ಕೆನಾಡದಲ್ಲಿನ ಖಲಿಸ್ತಾನಿ ಉಗ್ರ ಸುಖಾ ದುನೆಕೆ ಹತ್ಯೆ, ಬಿಗಡಾಯಿಸಿದ ಸಂಬಂಧ!

By Suvarna News  |  First Published Sep 21, 2023, 10:45 AM IST

ಖಲಿಸ್ತಾನಿ ಉಗ್ರರ ವಕಾಲತ್ತು ವಹಿಸಿರುವ ಕೆನಾಡ ಸರ್ಕಾರದ ನಡೆಯಿಂದ ಭಾರತ ಜೊತೆಗಿನ ಸಂಬಂಧ ಹದಗೆಟ್ಟಿದೆ. ಖಲಿಸ್ತಾನಿ ಉಗ್ರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಅನ್ನೋ ಹೇಳಿಕೆಯಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಕೆನಡಾದಲ್ಲಿದ್ದ ಮತ್ತೊರ್ವ ಖಲಿಸ್ತಾನಿ ನಾಯಕ ಸುಖಾ ದುನೆಕೆ ಹತ್ಯೆಯಾಗಿದೆ. 
 


ಕೆನಡ(ಸೆ.21) ಕೆನಡಾ ಸಂಸತ್ತಿನಲ್ಲಿ ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿದ ಹೇಳಿಕೆಯಿಂದ ಭಾರತ ನಡುವಿನ ಸಂಬಂಧ ಹಳಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಅನ್ನೋ ಹೇಳಿಕೆಯಿಂದ ಭಾರತ ಹಾಗೂ ಕೆನಾಡ ನಡುವೆ ಬಿಗುವಿನ ವಾತಾವರಣ ನಿರ್ಮಿಸಿದೆ. ಈ ಹೇಳಿಕೆ ಬಳಿಕ ಹಲವು ಆತಂಕದ ಬೆಳವಣಿಗೆ ನಡೆದಿದೆ. ಖಲಿಸ್ತಾನಿ ಉಗ್ರರ ಆರ್ಭಟಕ್ಕೆ ಹೆಚ್ಚಾಗುತ್ತಿದ್ದಂತೆ ಇದೀಗ ಕೆನಾಡದಲ್ಲಿದ್ದ ಮತ್ತೊರ್ವ ಖಲಿಸ್ತಾನಿ ಉಗ್ರ ನಾಯಕ ಸುಖಾ ದುನೆಕೆ ಹತ್ಯೆ ಇದೀಗ ಕೋಲಾಹಲಕ್ಕೆ ಕಾರಣಾಗಿದೆ. 

ಕೆನಾಡದಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಖಲಿಸ್ತಾನಿ ಉಗ್ರ ಸುಖಾ ದುನೆಕೆ ಹತ್ಯೆಯಾಗಿದ್ದಾನೆ ಎಂದು ವರದಿಗಳು ಹೇಳುತ್ತಿದೆ. ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಅರ್ಶದೀಪ್ ಸಿಂಗ್ ಅಲಿಯಾಸ್ ಅರ್ಶಾ ದಾಲ ಜೊತೆ ಗುರುತಿಸಿಕೊಂಡಿದ್ದ ಸುಖಾ ದುನೆಕೆ ಹತ್ಯೆ ಕೆನಾಡದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಎರಡು ಗುಂಪಿನ ನಡುವೆ ನಡೆದ ಗ್ಯಾಂಗ್‌ವಾರ್‌ನಲ್ಲಿ ಸುಖಾ ದುನೆಕೆ ಹತ್ಯೆಯಾಗಿರವುದಾಗಿ ವರದಿ ಬಹಿರಂಗಪಡಿಸಿದೆ. ಆದರೆ ಕೆನಾಡದ ಕೆಲ ಮಾಧ್ಯಮಗಳು ಈ ಹತ್ಯೆ ಹಿಂದೆ ಭಾರತದ ಕೈವಾಡವದ ಸಾಧ್ಯತೆ ಇದೆ ಅನ್ನೋ ಅನುಮಾನ ವ್ಯಕ್ತಪಡಿಸಿದೆ. 

Tap to resize

Latest Videos

ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ

ಕೆನಾಡದಲ್ಲಿನ ಖಲಿಸ್ತಾನ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಸುಖಾ ದುನೆಕೆ ಭಾರತ ವಿರೋಧಿ ಹೇಳಿಕೆ ಹಾಗೂ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇದೀಗ ನಿಜ್ಜರ್ ಸಾವಿನ ಆರೋಪಗಳ ಬೆನ್ನಲ್ಲೇ ದುನೆಕೆ ಹತ್ಯೆ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕತೆಗೆ ಮತ್ತಷ್ಟು ಹೊಡೆತ ನೀಡಲಿದೆ.

ಕೆನಡಾ ಪ್ರಧಾನಿ ಆರೋಪವನ್ನು ಅಲ್ಲಗೆಳೆದಿರುವ ಭಾರತ, ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿ ಛೀಮಾರಿ ಹಾಕಿದೆ. ಇಷ್ಟೇ ಅಲ್ಲ 5 ದಿನದೊಳಗೆ ಭಾರತ ಬಿಟ್ಟು ತೊಲಗುವಂತೆ ಸೂಚನೆ ನೀಡಿದೆ. ಇತ್ತ ಕೆನಾಡದಲ್ಲಿರುವ ಹಿಂದೂಗಳಿಗೆ ಖಲಿಸ್ತಾನಿ ಬೆಂಬಲಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ ಬೆದರಿಕೆ ಹಾಕಿದೆ. ತಕ್ಷಣವೇ ಕೆನಡಾ ತೊರೆಯುವಂತೆ ಸೂಚನೆ ನೀಡಿದೆ.

ಜಸ್ಟಿನ್ ಟ್ರುಡೋಗೆ ಭಾರತದಲ್ಲಿ ಅವಮಾನ, ಕೆನಡಾದಲ್ಲಿ ವಿಪಕ್ಷಗಳ ಹೋರಾಟ

ಕೆನಡಾದ ಕೆಲವು ಭಾಗಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅಲ್ಲಿರುವ ತನ್ನ ಪ್ರಜೆಗಳು ಹಾಗೂ ಅಲ್ಲಿಗೆ ಹೋಗಲು ಯೋಜಿಸುತ್ತಿರುವ ಭಾರತೀಯರಿಗೆ ಅತ್ಯಂತ ಜಾಗರೂಕರಾಗಿರುವಂತೆ ಭಾರತ ಬುಧವಾರ ಸಲಹೆ ನೀಡಿದೆ. ಕಳೆದ ಜೂನ್‌ನಲ್ಲಿ ಹತ್ಯೆಯಾದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಏಜೆಂಟರುಗಳ ಭಾಗಿಯಾಗಿರುವ ಸಾಧ್ಯತೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

click me!