ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ; ವೈರಲ್ ವಿಡಿಯೋ ಇಲ್ಲಿದೆ!

Published : Sep 21, 2023, 01:08 PM ISTUpdated : Sep 21, 2023, 01:12 PM IST
ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ; ವೈರಲ್ ವಿಡಿಯೋ ಇಲ್ಲಿದೆ!

ಸಾರಾಂಶ

ಮುಸಲ್ಮಾನರ ಪ್ರಾರ್ಥನೆ 'ಬಿಸ್ಮಿಲ್ಲಾ' ಪಠಿಸಿ ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್ ಮಹಿಳೆಯೋರ್ವಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾ (ಸೆ.21): ಇಸ್ಲಾಂ ಪ್ರಾರ್ಥನೆ 'ಬಿಸ್ಮಿಲ್ಲಾ' ಪಠಿಸಿ ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್ ಮಹಿಳೆಯೋರ್ವಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಹಂದಿ ಮಾಂಸ ಸೇವನೆ ಇಸ್ಲಾಂನಲ್ಲಿ ಹರಾಮ್ (ನಿಷೇಧಿತ) ಆಗಿದೆ. ಹೀಗಿದ್ದೂ ಲೀನಾ ಮುಖರ್ಜಿ ಎಂಬಾಕೆ ಮುಸ್ಲಿಂ ಪ್ರಾರ್ಥನೆ "ಬಿಸ್ಮಿಲ್ಲಾ" ಅನ್ನು ಓದಿದ ನಂತರ ಪೋರ್ಕ್ ಸೇವನೆ ಮಾಡಿದ್ದಾಳೆ. ಅಷ್ಟೇ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ  ಇಂಡೋನೇಷ್ಯಾದ ಬಾಲಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಬಿಸ್ಮಿಲ್ಲಾ ಪಠಿಸಿ ಪೋರ್ಕ್ ಸೇವನೆ ಮಾಡಿರುವ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾದ 33 ವರ್ಷದ ಮಹಿಳೆ ಲೀನಾ ಮುಖರ್ಜಿ ಈ ವರ್ಷದ ಮಾರ್ಚ್‌ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಲೀನಾ ಮುಖರ್ಜಿ ಹಂದಿ ಮಾಂಸ ತಿನ್ನುತ್ತಿದ್ದಾಳೆ ಅದಕ್ಕೂ ಮೊದಲು ಮುಸಲ್ಮಾನರ ಪವಿತ್ರ ಪ್ರಾರ್ಥನೆಯಾದ ಬಿಸ್ಮಿಲ್ಲಾ ಪಠಿಸಿದ್ದಾಳೆ. ದೇವರ ಹೆಸರಿನಲ್ಲಿ ಹಂದಿಮಾಂಸ ಸೇವಿಸುತ್ತಿದ್ದೇನೆ ಎಂಬರ್ಥದಲ್ಲಿ ವಿಡಿಯೋ ಮಾಡಲಾಗಿದೆ. ಆದರೆ ಇಸ್ಲಾಂನಲ್ಲಿ ಹಂದಿಮಾಂಸ ಸೇವನೆ ಹರಾಮ್ ಆಗಿದೆ. ಇದು ಅವಳಿಗೆ ತಿಳಿದಿರಬೇಕಿತ್ತು ಎಂದು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಗುಡ್ ನ್ಯೂಸ್, ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಹೊಯ್ಸಳ ದೇವಾಲಯ ಸೇರ್ಪಡೆ!

 ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ 

 ತನ್ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.  ಪಾಲೆಂಬಾಂಗ್‌ನ ನ್ಯಾಯಾಲಯದಲ್ಲಿ "ಧಾರ್ಮಿಕ ವ್ಯಕ್ತಿಗಳು ಮತ್ತು ನಿರ್ದಿಷ್ಟ ಗುಂಪುಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಮಾಹಿತಿಯನ್ನು ಹರಡಿದ" ಮಹಿಳೆಯು ತಪ್ಪಿತಸ್ಥಳೆಂದು ಕಂಡುಬಂದ ಹಿನ್ನೆಲೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಮಹಿಳೆ ನನಗೆ ಈ ಬಗ್ಗೆ ಏನು ಗೊತ್ತಿಲ್ಲವೆಂದು ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ.

ಇಂಡೋನೇಷ್ಯಾದಲ್ಲಿ ಧರ್ಮನಿಂದೆಯ ಕಾನೂನುಗಳು

 ಇಂಡೋನೇಷ್ಯಾದಲ್ಲಿ ಧರ್ಮನಿಂದೆಯ ಪ್ರಕರಣಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಇತ್ತೀಚೆಗೆ  ಮೊಹಮ್ಮದ್ ಎಂಬ ಹೆಸರಿನ ಗ್ರಾಹಕನಿಗೆ ಬಾರ್ ಚೈನ್ ಉಚಿತ ಮದ್ಯವನ್ನು ಪ್ರಚಾರ ಮಾಡಿದ್ದಕ್ಕೆ ಸುಮಾರು ಆರು ಜನರನ್ನು ಬಂಧಿಸಲಾಗಿತ್ತು. ಕಾರಣ ಇಸ್ಲಾಂ ಧರ್ಮದ ಪ್ರಕಾರ ಮೊಹಮ್ಮದ್ ಮುಸ್ಲಿಮರ ಕೊನೆಯ ಪ್ರವಾದಿ. ಇಸ್ಲಾಂ ಧರ್ಮದಲ್ಲಿ ಮದ್ಯ ಹರಾಮ್ ಆಗಿದೆ. ದೇಶದಲ್ಲಿನ ಹೊಸ ಧರ್ಮನಿಂದೆಯ ಕಾನೂನುಗಳು ಇಂಡೋನೇಷ್ಯಾದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಕಿರುಕುಳ ಮತ್ತು ಗುರಿಯಾಗಿಸುವ ಸಾಧನವಾಗಿ ಬಳಸಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

Viral News: ಐದು ಸಾವಿರ ಚೇಳಿನ ಜೊತೆ ವಾಸ.. ಸಾಮಾನ್ಯಳಲ್ಲ ಈಕೆ! 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ