ಲಿಫ್ಟ್‌ನಲ್ಲಿ ಸಿಕ್ಕ ಭಾರತೀಯ ಕುಟುಂಬವನ್ನು ಖುಷಿಯಿಂದ ಮಾತನಾಡಿಸಿದ ದುಬೈ ದೊರೆ

Published : Jul 18, 2023, 02:40 PM IST
ಲಿಫ್ಟ್‌ನಲ್ಲಿ ಸಿಕ್ಕ ಭಾರತೀಯ ಕುಟುಂಬವನ್ನು ಖುಷಿಯಿಂದ ಮಾತನಾಡಿಸಿದ ದುಬೈ ದೊರೆ

ಸಾರಾಂಶ

ದುಬೈ ರಾಜ ಶೇಖ್ ಮೊಹಮ್ಮದ್ ಲಿಫ್ಟ್‌ನಲ್ಲಿ ಭಾರತೀಯ ಕುಟುಂಬಕ್ಕೆ ಸಿಕ್ಕಿದ್ದು, ಈ ಕುಟುಂಬ ರಾಜನೊಂದಿಗೆ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದೆ. ಜನ ಸಾಮಾನ್ಯರ ಕೈಗೆ ಸಿಗದ ದುಬೈ ರಾಜ ತಮಗೆ ಲಿಫ್ಟ್‌ನಲ್ಲಿ ಸಿಕ್ಕಿದ್ದನ್ನು ನೋಡಿ ಕುಟುಂಬ ಫುಲ್ ಖುಷಿಯಾಗಿದೆ.

ದುಬೈ: ನೀವಿಷ್ಟ ಪಟ್ಟ ಪ್ರಭಾವಿ ವ್ಯಕ್ತಿಗಳು ಅಥವಾ ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳು ನಿಮಗೆ ಎದುರು ಸಿಕ್ಕಿ ನಿಮ್ಮನ್ನು ಮಾತನಾಡಿಸಿದರೆ ಹೇಗಿರುತ್ತದೆ. ನಿಜಕ್ಕೂ ಅಚ್ಚರಿಯಿಂದ ಮಾತೇ ಹೊರಡದಾಗುತ್ತದೆ ಅಲ್ಲವೇ? ಅದೇ ರೀತಿಯ ಅಚ್ಚರಿ ದುಬೈನಲ್ಲಿ ವಾಸವಿದ್ದ ಭಾರತೀಯ ಕುಟುಂಬಕ್ಕೆ ಆಗಿದೆ.  ದುಬೈ ರಾಜ ಶೇಖ್ ಮೊಹಮ್ಮದ್ ಲಿಫ್ಟ್‌ನಲ್ಲಿ ಭಾರತೀಯ ಕುಟುಂಬಕ್ಕೆ ಸಿಕ್ಕಿದ್ದು, ಈ ಕುಟುಂಬ ರಾಜನೊಂದಿಗೆ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದೆ. ಜನ ಸಾಮಾನ್ಯರ ಕೈಗೆ ಸಿಗದ ದುಬೈ ರಾಜ ತಮಗೆ ಲಿಫ್ಟ್‌ನಲ್ಲಿ ಸಿಕ್ಕಿದ್ದನ್ನು ನೋಡಿ ಕುಟುಂಬ ಫುಲ್ ಖುಷಿಯಾಗಿದೆ. ರಾಜನನ್ನು ಮಾತನಾಡಿಸಿದ ಕುಟುಂಬ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ದುಬೈ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಲಿಫ್ಟ್‌ನಲ್ಲಿ ಉದ್ಯಮಿ ಅನಸ್ ರೆಹ್ಮಾನ್ ಜುನೈದ್  ಅವರ ಕುಟುಂಬಕ್ಕೆ ಸಿಕ್ಕಿದ್ದಾರೆ. ಪತ್ನಿ ಇಬ್ಬರು ಮಕ್ಕಳ ಜೊತೆ ಲಿಫ್ಟ್‌ನಲ್ಲಿದ್ದ ಉದ್ಯಮಿ ಅನಸ್ ರೆಹ್ಮಾನ್ ಜುನೈದ್ ಆ ಲಿಫ್ಟ್‌ಗೆ ಬಂದ ದುಬೈ ರಾಜ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ನೋಡಿ ಅಚ್ಚರಿಗೊಂಡಿದ್ದಾರೆ. ದೊರೆಯ ಹುಟ್ಟುಹಬ್ಬದಂದೇ ಆತನ ಭೇಟಿಯಾಗುವ ಅವಕಾಶ ಸಿಕ್ಕಿದ್ದಲ್ಲದೇ ಅವರ ಜೊತೆ ಕೆಲ ನಿಮಿಷದ ಸಂಭಾಷಣೆ ಹಾಗೂ ಫೋಟೋ ತೆಗೆದುಕೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಭಾರತೀಯ ಕುಟುಂಬ ಸಂತಸ ವ್ಯಕ್ತಪಡಿಸಿದ್ದಾರೆ. ದುಬೈ ದೊರೆ ಸ್ನೇಹಜೀವಿಯಾಗಿದ್ದು ಖುಷಿಯಿಂದಲೇ ನಮ್ಮೊಂದಿಗೆ ಮಾತನಾಡಿದರು ಎಂದು ಈ ಕುಟುಂಬ ಮಾಧ್ಯಮದವರಿಗೆ ಹೇಳಿದ್ದಾರೆ. 

ಯುಎಇಗೆ ಪ್ರಧಾನಿ ಮೋದಿ ಭೇಟಿ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ, ಮೋದಿ ಫೋಟೋ

ನಾವು ಅವರನ್ನು ಭೇಟಿಯಾದೆವು ಹಾಗೂ ಮಾತನಾಡಿದೆವು ಎಂಬುದನ್ನು ನಮಗೆ ನಂಬಲಾಗುತ್ತಿಲ್ಲ, ಅವರು ಲಿಫ್ಟ್ ಒಳಗೆ ಬರುತ್ತಿದ್ದಂತೆ ಸ್ನೇಹಜೀವಿಯಂತೆ ಕಂಡರು. ಅವರು ನನ್ನ ಪುಟ್ಟ ಮಗಳ ಹೆಗಲ ಮೇಲೆ ಕೈಇಟ್ಟು ನಾನು ಯಾರು ಎಂದು ನಿನಗೆ ಗೊತ್ತಾ ಎಂದು ಮಗಳ ಬಳಿ ಕೇಳಿದರು ಎಂದು ಭಾರತೀಯ ಉದ್ಯಮಿ ಮಾಧ್ಯಮಗಳೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಆ ಕಟ್ಟಡದಲ್ಲಿ ಕೇವಲ 20 ಪ್ಲೋರ್‌ಗಳಿದ್ದವು. ಅದು ಎಷ್ಟು ಬೇಗ ಕಳೆದು ಹೋಯ್ತು ಎಂಬುದೇ ಗೊತ್ತಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ದುಬೈ ರಾಜ ಲಿಫ್ಟ್‌ಗೆ ಕಾಲಿಡುತ್ತಿದ್ದಂತೆ ಇಡೀ ಕುಟುಂಬಕ್ಕೆ ಆ ಕ್ಷಣವನ್ನು ನಂಬಲಾಗದೇ  ಸ್ತಬ್ಧವಾದಂತೆನಿಸಿತ್ತು. ಕ್ಷಣದ ಬಳಿಕ ದೊರೆಯ ಹುಟ್ಟುಹಬ್ಬದಂದೇ ದೊರೆ ಸಿಕ್ಕರೂ ಅವರಿಗೆ ಶುಭಾಶಯ ತಿಳಿಸಲಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.  ಅಂದಹಾಗೆ ಅನಸ್ ಅವರು 2 ವಾರಗಳ ಪ್ರವಾಸಕ್ಕಾಗಿ ಕುಟುಂಬದ ಜೊತೆ ದುಬೈಗೆ ತೆರಳಿದ್ದರು. ಉದ್ಯಮದ ಕಾರಣಕ್ಕಾಗಿ ಅವರು ಆಗಾಗ ದುಬೈ ಹಾಗೂ ಮುಂಬೈ ಮಧ್ಯೆ ಆಗಾಗ ಪ್ರಯಾಣ ಮಾಡುತ್ತಿರುತ್ತಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. 

ದುಬೈನಲ್ಲಿ ನಡೀತು ಜೋಧಾ ಅಕ್ಬರ್ ಸ್ಟೈಲ್ ಮದ್ವೆ: ಚಿನ್ನದಿಂದ ವಧುವಿನ ತುಲಾಭಾರ..!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ