ಪಾಂಡಾಗಳು ಮನುಷ್ಯರೊಂದಿಗೆ ಉತ್ತಮ ಬಂಧವನ್ನು ಹೊಂದಿದ್ದು, ತಮ್ಮ ಮುದ್ದು ಮುದ್ದಾದ ನಡವಳಿಕೆಯಿಂದ ಎಲ್ಲರನ್ನು ಆಕರ್ಷಿಸುತ್ತವೆ. ಹಾಗೆಯೇ ಮೃಗಾಲಯದ ಸಿಬ್ಬಂದಿಯೊಬ್ಬರು ಪಾಂಡಾ ಮರಿಯೊಂದನ್ನು ತೊಡೆ ಮೇಲೆ ಮಲಗಿಸಿಕೊಂಡು ಬಾಟಲಿ ಮೂಲಕ ಹಾಲು ಕುಡಿಸುತ್ತಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Buitengebieden ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಮೃಗಾಲಯದ ಸಿಬ್ಬಂದಿ ಒಂದು ಅಡ್ಡಲಾಗಿ ಹಾಸಲಾದ ಮರವೊಂದರ ಮೇಲೆ ಕುಳಿತುಕೊಂಡು ತಮ್ಮ ತೊಡೆಯ ಮೇಲೆ ಪಾಂಡಾ ಮರಿಯನ್ನು ಮಲಗಿಸಿಕೊಂಡು ಬಾಟಲ್ ಮೂಲಕ ಹಾಲನ್ನು ಕುಡಿಸುತ್ತಿರುತ್ತಾರೆ. ಈ ವೇಳೆ ಮತ್ತೊಂದು ಪಾಂಡಾವು ಮೃಗಾಲಯದ ಸಿಬ್ಬಂದಿ ಬಳಿ ತನಗೂ ನೀಡುವಂತೆ ಆಕೆಯ ತೊಡೆಯ ಮೇಲೆ ತನ್ನೆರಡು ಕೈಗಳನ್ನು ಇಡುತ್ತಾ ತೊಡೆಯ ಮೇಲೆ ಮಲಗಿರುವ ಪಾಂಡಾವನ್ನು ಎಳೆಯಲು ನೋಡುತ್ತಿರುತ್ತದೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿ ಜನ ತಾವು ಕೂಡ ಈ ರೀತಿ ಪಾಂಡಾ ಕೇರ್ ಟೇಕರ್‌ಗಳಾಗುವುದಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಯಾವ ಪ್ರದೇಶದ್ದು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ತಾಯಿ ಪ್ರೀತಿಗೆ ಮಿತಿ ಇರುವುದಿಲ್ಲ. ಆದಾಗ್ಯೂ ತನ್ನ ಮಕ್ಕಳಂತೆ ಬೇರೆಯವರ ಮಕ್ಕಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವವರು ಸಿಗುವುದು ವಿರಳ. ಆದರೆ ಇಲ್ಲೊಂದು ಶ್ವಾನ ತನ್ನದು ಮತ್ತೊಬ್ಬರದು ಎಂಬ ಬೇಧವಿಲ್ಲದೇ ತನ್ನ ಮರಿಗಳ ಜೊತೆಯಲ್ಲೇ ಒಂದು ಬೆಕ್ಕಿನ ಮರಿಗೂ ಹಾಲುಡಿಸುತ್ತಿದೆ. ತಾನು ತನ್ನದು ಎಂದು ಕಿತ್ತಾಡುವ ಮನುಷ್ಯರಿಗೆ ನಮ್ಮನ್ನು ನೋಡಿ ಬುದ್ಧಿ ಕಲಿಯಿರಿ ಎಂದು ಹೇಳುವಂತಿದೆ ಈ ವಿಡಿಯೋ. ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
Feeding black Dog : ಸಮಸ್ಯೆಗಳಿಂದ ದೂರವಾಗಲು ನಾಯಿಗೆ ಆಹಾರ ನೀಡಿ
ಒಳ್ಳೆ ತಾಯಿ, ತನ್ನ ಮರಿಗಳೊಂದಿಗೆ ಹಸಿದ ಬೆಕ್ಕಿನ ಮರಿಗೂ ಆಹಾರ ನೀಡುತ್ತಿದೆ ಎಂದು ಬರೆದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ಮನೆ ಮುಂದಿನ ಖಾಲಿ ಜಾಗದಲ್ಲಿ ಮಲಗಿಕೊಂಡಿದ್ದು, ಅದರ ಎರಡು ಮರಿಗಳು ತಾಯಿಯ ಹಾಲನ್ನು ಕುಡಿಯುತ್ತಿರುತ್ತವೆ. ಕೆಲವೇ ಕ್ಷಣಗಳಲ್ಲಿ,ಬೆಕ್ಕೊಂದು ಅಲ್ಲಿಗೆ ಬಂದು ನಾಯಿಯನ್ನೊಮ್ಮೆ ದಿಟ್ಟಿಸಿ ನೋಡಿ ನಾಯಿ ಮರಿಗಳೊಂದಿಗೆ ಸೇರಿಕೊಂಡು ಅದೂ ಕೂಡ ತಾಯಿಯ ಹಾಲನ್ನು ಕುಡಿಯಲು ಶುರು ಮಾಡುತ್ತದೆ. ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ನೂರಾರು ಜನ ಕಾಮೆಂಟ್ ಮಾಡಿದ್ದಾರೆ.
ಕಾಂಪಿಟೀಶನ್‌ಗೆ ಬಿದ್ದು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದ ಹಸು-ಕರು; ವಿಡಿಯೋ ವೈರಲ್!
ಇದೇ ರೀತಿಯ ಘಟನೆ ನಮ್ಮ ಮನೆಯಲ್ಲೂ ನಡೆದಿತ್ತು. ನನ್ನ ಸಹೋದರ ನಮ್ಮ ಮನೆಗೆ ಮೂರು ವಾರಗಳ ಬೆಕ್ಕಿನ ಮರಿಯನ್ನು ತಂದಿದ್ದನು. ನನ್ನ ನಾಯಿಯು ಅದೇ ವಯಸ್ಸಿನ ಮರಿಗಳನ್ನು ಹೊಂದಿತ್ತು. ನಾವು ಏನು ಮಾಡಬೇಕೆಂದು ತಿಳಿಯದೆ, ನಾಯಿಮರಿಗಳೊಂದಿಗೆ ಬೆಕ್ಕಿನ ಮರಿಯನ್ನು ಬಿಟ್ಟಿದ್ದೆವು. ನಂತರ ಅದು ನಾಯಿಯ ಹಾಲನ್ನು ಕುಡಿಯಲು ಶುರು ಮಾಡಿತ್ತು. ನಮ್ಮ ನಾಯಿ ಕೂಡ ಬೆಕ್ಕಿನ ಮರಿಯನ್ನು ದೂರು ಮಾಡದೇ ಅದಕ್ಕೂ ಹಾಲುಡಿಸಿತು ಎಂದು ಈ ವಿಡಿಯೋ ನೋಡಿದ ಬಳಿಕ ನೋಡುಗರೊಬ್ಬರು ಅವರ ಮನೆಯಲ್ಲಾದ ಘಟನೆಯನ್ನು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ