ವಾರ್ತೆ ಓದುವಾಗ ನೊಣ ನುಂಗಿದ ಪತ್ರಕರ್ತೆ: ವಿಡಿಯೋ

Published : Sep 04, 2022, 12:26 PM IST
ವಾರ್ತೆ ಓದುವಾಗ ನೊಣ ನುಂಗಿದ ಪತ್ರಕರ್ತೆ: ವಿಡಿಯೋ

ಸಾರಾಂಶ

ಇಲ್ಲೊಂದು ಕಡೆ ಪತ್ರಕರ್ತೆಯೊಬ್ಬರು ಲೈವ್‌ನಲ್ಲಿ ಪಾಕಿಸ್ತಾನದ ಪ್ರವಾಹದ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದಾಗ ನೊಣ ನುಂಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹೇಳಿಕೊಂಡಿದ್ದಾರೆ. 

ಪತ್ರಕರ್ತರು, ವಾರ್ತಾ ವಾಚಕರ ಜೀವನ ಅಂದುಕೊಂಡಷ್ಟು ಸುಲಭವಿರುವುದಿಲ್ಲ. ಕೆಲವೊಮ್ಮೆ ಲೈವ್‌ನಲ್ಲೇ ಏನಾದರೂ ಅನಾಹುತಗಳು ಆಗಿ ಬಿಡುತ್ತವೆ. ಧುತ್ತನೇ ಎದುರಾಗುವ ಅನಾಹುತಗಳನ್ನು ನೇರಪ್ರಸಾರ ಮಾಡಬೇಕಾಗಿರುತ್ತದೆ. ಯೋಚನೆ ಮಾಡಲು ಸಮಯವಿಲ್ಲದೇ ತಡವರಿಸುವಂತಾಗುತ್ತದೆ. ಕೆಲವೊಮ್ಮೆ ಸ್ವಂತ ಕಸಿವಿಸಿಗಳು ಆಡಚಣೆಗಳನ್ನು ವೀಕ್ಷಕರಿಗೆ ತಿಳಿಯದಂತೆ ಮ್ಯಾನೇಜ್ ಮಾಡಬೇಕಾಗುತ್ತದೆ. ಮುಂದೆಯೇ ಕ್ಯಾಮರಾ ಇರುವುದರಿಂದ ಆತಂಕ ಉಂಟಾದರೂ ತೋರ್ಪಡಿಸಿಕೊಳ್ಳಲಾಗದಂತಹ ಸ್ಥಿತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಪತ್ರಕರ್ತೆಯೊಬ್ಬರು ಲೈವ್‌ನಲ್ಲಿ ಪಾಕಿಸ್ತಾನದ ಪ್ರವಾಹದ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದಾಗ ನೊಣ ನುಂಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹೇಳಿಕೊಂಡಿದ್ದಾರೆ. 

ಕೆನಡಾದ ನ್ಯೂಸ್ ಆಂಕರ್ ಆಗಿರುವ ಫರ್ಹಾ ನಸೀರ್ ಅವರು ಪಾಕಿಸ್ತಾನದ ಪ್ರವಾಹ (Pakistan floods) ಪರಿಸ್ಥಿತಿಯ ಬಗ್ಗೆ ಲೈವ್‌ನಲ್ಲಿ ವಿವರಿಸುತ್ತಿದ್ದಾಗ ಎಲ್ಲಿಂದಲೋ ಬಂದ ನೊಣವೊಂದು ಸೀದಾ ಫರ್ಹಾರ ತೆರೆದಿದ್ದ ಬಾಯಿಯೊಳಗೆ ಹೋಗಿದೆ. ಇದರಿಂದ ಕೆಲ ಕಾಲ ತುಸು ಗಾಬರಿಯಾದರೂ ತೋರಿಸಿಕೊಳ್ಳದ ಅವರು ನೊಣವನ್ನು ಬಾಯಿಯಿಂದ ತೆಗೆದು ಹೊರ ಹಾಕಲು ಪ್ರಯತ್ನಿಸದೇ ಹಾಗೆಯೇ ಕಷ್ಟಪಟ್ಟು ನುಂಗಿ ಬಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. 

ಇವರು ಗ್ಲೋಬಲ್‌ ನ್ಯೂಸ್ ಟೊರೊಂಟೋಗೆ (Global News Toronto) ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ನೊಣ ನುಂಗಿದ್ದರೂ ಕೂಡ ಹೆಚ್ಚು ತಲೆಕೆಡಿಸಿಕೊಳ್ಳದೇ ನಿರೂಪಣೆ ಮುಂದುವರಿಸಿದ್ದಾರೆ. ಅಲ್ಲದೇ ಈ ವಿಚಾರವನ್ನು ನಂತರ ತಮಾಷೆಯಾಗಿ ತೆಗೆದುಕೊಂಡ ಅವರು, ಈ ವಿಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ಈ ದಿನಗಳಲ್ಲಿ ನಮಗೆ ನಗು ಅಗತ್ಯವಾಗಿದೆ. ನಾನಿವತ್ತೂ ನೇರ ನಿರೂಪಣೆ ವೇಳೆ ನೊಣವನ್ನು ನುಂಗಿದೆ ಎಂದು ಬರೆದುಕೊಂಡಿದ್ದಾರೆ.

ಆದಾಗ್ಯೂ, ನಂತರ ಸಂದರ್ಶನವೊಂದರಲ್ಲಿ, ಎಂಟರ್‌ಟೈನ್‌ಮೆಂಟ್ ಟುನೈಟ್ ಕೆನಡಾದ (Entertainment Tonight Canada) ಹೋಸ್ಟ್‌ಗಳಾದ ಚೆರಿಲ್ ಹಿಕಿ (Cheryl Hickey) ಮತ್ತು ಡಲ್ಲಾಸ್ ಡಿಕ್ಸನ್ (Dallas Dixon) ಅವರೊಂದಿಗೆ ಈ ಕ್ಷಣದ ಬಗ್ಗೆ ಫರ್ಹಾ ನಸೀರ್ ಮಾತನಾಡಿದ್ದು, ನಾನು ಸುದ್ದಿಯ ಆರಂಭದಲ್ಲಿ ನೊಣ ನನ್ನ ಸುತ್ತಲು ಹಾರುತ್ತಿರುವುದನ್ನು ನೋಡಿದೆ. ಮತ್ತು ನಾನು ಇವತ್ತು ಬೇಡ ಬೇರೆಡೆ ಹಾರು ಇವತ್ತು ಮಾತ್ರ ಬೇಡ ಅನ್ನುವಂತಿದ್ದೆ. ಇವತ್ತು ನನಗೆ ಅಡ್ಡಿ ಮಾಡಲು ನಾನು ಬಿಡುವುದಿಲ್ಲ ಎಂಬಂತಿದ್ದೆ. ಆದರೆ ನೊಣ ಬಂದು ಬಾಯಿ ಸೇರಿಯೇ ಬಿಟ್ಟಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. 

ನ್ಯೂಸ್ ಆಂಕರ್‌ಗಳಿಗೆ ಕೇವಲ ಟೆಲಿಪ್ರೊಂಪ್ಟರ್‌ನಲ್ಲಿ(teleprompter) ಬರುವ ಸಾಲುಗಳನ್ನು ಓದುವ ಕೆಲಸ ಮಾತ್ರ ಇರುವುದಿಲ್ಲ. ಅವರು ಹಲವು ಒತ್ತಡದ ಸಂದರಭಗಳನ್ನು ಕೂಲಾಗಿ ನಿಭಾಯಿಸಬೇಕಾಗುತ್ತದೆ. ಅನೇಕ ನಿರೂಪಕರು, ಸಮಯ ಮತ್ತು ಕೆಲವು  ಅಹಿತಕರ ಸಂದರ್ಭಗಳಲ್ಲಿ ಸಿಲುಕಿ ಪರೀಕ್ಷಿಸಲ್ಪಟ್ಟಿದ್ದಾರೆ . ಧುತ್ತನೇ ಎದುರಾಗುವ ಎದುರಾಗುವ ಹೆಚ್ಚಿನ ಮಾಹಿತಿಗಳಿಲ್ಲದ ಸಂದರ್ಭವನ್ನು ಸಹಜ ಎಂಬಂತೆ ನಿಭಾಯಿಸುವ ನಿರೂಪಣೆ ಸುಲಭದ ಮಾತಲ್ಲ. 

ಇತ್ತ ಪಾಕಿಸ್ತಾನದಲ್ಲಿ ಎಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಜನ ತತ್ತರಿಸಿದ್ದಾರೆ. ಎಂಟು ವಾರಗಳ ಕಾಲ ನಿಲ್ಲದ ಧಾರಾಕಾರ ಮಳೆಯಿಂದ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಹವಾಮಾನ ವೈಪರೀತ್ಯವೂ ಆತಂಕಕಾರಿಯಾಗಿದ್ದು, ಜನ ತಿನ್ನಲು ಆಹಾರವಿಲ್ಲದೇ ಆಕಾಶ ನೋಡುವಂತಹ ಸ್ಥಿತಿ ಇದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್