ಮೌಂಟ್ ಎವರೆಸ್ಟ್ ಶಿಖರದ 360 ಡಿಗ್ರಿ ನೋಟ ಹೇಗಿದೆ ಗೊತ್ತಾ? ಇಲ್ಲಿದೆ ಮೈನವಿರೇಳಿಸುವ ದೃಶ್ಯ

ಮೌಂಟ್ ಎವರೆಸ್ಟ್ ಶಿಖರವೆಂದರೆ ಭಾರತೀಯರಿಗೆ ಅಪೂರ್ವ ಆರಾಧನೆಯ ಭಾವನೆಯಿದೆ. ಪ್ರಾಚೀನ ಕಾಲದಿಂದಲೂ ಗೌರೀಶಂಕರ ಶಿಖರ ಭಾರತೀಯರ ಪವಿತ್ರ ತಾಣಗಳಲ್ಲಿ ಒಂದಾಗಿದೆ. ಈ ನೆಲದ ಭವ್ಯತೆಗೆ ಸಾಟಿಯಿಲ್ಲ. ಇದೀಗ, ಈ ಶಿಖರದ 360 ಡಿಗ್ರಿ ನೋಟದ ವೀಡಿಯೋವೊಂದು ನೋಡುಗರಲ್ಲಿ ಅಚ್ಚರಿ ಹುಟ್ಟಿಸುತ್ತಿದೆ. 
 

See mount Everest 360 digree camera view

ಮೌಂಟ್ ಎವರೆಸ್ಟ್ ಶಿಖರದ ಹೆಸರು ಕೇಳಿದರೆ ಪರ್ವತಾರೋಹಿಗಳ ಮೈ ಜುಮ್ ಎನ್ನುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಮೌಂಟ್ ಎವರೆಸ್ಟ್ ಶಿಖರ ಏರಬೇಕು ಎನ್ನುವುದು ಬಹಳಷ್ಟು ಪರ್ವತಾರೋಹಿಗಳ ಕನಸು. ಆದರೆ, ಅದು ಸುಲಭಸಾಧ್ಯವಲ್ಲ. ಎಂತಹ ತರಬೇತಿ ಇದ್ದರೂ, ಎಷ್ಟೇ ಸಹಾಯ, ಹಣಕಾಸು ಬೆಂಬಲವಿದ್ದರೂ ಎವರೆಸ್ಟ್ ತನ್ನ ನೆಲದ ಮೇಲೆ ಕಾಲಿಡಲು ಎಲ್ಲರಿಗೂ ಅವಕಾಶ ನೀಡುವುದಿಲ್ಲ. ಗೌರೀಶಂಕರ ಶಿಖರವೆಂದು ಭಾರತೀಯರಿಂದ ಕರೆಸಿಕೊಂಡಿದ್ದ ಮೌಂಟ್ ಎವರೆಸ್ಟ್ ಗೆ ನೇಪಾಳಿ ಭಾಷೆಯಲ್ಲಿ ಇರುವ ಹೆಸರು ಚೊಮೊಲುಂಗ್ಮ. ಆದರೆ, ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಭಾರತದ ಸರ್ವೇಯರ್ ಆಗಿದ್ದ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಇದರ ಎತ್ತರವನ್ನು ವೈಜ್ಞಾನಿಕವಾಗಿ ಅಳೆಯಲು ಯತ್ನಿಸಿ ಯಶಸ್ವಿಯಾದ. ಹೀಗಾಗಿ, ಈತನ ಹೆಸರೇ ಈ ಶಿಖರಕ್ಕೆ ಖಾಯಮ್ಮಾಯಿತು. ಹಿಂದಿನಿಂದಲೂ ಹಿಮಾಲಯದ ಮೇಲೆ ಭಾರತೀಯರ ಪ್ರೀತಿ ಅಪಾರ. ಹಿಮಾಲಯದ ಎಲ್ಲ ಪ್ರದೇಶವನ್ನು ದೇವರ ಸ್ವರೂಪವೆಂದು, ಶಿವನ ಸ್ಥಾನವೆಂದೂ, ಪರಮ ಪವಿತ್ರ ಸ್ಥಳವೆನ್ನುವ ಭಾವನೆ ಹೊಂದಿದ್ದರು. ಇಂದಿಗೂ ಅದೇ ಭಾವನೆಯಿದೆ. ಇಂತಹ ಶಿಖರವನ್ನೇರುವುದು ಎಲ್ಲ ಪರ್ವತಾರೋಹಿಗಳ ಕನಸಾಗಿರುವುದರಲ್ಲಿ ಅಚ್ಚರಿಯಿಲ್ಲ. 

ಈ ಆಧುನಿಕ ಸಮಯದಲ್ಲೂ ಮೌಂಟ್ ಎವರೆಸ್ಟ್ (Mount Everest) ಪರ್ವತ (Mountain) ಮನುಷ್ಯನಿಗೆ ಏನಾದರೊಂದು ಅಚ್ಚರಿ ನೀಡುತ್ತಲೇ ಇರುತ್ತದೆ. ಇದೀಗ, ಈ ಪರ್ವತದ 360 ಡಿಗ್ರಿ ಕೋನದ ವೀಡಿಯೋವೊಂದು ಮೈನವಿರೇಳಿಸಿದೆ. ಹಿಮದಿಂದ (Ice) ಆವೃತವಾದ ತುದಿಯಲ್ಲಿ ಕೆಲವು ಪರ್ವತಾರೋಹಿಗಳು (Mountaineers) ನಿಂತಿರುವುದು, ಸುತ್ತಲೂ ಆಳವಾದ ಕಂದರಗಳು (Deep) ಇದರಲ್ಲಿ ಕಂಡುಬರುತ್ತದೆ. ವಿಚಿತ್ರವೆಂದರೆ, ಮೌಂಟ್ ಎವರೆಸ್ಟ್ ಶಿಖರದ ತುತ್ತತುದಿಯ ಭಾಗ ಕೆಲವೇ ಅಡಿಗಳಷ್ಟಿದೆ ಎನ್ನುವ ಭಾವನೆ ಈ ವೀಡಿಯೋದಿಂದ (Video) ಮೂಡುತ್ತದೆ. 

ಅಯ್ಯೋ ಇದು ಧಾರಾವಾಹಿ ಪಾರ್ಟ್​ ಕಣಮ್ಮಾ ಎಂದ್ರೂ ಬಿಡಲಿಲ್ಲ- ನಾಯಕನ ಹಿಡಿದು ಝಾಡಿಸಿದ ಮಹಿಳೆ!

ಎವರೆಸ್ಟ್ ಕಡಿದಾದ ತುದಿ
ಸೋಷಿಯಲ್ ಮೀಡಿಯಾ (Social Media) ಎಕ್ಸ್ ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. ಹಿಸ್ಟರಿಇನ್ ಮೀಮ್ಸ್ ಎನ್ನುವ ಖಾತೆಯಿಂದ ಶೇರ್ ಆಗಿರುವ ವೀಡಿಯೋ ಮೌಂಟ್ ಎವರೆಸ್ಟ್ ಶಿಖರದ ಕಡಿದಾದ ಶ್ರೇಣಿಗಳನ್ನು ಊಹಿಸುವಂತೆ ಮಾಡುತ್ತದೆ. ಇಂತಹ ಚೂಪಾದ (Sharp) ತುದಿ ಹೊಂದಿರುವ ಪರ್ವತವನ್ನು ಹೇಗೆ ಏರಲು ಸಾಧ್ಯ ಎನ್ನುವ ಬೆರಗನ್ನು ಮೂಡಿಸುತ್ತದೆ. “ಮೌಂಟ್ ಎವರೆಸ್ಟ್ ತುದಿಯಿಂದ 360 ಡಿಗ್ರಿ ಕ್ಯಾಮರಾ (Camera) ನೋಟ’ ಎನ್ನುವ ಕ್ಯಾಪ್ಷನ್ ಹೊಂದಿರುವ ವೀಡಿಯೋ ಈಗಾಗಲೇ 35 ಮಿಲಿಯನ್ ಗೂ ಅಧಿಕ ವೀಕ್ಷಕರನ್ನು ತಲುಪಿದೆ. 2.20 ಲಕ್ಷಕ್ಕೂ ಅಧಿಕ ಜನ ಲೈಕ್ (Like) ಮಾಡಿದ್ದಾರೆ. 

ನಿಮ್ಮ ಮಗು ಶಾಪಿಂಗ್‌ ಮಾಲ್, ಸಂತೆ ಜಾತ್ರೆಲಿ ಕೆಳಗೆ ಬಿದ್ದು ರಚ್ಚೆ ಹಿಡಿಯುತ್ತಾ? ಹಾಗಿದ್ರೆ ಈ ವೀಡಿಯೋ ನೋಡಿ

ಸೋಷಿಯಲ್ ಮೀಡಿಯಾ ಬಳಕೆದಾರರು ವೀಡಿಯೋವನ್ನು ಭಾರೀ ಮೆಚ್ಚಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಮೌಂಟ್ ಎವರೆಸ್ಟ್ ಬಗ್ಗೆ ಎಂತಹ ಮಹತ್ವದ (Important) ಸ್ಥಾನವಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ವಿಶ್ವದ ಅತ್ಯುನ್ನತ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವುದು ನುರಿತ ಪರ್ವತಾರೋಹಿಗಳಿಗೂ ಕಷ್ಟಸಾಧ್ಯವಾಗುತ್ತದೆ. ಅವುಗಳ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. 

 

ಅಚ್ಚರಿ ರೋಮಾಂಚನ: ಸೋಷಿಯಲ್ ಮೀಡಿಯಾ ಬಳಕೆದಾರರು, ಮೌಂಟ್ ಎವರೆಸ್ಟ್ ಸೌಂದರ್ಯವನ್ನು ಕೊಂಡಾಡಿದ್ದಾರೆ. “ಟಾಪ್ ಆಫ್ ದಿ ವರ್ಲ್ಡ್, ಇಂತಹ ಸೃಷ್ಟಿ ಮಾಡಿರುವ ದೇವರಿಗೆ (God) ನಮೋನ್ನಮಃ’ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, “ಮೌಂಟ್ ಎವರೆಸ್ಟ್ ಬಗ್ಗೆ ನನಗೆ ಯಾವಾಗಲೂ ಅಚ್ಚರಿ, ರೋಮಾಂಚನದ ಭಾವನೆಯಿದೆ. ಇದರ ಬಗ್ಗೆ ಸಾಕಷ್ಟು ಓದಿದ್ದೇನೆ. ಅಲ್ಲಿನ ಸ್ಥಿತಿಯನ್ನು ನೋಡಿದ್ದಾರೆ. ಇದು ಅದ್ಭುತ’ ಎಂದು ಹೇಳಿದ್ದಾರೆ.  

“ನೀವು ಸುಲಭವಾಗಿ ಕೆಳಗೆ ಬಿದ್ದುಬಿಡುತ್ತೀರಿ ಎನ್ನುವ ಭಾವನೆ ಮೂಡುತ್ತಿದೆ’ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದರೆ, ಒಬ್ಬರು “ನೀವು ಕೇವಲ ಒಂದು ಚದರಡಿ ಜಾಗದಲ್ಲಿ ನಿಂತಿದ್ದೀರಿ ಎನಿಸುತ್ತಿದೆ. ಅಮೇಜಿಂಗ್ (Amazing), ಅತಿ ಎತ್ತರದ ಸ್ಥಳಗಳ ಕುರಿತಾದ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ’ ಎಂದು ಹೇಳಿಕಂಡಿದ್ದಾರೆ. 

Latest Videos
Follow Us:
Download App:
  • android
  • ios