21 ವರ್ಷದ ಟಿಕ್‌ಟಾಕ್ ಸ್ಟಾರ್ ತಾನ್ಯಾ ಪರ್ದಾಜಿ ಅವರು ದುರಂತ ಸಾವು ಕಂಡಿದ್ದಾರೆ. ಸ್ಕೈಡೈವಿಂಗ್ ಕೋರ್ಸ್ ತರಬೇತಿ ವೇಳೆ ಪ್ಯಾರಾಚೂಟ್ ಅನ್ನು ತೆರೆಯಲು ವಿಳಂಬ ಮಾಡಿದ ಹಿನ್ನೆಲೆ ಮೇಲಿನಿಂದ ಬಿದ್ದು ದುರಂತ ಸಾವು ಕಂಡಿದ್ದಾರೆ
21 ವರ್ಷದ ಟಿಕ್‌ಟಾಕ್ ಸ್ಟಾರ್ ತಾನ್ಯಾ ಪರ್ದಾಜಿ ಅವರು ದುರಂತ ಸಾವು ಕಂಡಿದ್ದಾರೆ. ಸ್ಕೈಡೈವಿಂಗ್ ಕೋರ್ಸ್ ತರಬೇತಿ ವೇಳೆ ಪ್ಯಾರಾಚೂಟ್ ಅನ್ನು ತೆರೆಯಲು ವಿಳಂಬ ಮಾಡಿದ ಹಿನ್ನೆಲೆ ಮೇಲಿನಿಂದ ಬಿದ್ದು ದುರಂತ ಸಾವು ಕಂಡಿದ್ದಾರೆ. ಇವರು ಆಗಸ್ಟ್ 27 ರಂದು ಕೆನಡಾದ ಒಂಟಾರಿಯೊದಲ್ಲಿ ಸ್ಕೈಡೈವಿಂಗ್ ತರಬೇತಿ ಪಡೆಯುತ್ತಿದ್ದರು. ದುರಂತದ ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸ್ಕೈಡೈವ್ ಟೊರೊಂಟೊದ ಹೇಳಿಕೆಯ ಪ್ರಕಾರ ತಾನ್ಯಾ ಪರ್ದಾಜಿ (Tanya Pardazi) ಇನ್ನೇನು ನೆಲ ಮುಟ್ಟುವ ಸ್ವಲ್ಪ ಸೆಕೆಂಡುಗಳ ಮೊದಲು ಪ್ಯಾರಾಚೂಟ್ ಒಪನ್ ಮಾಡಿದರು ಇದರಿಂದ ಪ್ಯಾರಾಚೂಟ್‌ಗೆ ತೆರೆದುಕೊಳ್ಳಲು ಸಮಯ ಸಿಗದೇ ತಾನ್ಯಾ ದುರಂತ ಸಾವು ಕಂಡಿದ್ದಾರೆ.
ಘಟನೆ ಬಗ್ಗೆ ದಕ್ಷಿಣ ಸಿಮ್ಕೊ ಪೊಲೀಸ್ ತನಿಖೆ ನಡೆಸುತ್ತಿದೆ. ಈ ವೇಳೆ ಸ್ಕೈಡೈವ್ ಟೊರೊಂಟೊ (Skydive Toronto) ಹೇಳಿಕೆ ನೀಡಿದ್ದು, ಸ್ಕೈಡೈವಿಂಗ್ ತಂಡಕ್ಕೆ ತಾನ್ಯಾ ಪರ್ದಾಜಿ ಸ್ವಾಗತಾರ್ಹ ಸೇರ್ಪಡೆಯಾಗಿದ್ದಳು (welcome addition) ತಾನ್ಯಾ ನಿಧನದಿಂದ ಆಕೆಯ ಹೊಸ ಸ್ನೇಹಿತರು ಮತ್ತು ಸಹ ಡೈವರ್‌ಗಳು ಆಘಾತಕ್ಕೊಳಗಾಗಿದ್ದಾರೆ. ನಮ್ಮ ವಿದ್ಯಾರ್ಥಿಗಳು ತಾನ್ಯಾ ಸಾವಿನಿಂದ ಗಾಢವಾಗಿ ಪ್ರಭಾವಕ್ಕೊಳಗಾಗಿದ್ದಾರೆ ಎಂದು ಸ್ಕೈಡೈವ್ ಟೊರೊಂಟೊ ಹೇಳಿದೆ.
Forever part of our team and in our hearts, Tanya Pardazi was one in a million pic.twitter.com/roisnXWcjI
— UTSC Cheerleading (@UTSC_cheer)ತಾನ್ಯಾ ಪರ್ದಾಜಿ ಅವರು 2017 ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ (Canada beauty pageant) ಸೆಮಿ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ಜೊತೆಗೆ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ ಓದುತ್ತಿದ್ದರು. ಆಕೆಯ ನಿಧನದಿಂದ ಆಕೆಯ ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿದ್ದು, ಆಕೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಅಮೆರಿಕಾದಲ್ಲಿ ಕನ್ನಡದ ಸ್ಕೈ ಡೈವಿಂಗ್ ಪವರ್!
ಕಳೆದ ವರ್ಷ ಇದೇ ರೀತಿಯ ಅನಾಹುತದಲ್ಲಿ ಚೀನಾದ 23 ವರ್ಷದ ಸೋಶಿಯಲ್ ಮೀಡಿಯಾ ಸ್ಟಾರ್ 160 ಅಡಿ ಎತ್ತರದಿಂದ ಕ್ರೇನ್‌ನಿಂದ ಬಿದ್ದು ಸಾವನ್ನಪ್ಪಿದ್ದರು. ಆ ಅಪಘಾತ ಸಂಭವಿಸಿದಾಗ Xiao Qiumei ಎಂಬ ಹೆಸರಿನ ಸೋಶಿಯಲ್ ಮೀಡಿಯಾ ಸ್ಟಾರ್, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಕ್ಕಾಗಿ ವಿಡಿಯೋವೊಂದನ್ನು ರೆಕಾರ್ಡ್ ಮಾಡುತ್ತಿದ್ದಳು. ಕ್ರೇನ್ ಕ್ಯಾಬಿನ್‌ನಲ್ಲಿ (crane cabin) ಅಳವಡಿಸಿದ್ದ ಕ್ಯಾಮರಾದ ಮುಂದೆ ಮಾತನಾಡುತ್ತಲೇ ಆಕೆ ಕೆಳಗೆ ಬಿದ್ದು ಕೊನೆ ಉಸಿರೆಳೆದಿದ್ದಳು.
ಭಾರತದ ಫ್ಲ್ಯಾಗ್ ಹಿಡಿದು ಸ್ಕೈ ಡೈವಿಂಗ್ ಮಾಡಿದ ಸಫಾನ್‌ಗೆ ಅಣ್ಣಾಮಲೈ ಸ್ಫೂರ್ತಿ!
ಟಿಕ್‌ಟಾಕ್-ಡುಯೊಯಿನ್‌ನ ಚೈನೀಸ್ ಆವೃತ್ತಿಯಲ್ಲಿ ಅವಳು ಪ್ರಸಿದ್ಧ ಮುಖವಾಗಿದ್ದಳು. ಅಲ್ಲಿ ಅವಳು ತನ್ನ ಫಾಲೋವರ್‌ಗಳಿಗಾಗಿ ಹಲವು ದೈನಂದಿನ ಮತ್ತು ವೃತ್ತಿಪರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುತ್ತಿದ್ದಳು. ಆಕೆಯ ಸಾವಿನ ಬಳಿಕ ಕುಟುಂಬ ಆಕೆ ಇಟ್ಟ ಒಂದು ತಪ್ಪು ಹೆಜ್ಜೆಯಿಂದ ಜೀವನ ಅಂತ್ಯವಾಯ್ತು ಎಂದು ಹೇಳಿಕೊಂಡಿತ್ತು. ಆದರೆ ಘಟನೆಯ ಸಮಯದಲ್ಲಿ ಆಕೆ ವಿಡಿಯೋ ಮಾಡುತ್ತಿದ್ದಳು ಎಂಬುದನ್ನು ಪೋಷಕರು ನಿರಾಕರಿಸಿದ್ದರು. Qiumei ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು ಆದರೆ ಅವಳು ಸಂಪೂರ್ಣ ವೃತ್ತಿಪರಳಾಗಿದ್ದು, ಕೆಲಸದ ಸಮಯದಲ್ಲಿ ತನ್ನ ಫೋನ್ ಅನ್ನು ತನ್ನ ಬ್ಯಾಗ್‌ನೊಳಗೆ ಇಟ್ಟುಕೊಂಡಿದ್ದಾಳೆ ಎಂದು ಅವರು ಹೇಳಿದರು. 23 ವರ್ಷದ ಈಕೆ ಇಬ್ಬರು ಚಿಕ್ಕ ಮಕ್ಕಳಿಗೆ ತಾಯಿಯೂ ಆಗಿದ್ದರು.