ಅಫ್ಘಾನ್ ಸರ್ಕಾರದ ವಿರುದ್ಧ ಉಗ್ರರಿಗೆ ಸ್ಥಳೀಯರ ನೆರವು ಸಿಕ್ಕಿದ್ದು ಹೇಗೆ?

By Suvarna NewsFirst Published Aug 17, 2021, 10:07 AM IST
Highlights

* ಆಫ್ಘಾನಿಸ್ತಾನದ ಸರ್ಕಾರದ ಅದಕ್ಷತೆ ಮತ್ತು ಭ್ರಷ್ಟಾಚಾರ

* ದೇಶದ ಜನರನ್ನು ರೋಸಿ ಹೋಗುವಂತೆ ಮಾಡಿದ್ದ ಅಪ್ಘಾನ್ ಸರ್ಕಾರದ ಆಡಳಿತ

* ಸ್ಥಳೀಯರ ಮನ ಗೆದ್ದಿದ್ದ ತಾಲಿಬಾನ್

ಕಾಬೂಲ್‌(ಆ.17): ಆಫ್ಘಾನಿಸ್ತಾನದ ಸರ್ಕಾರದ ಅದಕ್ಷತೆ ಮತ್ತು ಭ್ರಷ್ಟಾಚಾರ ದೇಶದ ಜನರನ್ನು ರೋಸಿಹೋಗುವಂತೆ ಮಾಡಿತ್ತು. ಶಿಕ್ಷಣ ನೀಡುವಲ್ಲಿಯೂ ಸರ್ಕಾರ ಸೋತಿತ್ತು ಈ ಅವಕಾಶ ಬಳಸಿಕೊಂಡ ತಾಲಿಬಾನಿಗಳು ಇಸ್ಲಾಂ ಕುರಿತು ಕಲಿಸುವ ಶಾಲೆಗಳ ಮೇಲೆ ನಿಯಂತ್ರಣ ಸಾಧಿಸಿ ಯುವಕರನ್ನು ತಮ್ಮತ್ತ ಸೆಳೆದುಕೊಂಡರು.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಆಧಿಕಾರಕ್ಕೆ ಬಂದರೆ ಭ್ರಷ್ಟಚಾರ ಮುಕ್ತ ದೇಶ ನಿರ್ಮಿಸುವುದಾಗಿ ಜನರಿಗೆ ಭರವಸೆ ನೀಡಿದ್ದರು. ಮತ್ತೊಂದು ಕಡೆಯಲ್ಲಿ ಪಾಕಿಸ್ತಾನ ಸೌದಿ ಅರೇಬಿಯಾ, ಯುಎಇ, ಕತಾರ್‌ ಮುಂತಾದ ಇಸ್ಲಾಂ ಕೇಂದ್ರಿತ ದೇಶಗಳಿಂದ ತಾಲಿಬಾನ್‌ ವ್ಯಾಪಕವಾದ ಸಹಾಯವನ್ನು ಪಡೆಯಿತು.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ವಿಶ್ವದ ಹಲವು ದೇಶಗಳು ತಾಲಿಬಾನ್‌ ಅನ್ನು ವಿರೋಧಿಸಿದರೂ ಈ ಇಸ್ಲಾಂ ದೇಶಗಳು ಮೌನವಹಿಸಿದ್ದವು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ವಿವಿಧ ಇಸ್ಲಾಂ ದೇಶಗಳಿಂದ ಸಂಗ್ರಹಿಸಿದ ನಿಧಿಯನ್ನು ತಾಲಿಬಾನಿಗಳಿಗೆ ಹಸ್ತಾಂತರಿಸುತ್ತಿತ್ತು. ತಾಲಿಬಾನಿಗಳು ಮಾದಕ ವಸ್ತು ವ್ಯಾಪಾರದಿಂದ ಸಾವಿರಾರು ಕೋಟಿ ಸಂಪಾದಿಸಿದರು.

click me!