
ಟೆಲ್ ಅವಿವ್/ತೆಹ್ರಾನ್(ಏ.16): ತನ್ನ ಮೇಲೆ ಇರಾನ್ ದಾಳಿ ಮಾಡಿದ್ದಕ್ಕೆ ಕೆಂಡಾಮಂಡಲ ಆಗಿರುವ ಇಸ್ರೇಲ್, ಸೂಕ್ತ ಸಮಯ ನೋಡಿಕೊಂಡು ಹಾಗೂ ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ತಿರುಗೇಟು ನೀಡಲಿದೆ ಎಂದು ಗುಡುಗಿದೆ. ಅಲ್ಲದೆ, ಇರಾನ್ ಮೇಲೆ ನಿರ್ಬಂಧ ಹೇರಬೇಕು ಎಂದೂ ವಿಶ್ವಸಂಸ್ಥೆಗೆ ಆಗ್ರಹಿಸಿದೆ.
ಇದರ ನಡುವೆ ಇರಾನ್ ಪ್ರತಿಕ್ರಿಯಿಸಿ, ‘ನಾವು ದಾಳಿ ಮಾಡಿದ್ದು 1 ದಿನದ ಮಟ್ಟಿಗೆ ಮಾತ್ರ. ವಿಷಯವು ಮುಕ್ತಾಯಗೊಂಡಿದೆ ಎಂದು ಪರಿಗಣಿಸಬಹುದು’ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ. ‘ಆದಾಗ್ಯೂ, ಇಸ್ರೇಲಿ ಆಡಳಿತವು ಮತ್ತೊಂದು ತಪ್ಪು ಮಾಡಿದರೆ, ಇರಾನ್‌ನ ಪ್ರತಿಕ್ರಿಯೆಯು ಗಣನೀಯವಾಗಿ ಹೆಚ್ಚು ತೀವ್ರವಾಗಿರುತ್ತದೆ’ ಎಂದೂ ಎಚ್ಚರಿಸಿದೆ.
ಭಾರತಕ್ಕೆ ರಾಜತಾಂತ್ರಿಕ ಗೆಲುವು, ಇರಾನ್ ವಶಪಡಿಸಿದ ಹಡಗಿನಲ್ಲಿದ್ದ 17 ಭಾರತೀಯರ ಭೇಟಿಗೆ ಅವಕಾಶ!
ಆದರೆ ಇರಾನ್ ತಣ್ಣಗಾದ ನಂತರ ಇಸ್ರೇಲ್ ಮಿತ್ರ ದೇಶ ಅಮೆರಿಕವೂ ತಣ್ಣಗಾಗಿದೆ. ‘ಇರಾನ್ ವಿರುದ್ಧ ಯಾವುದೇ ಪ್ರತೀಕಾರದ ಕ್ರಮಗಳಿಗೆ ವಾಷಿಂಗ್ಟನ್ ತನ್ನ ಮಿಲಿಟರಿ ಬೆಂಬಲವನ್ನು ನೀಡುವುದಿಲ್ಲ’ ಎಂದು ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿದ್ದಾರೆ. ಇದರ ನಡುವೆ ಇಸ್ರೇಲ್‌ನತ್ತ ತೂರಿ ಬಂದ ಇರಾನ್‌ನ 80 ಕ್ಷಿಪಣಿಗಳನ್ನು ಹೊಡೆದಿದ್ದು ತಾನು ಎಂದು ಅಮೆರಿಕ ಹೇಳಿಕೊಂಡಿದೆ.
ಸಿರಿಯಾದಲ್ಲಿನ ಇಸ್ರೇಲಿ ಸೇನಾಧಿಕಾರಿಗಳನ್ನು ಇತ್ತೀಚೆಗೆ ಇಸ್ರೇಲ್ ವಾಯುದಾಳಿ ನಡೆಸಿ ಸಾಯಿಸಿತ್ತು. ಅದಕ್ಕೆ ಪ್ರತೀಕಾರವಾಗಿ ಭಾನುವಾರ ಇಸ್ರೇಲ್ ಮೇಲೆ ಇರಾನ್ 300 ಕ್ಷಿಪಣಿಗಳಿಂದ ದಾಳಿ ಮಾಡಿತ್ತು. ಆದರೆ ಗುರಿ ಸಾಧನೆ ಆದ ಕಾರಣ ದಾಳಿ ನಿಲ್ಲಿಸಿದ್ದೇವೆ ಎಂದು ಸಾರಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ