ಕೌಶಿಕ್ ಎನ್ನುವ ವ್ಯಕ್ತಿ ಸಮುದ್ರ ಮಟ್ಟದಿಂದ 17,598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್‌ ಬೇಸ್‌ ಕ್ಯಾಂಪ್ ತುದಿಯನ್ನು ತಲುಪಿದ್ದಾರೆ.

Tap to resize

Latest Videos

undefined

29ನೇ ಬಾರಿ ಎವರೆಸ್ಟ್ ಶಿಖರ ಏರಿ ತನ್ನದೇ ದಾಖಲೆ ಮುರಿದ ಕಮಿರಿಟಾ

 ಈ ಸಾಧನೆ ಮಾಡಿದ ವಿಶ್ವದ ಮೊದಲ ಟ್ರಿಪಲ್ ಅಂಗವಿಕ ವ್ಯಕ್ತಿ ಎನಿಸಿಕೊಂಡಿದ್ದಾರೆ.ಕೌಶಿಕ್ ಮೂರು ವಿಧದ ದೈಹಿಕ ನ್ಯೂನ್ಯತೆಗಳನ್ನು ಹೊಂದಿದ್ದಾರೆ. 9 ವರ್ಷದವರಿದ್ದಾಗ ಹರಿಯಾಣದಲ್ಲಿ ನಡೆದ ವಿದ್ಯುತ್ ಅಪಘಾತವೊಂದರಲ್ಲಿ ತನ್ನ ಕಾಲು, ಕೈ ಮತ್ತು ಮಂಡಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ಕೃತಕ ಅಂಗಗಳನ್ನು ಬಳಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ಫಿಟ್ನೆಸ್ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ಫಿಟ್ನೆಸ್ ಕೋಚ್ ಆಗಿದ್ದ ಕಾರಣ ಮೌಂಟ್ ಎವರೆಸ್ಟ್‌ ಟ್ರೆಕ್ಕಿಂಗ್ ಸುಲಭವಾಗಬಹುದು ಎಂದು ಕೌಶಿಕ್ ಆರಂಭದಲ್ಲಿ ಭಾವಿಸಿದ್ದರು. ಆದರೆ ಕೃತಕ ಅಂಗಗಳನ್ನು ಬಳಸಿದ ಕಾರಣ ಹಾದಿ ಬಹಳ ಕಷ್ಟವಾಗಿತ್ತು. ಅದನ್ನೆಲ್ಲ ದಾಟಿ ಈ ಸಾಧನೆ ಮಾಡಿದ್ದಾರೆ. ‘ದೈಹಿಕ ನ್ಯೂನ್ಯತೆಗಳನ್ನೂ ಮೀರಿ ತಾನು ಈ ಸಾಧನೆಯನ್ನು ಮಾಡುವುದಕ್ಕೆ ತನ್ನ ಮನಸ್ಸಿನ ದೃಢತೆಯೇ ಕಾರಣ’ ಎನ್ನುತ್ತಾರೆ ಕೌಶಿಕ್.

16ರ ಕಾಮ್ಯ ಭಾರತದ ಕಿರಿಯ ಎವರೆಸ್ಟ್‌ ಶಿಖರಗಾರ್ತಿ

ಜಮ್ಶೆಡ್‌ಪುರ ಸಾಧಿಸಬೇಕೆಂಬ ಛಲ ಇದ್ದಲ್ಲಿ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ನಿದರ್ಶನವೆಂಬಂತೆ 16ರ ಬಾಲಕಿ ಕಾಮ್ಯ ಕಾರ್ತಿಕೇಯನ್‌ ಮೇ 20ರಂದು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ (8848 ಮೀ.) ಏರುವ ಮೂಲಕ ವಿಶ್ವದ ಎರಡನೇ ಕಿರಿಯ ಹಾಗೂ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಮೌಂಟ್ ಎವರೆಸ್ಟ್ ಶಿಖರದ 360 ಡಿಗ್ರಿ ನೋಟ ಹೇಗಿದೆ ಗೊತ್ತಾ? ಇಲ್ಲಿದೆ ಮೈನವಿರೇಳಿಸುವ ದೃಶ್ಯ

ಭಾರತೀಯ ನೌಕಾಸೆನೆಯ ಕಮಾಂಡರ್‌ ಆಗಿರುವ ಎಸ್‌ ಕಾರ್ತಿಕೇಯನ್‌ ಅವರ ಪುತ್ರಿಯಾಗಿರುವ ಈಕೆ ಪ್ರಸ್ತುತ ಮುಂಬೈ ನೇವಿ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಏಳನೇ ವಯಸ್ಸಿನಿಂದಲೇ ಪರ್ವತಾರೋಹಣದ ಪಯಣ ಆರಂಭಿಸಿದ್ದಾಳೆ. ಇದುವರೆಗೂ 6 ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನು ಏರಿದ್ದು, ಡಿಸೆಂಬರ್‌ನಲ್ಲಿ ಅಂಟಾರ್ಟಿಕಾದ ವಿನ್ಸನ್‌ ಮ್ಯಾಸಿಫ್‌ ಪರ್ವತವನ್ನೂ ಏರುವ ಮೂಲಕ ಎಲ್ಲ ಖಂಡಗಳ ಅತ್ಯಂತ ಎತ್ತರದ ಶಿಖರಗಳನ್ನು ಏರಿದ ಕಿರಿಯ ವ್ಯಕ್ತಿ ಎಂದು ದಾಖಲೆ ಬರೆಯುವ ಗುರಿ ಹೊಂದಿದ್ದಾಳೆ.

click me!