ಪೊಲೀಸ್ ಇಲಾಖೆ ತಮ್ಮ ಕಾರ್ಯಾಚರಣೆಗೆ ನಾಯಿ ಮರಿಯೊಂದನ್ನು ತಂದಿದೆ. ಇದೀಗ ತರಬೇತಿ ಕಾರ್ಯಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ, ಮುದ್ದಿನ ನಾಯಿಮರಿಗೆ ಹೆಸರ ಸೂಚಿಸಲು ಪೊಲೀಸರು ಮನವಿ ಮಾಡಿದ್ದಾರೆ.
ಮಸಾಚುಸೆಟ್ಸ್(ಆ.30) ಪೊಲೀಸ್ ಇಲಾಖೆ ತಮ್ಮ ಕಾರ್ಯಾಚರಣೆಗೆ ನಾಯಿಯನ್ನು ಹೆಚ್ಚು ಬಳಕೆ ಮಾಡುತ್ತಾರೆ. ಇದಕ್ಕಾಗಿ ಚಿಕ್ಕ ನಾಯಿ ಮರಿಯನ್ನು ತಂದು ರಾಜಾತಿಥ್ಯ ನೀಡುತ್ತಾರೆ. ಬಳಿಕ ಅಷ್ಟೇ ಕಠಿಣ ತ ತರಬೇತಿ ನೀಡಿ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಾರೆ. ಇದೀಗ ಪೊಲೀಸರು ಮುದ್ದನ ನಾಯಿ ಮರಿಯನ್ನು ತಂದು ತರಬೇತಿ ನೀಡಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ನಾಯಿ ಮರಿಗೆ ಹೆಸರು ಸೂಚಿಸಲು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ನೀವು ಹೆಸರೂ ಸೂಚಿಸಬಹುದು. ಆದರೆ ಈ ನಾಯಿ ಅಮೆರಿಕದ ಮಸಾಚುಸೆಟ್ಸ್ ಪೊಲೀಸ್ ಇಲಾಖೆ ಸೇರಿಕೊಂಡಿದೆ. ಹೀಗಾಗಿ ನೀವು ಸೂಚಿಸುವ ಹೆಸರು ಮೆಸಾಚುಸೆಟ್ಸ್ ಪರಿಸರಕ್ಕೆ ಹೊಂದಿಕೊಳ್ಳುವಂತಿದ್ದರೆ ಒಳಿತು.
ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಮಸಾಚುಸೆಟ್ಸ್ ರಾಜ್ಯ ಪೊಲೀಸ್, ಸಾರ್ವಜನಿಕರ ಗಮನಕ್ಕೆ, ನಿಮ್ಮ ಸಹಾಯವೊಂದು ಬೇಕಿದೆ ಎಂದಿದೆ. ಈ ಮುದ್ದು ನಾಯಿ ಮರಿಗೆ ಹೆಸರೊಂದು ಬೇಕಿದೆ. ನಿಮ್ಮಲ್ಲಿ ನಮ್ಮ ವಿನಂತಿ ಎಂದರೆ, ನಮ್ಮ ಪೊಲೀಸ್ ಪಡೆ ಸೇರಿಕೊಂಡಿರುವ ಈ ಮುದ್ದು ನಾಯಿ ಮರಿಗೆ ಹೆಸರು ಸೂಚಿಸಬೇಕು. ಈ ಪುಟ್ಟ ನಾಯಿ ಮರಿ ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದೆ. ಕರ್ತವ್ಯಕ್ಕೆ ಹಾಜರಾಗುವ ವೇಳೆ ಹೆಸರು ಕಡ್ಡಾಯವಾಗಿದೆ. ಈಗಷ್ಟೇ ಪೊಲೀಸ್ ಪಡೆ ಸೇರಿಕೊಂಡಿರುವ ಈ ನಾಯಿ ಮರಿ, ಇದೀಗ ಪಪ್ಪಿ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದೆ. ಬಳಿಕ ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದೆ ಎಂದು ಮಸಾಚುಸೆಟ್ಸ್ ಪೊಲೀಸರು ಹೇಳಿದ್ದಾರೆ.
ಈ ಶ್ವಾನಕ್ಕಿದೆ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗೂ ಹೆಚ್ಚು ಫಾಲೋವರ್
ನಾಯಿ ಮರಿ ಸದ್ಯ ಪ್ರಿನ್ಸೆಟಾನ್ ರಸ್ತೆಗಳಲ್ಲಿ ಸಂಚರಿಸಿ ಪರಿಸ್ಥಿತಿ ಅವಲೋಕಿಸುತ್ತಿದೆ. ಶೀಘ್ರದಲ್ಲೇ ಪೊಲೀಸ ಪ್ಯಾಟ್ರೋಲ್‌ನಲ್ಲಿ ಈ ನಾಯಿ ಮರಿ ನಿಮ್ಮೆಲ್ಲರನ್ನು ಭೇಟಿಯಾಗಲಿದೆ. ಈ ನಾಯಿ ಮರಿಗೆ ಹೆಸರು ಸೂಚಿಸಿ ಎಂದು ಮಸಾಚುಸೆಟ್ಸ್ ಪೊಲೀಸರು ಹೇಳಿದ್ದಾರೆ.
ಈ ನಾಯಿ ಮರಿ ಪ್ರಿನ್ಸೆಟಾನ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಳ್ಳಲಿದೆ. ಹೀಗಾಗಿ ಹಲವರು ಪ್ರಿನ್ಸ್ ಟಾನ್ ಎಂದು ಹೆಸರು ಸೂಚಿಸಿದ್ದಾರೆ. ಇನ್ನು ಕೆಲವರು ಬ್ರುನೋ, ಬಾರ್ಕರ್, ಬಿಯರ್, ಚೆಸ್ಟರ್, ಬರ್ಗಿ, ಬ್ರೂಕರ್, ಪ್ಯಾಂಥರ್, ಬಿಲ್‌ಫೋರ್ಡ್, ಕ್ರೂಸರ್ ಸೇರಿದಂತೆ ಹಲವು ಹೆಸರಗಳನ್ನೂ ಸೂಚಿಸಿದ್ದಾರೆ. ಸದ್ಯ ಬಂದಿರುವ ಹೆಸರುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಟ್ರೆಡ್‌ಮಿಲ್‌ನಲ್ಲಿ ನಾಯಿಮರಿಯೊಂದಿಗೆ ದೀದೀ ವರ್ಕೌಟ್: ವೀಡಿಯೋ ವೈರಲ್
ಭಾರತದ ಪೊಲೀಸ್ ಇಲಾಖೆಯಲ್ಲೂ ಹಲವು ನಾಯಿಗಳು ಸೇವೆ ಸಲ್ಲಿಸುತ್ತಿದೆ. ಇತ್ತೀಚೆಗೆ ಅಂಕೋಲಾದ ಬಾವಿಕೇರಿ ಊರಿನ ರಾಘವೇಂದ್ರ ಭಟ್ ಸಾಕಿದ ನಾಯಿಮರಿಗಳು ಭಾರತೀಯ ಸೇನೆಯಲ್ಲಿ ಸೇವೆಗೆ ನಿಯೋಜನೆಗೊಂಡಿತ್ತು. ಲ್ಜಿಯಂ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳು ಅಸ್ಸಾಂನಲ್ಲಿ ಭಾರತೀಯ ಸೇನೆ ಸೇರಿಕೊಂಡಿತ್ತು.