ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

By Suvarna News  |  First Published Jul 11, 2020, 8:40 AM IST

ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಟಿಕ್‌ಟಾಕ್| ಪರಿಸ್ಥಿತಿಯಿಂದ ಪಾರಾಗಲು ಚೀನಾ ತೊರೆಯಲು ಮುಂದಾದ ಟಿಕ್‌ಟಾಕ್| ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ನಿಂದ ಪ್ರತ್ಯೇಕ?


ಬೀಜಿಂಗ್‌(ಜು.11): ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಚೀನಾ ಮೂಲದ ಟಿಕ್‌ಟಾಕ್‌, ಈ ಪರಿಸ್ಥಿತಿಯಿಂದ ಪಾರಾಗಲು ತನ್ನ ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವತ್ತ ಹೆಜ್ಜೆ ಇಟ್ಟಿದೆ. ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ನಿಂದ ಪ್ರತ್ಯೇಕಗೊಂಡು ಹೊಸ ಆಡಳಿತ ಮಂಡಳಿ ರಚಿಸುವುದು, ಟಿಕ್‌ಟಾಕ್‌ನ ಹೊಸ ಕೇಂದ್ರ ಕಚೇರಿಯನ್ನು ಚೀನಾ ಬಿಟ್ಟು ಬೇರೆ ಯಾವುದಾದರೂ ದೇಶದಲ್ಲಿ ಆರಂಭಿಸುವುದೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

Tap to resize

Latest Videos

undefined

ಚೀನಿ ಆ್ಯಪ್‌ಗಳಿಗೆ ಕಾಯಂ ನಿಷೇಧ ಭೀತಿ:

ಈ ನಡುವೆ, ಇತ್ತೀಚೆಗಷ್ಟೇ ಚೀನಾದ ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳನ್ನು ನಿಷೇಧಿಸಿದ್ದ ಭಾರತ ಸರ್ಕಾರ, ಇದೀಗ ಅವುಗಳಿಗೆ ತಲಾ 79 ಪ್ರಶ್ನೆಗಳನ್ನು ಹಾಕಿದೆ. ಈ ಪ್ರಶ್ನೆಗಳಿಗೆ ಅವು ಜುಲೈ 22 ರೊಳಗೆ ಸೂಕ್ತ ಉತ್ತರ ನೀಡದೇ ಹೋದಲ್ಲಿ ಅವುಗಳು ಕಾಯಂ ನಿಷೇಧ ಎದುರಿಸಬೇಕಾಗಿ ಬರಲಿದೆ ಎನ್ನಲಾಗಿದೆ.

ಗಡಿ ಕ್ಯಾತೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಇತ್ತೀಚೆಗೆ ಟಿಕ್‌ಟಾಕ್‌ ಆ್ಯಪ್‌ ನಿಷೇಧಿಸಿತ್ತು. ಇನ್ನು ಅಮೆರಿಕದ ಗ್ರಾಹಕರ ದತ್ತಾಂಶಗಳನ್ನು ಚೀನಾ ಸರ್ಕಾರದ ವಶಕ್ಕೆ ಒಪ್ಪಿಸುತ್ತಿರುವ ಆರೋಪ ಮತ್ತು ಕೆಲ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪಕ್ಕಾಗಿ ಟಿಕ್‌ಟಾಕ್‌ ನಿಷೇಧಿಸುವ ಬಗ್ಗೆ ಅಮೆರಿಕ ಗಂಭೀರ ಚಿಂತನೆ ನಡೆಸಿದೆ. ಆ್ಯಪ್‌ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯ ಹೊಂದಿದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವಿದೇಶಾಂಗ ಸಚಿವ ಮೈಕ್‌ ಪೊಂಪೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ದೇಸಿ ಟಿಕ್‌ಟಾಕ್ 'ರೊಪೋಸೋ': ಎರಡೇ ದಿನದಲ್ಲಿ 2.2 ಕೋಟಿ ಡೌನ್‌ಲೋಡ್‌!

ಹೀಗಾಗಿ ತನ್ನ ಆದಾಯದಲ್ಲಿ ದೊಡ್ಡ ಪಾಲು ಹೊಂದಿರುವ ಅಮೆರಿಕ ಮಾರುಕಟ್ಟೆಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾತೃಸಂಸ್ಥೆಯಿಂದ ಪ್ರತ್ಯೇಕಗೊಂಡು ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಚೀನಾದ ಹೊರಗೆ ಕೇಂದ್ರ ಕಚೇರಿ ಸ್ಥಾಪನೆ ಮೂಲಕ, ತಾನು ತನ್ನ ಗ್ರಾಹಕರ ಯಾವುದೇ ಮಾಹಿತಿಯನ್ನು ಚೀನಾ ಸರ್ಕಾರಕ್ಕೆ ನೀಡುತ್ತಿಲ್ಲ ಎಂದು ವಿವಿಧ ದೇಶಗಳಿಗೆ ಮನವರಿಕೆ ಮಾಡಿಕೊಡಲು ಟಿಕ್‌ಟಾಕ್‌ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಅಲೆಕ್ಸ್‌ ಚೂ

ಕಂಪನಿಯ ಹೊಣೆಗಾರಿಕೆಯನ್ನು ಅಮೆರಿಕದಲ್ಲಿರುವ ಕಂಪನಿಯ ಸಿಇಒ ಕೆವಿನ್‌ ಮೇಯರ್‌ಗೆ ನೀಡಿದ್ದಾರೆ. ಅಲ್ಲದೆ ಅಮೆರಿಕದ ಭೀತಿ ನಿವಾರಿಸಲು ವಾಷಿಂಗ್ಟನ್‌ನಲ್ಲಿ ಟ್ರಾನ್ಸ್‌ಪರೆನ್ಸಿ ಸೆಂಟರ್‌ ಕೂಡಾ ಆರಂಭಿಸಿದೆ.

59 ಚೀನೀ ಆ್ಯಪ್‌ ನಿಷೇಧ; ಭಾರತೀಯ ಎಂಜಿನೀಯರ್‌ಗಳು ತಯಾರಿಸ್ತಾರಾ ಹೊಸ ಆ್ಯಪ್‌?

ವಿಶ್ವದಾದ್ಯಂತ 200 ಕೋಟಿಗೂ ಹೆಚ್ಚು ಬಾರಿ ಟಿಕ್‌ಟಾಕ್‌ ಆ್ಯಪ್‌ ಡೌನ್‌ಲೋಡ್‌ ಆಗಿದ್ದು, ಅತ್ಯಂತ ಜನ್ರಪಿಯ ಆ್ಯಪ್‌ ಎನ್ನಿಸಿಕೊಂಡಿದೆ.

click me!