ಸೀಮಾ ಹೈದರ್ ಸೀಮೊಲ್ಲಂಘನೆ, ಸಿಂಧ್ ಪ್ರಾಂತ್ಯದ 30 ಹಿಂದೂಗಳ ಒತ್ತೆಯಾಳಾಗಿಟ್ಟ ಪಾಕಿಸ್ತಾನ!

Published : Jul 17, 2023, 03:51 PM IST
ಸೀಮಾ ಹೈದರ್ ಸೀಮೊಲ್ಲಂಘನೆ, ಸಿಂಧ್ ಪ್ರಾಂತ್ಯದ 30 ಹಿಂದೂಗಳ ಒತ್ತೆಯಾಳಾಗಿಟ್ಟ ಪಾಕಿಸ್ತಾನ!

ಸಾರಾಂಶ

ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದ ಸೀಮಾ ಹೈದರ್ ಕಾರಣದಿಂದ ಈಗಾಗಲೇ ಪಾಕಿಸ್ತಾನದಲ್ಲಿನ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ. ಇದೀಗ ಸಿಂಧ್ ಪ್ರಾಂತ್ಯದ ಮಹಿಳೆಯರು, ಮಕ್ಕಳು ಸೇರಿದಂತೆ 30 ಹಿಂದೂಗಳನ್ನು ಪಾಕಿಸ್ತಾನದ ಮುಸ್ಲಿಂ ಮೂಲಭೂತವಾದಿಗಳ ಗುಂಪು ಒತ್ತೆಯಾಳನ್ನಾಗಿ ಮಾಡಿದೆ.  

ಸಿಂಧ್(ಜು.17) ಪಬ್‌ಜಿ ಮೂಲಕ ಪರಿಚಯವಾಗಿ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದ ಸೀಮಾ ಹೈದರ್ ಇದೀಗ ಉಭಯ ದೇಶಗಳ ನಡುವಿನ ಟೆನ್ಶನ್ ಹೆಚ್ಚಿಸಿದ್ದಾರೆ. ಸೀಮಾ ಹೈದರ್ ಭಾರತಕ್ಕೆ ಓಡಿ ಹೋಗಿದ್ದಾಳೆ. ಪಾಕಿಸ್ತಾನದ ಹಿಂದೂ ವ್ಯಕ್ತಿಯನ್ನು ಪ್ರೀತಿಸಿ ಇದೀಗ ಮದುವೆಯಾಗಲು ಹೊರಟಿದ್ದಾರೆ ಅನ್ನೋದು ಪಾಕಿಸ್ತಾನದ ಮುಸ್ಲಿಂ ಮೂಲಭೂತವಾದಿಗಳನ್ನು ಕೆರಳಿ ಕೆಂಡವಾಗಿಸಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ. ಇದರ ಬೆನ್ನಲ್ಲೇ  ಮತ್ತೊಂದು ಘಟನೆ ನಡೆದಿದೆ. ಸಿಂಧ್ ಪ್ರಾಂತ್ಯದಲ್ಲಿರುವ ಮಕ್ಕಳು, ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಹಿಂದೂಗಳನ್ನು ಮುಸ್ಲಿಮ್ ಮೂಲಭೂತವಾದಿಗಳ ಗುಂಪ ಒತ್ತೆಯಾಳಾಗಿ ಮಾಡಿದೆ.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಗಳ, ದಾಳಿ, ಹತ್ಯೆ ಪ್ರಕರಣಗಳು ವಿಪರೀತವಾಗಿದೆ ಎಂದು ಪಾಕ್ ಮಾನವ ಹಕ್ಕುಗಳ ಆಯೋಗ ಹೇಳಿದೆ. ಸೀಮಾ ಹೈದರ್ ಭಾರತಕ್ಕೆ ಓಡಿ ಹೋಗಿದ್ದಾಳೆ ಅನ್ನೋ ಕಾರಣಕ್ಕೆ ಇದೀಗ ಮೂಲಭೂತವಾದಿಗಳ ಸಶಸ್ತ್ರ ಗುಂಪು, ಸಿಂಧ್ ಪ್ರಾಂತ್ಯದ ಹಿಂದೂಗಳ ಕಾಲೋನಿಗಳ ಮೇಲೆ ದಾಳಿ ಮಾಡಿದ್ದಾರೆ.

ಬಾಗೇಶ್ವರ ಧಾಮದಲ್ಲಿ ಸಪ್ತಪದಿ ತುಳಿಯುವ ಇಚ್ಛೆ ವ್ಯಕ್ತಪಡಿಸಿದ ಪಬ್‌ಜಿ ಲವರ್ಸ್!

ಮಕ್ಕಳು,ಮಹಿಳೆಯರು ಸೇರಿ 30ಕ್ಕೂ ಹೆಚ್ಚು ಹಿಂದೂಗಳನ್ನು ಬಂಧಿಸಿ, ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಪೋಷಕರ ಎದುರೇ ಹಿಂದೂ ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ. ಸೀಮಾ ಹೈದರ್ ಪ್ರಕರಣದ ಬಳಿಕ ಸಿಂಧ್ ಪ್ರಾಂತ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಹಿಂದೂಗಳ ಮೇಲೆ ನಡೆಯುತ್ತಿದ್ದ ದಾಳಿಗಳ ಸಂಖ್ಯೆ ಹೆಚ್ಚಾಗಿದೆ.ಈ ಬಗ್ಗೆ ಪಾಕ್‌ ಮಾನವ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. 

ಸೀಮಾ ಹೈದರ್ ಕಾರಣದಿಂದ ಈಗಾಗಲೇ ಪಾಕಿಸ್ತಾನದಲ್ಲಿ 2 ಪ್ರಸಿದ್ಧ ಹಾಗೂ ಪುರಾತನ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ. ಕರಾಚಿ ಹಾಗೂ ಸಿಂಧ್ ಪ್ರಾಂತ್ಯದ ದೇವಾಲಯಗಳು ಧ್ವಂಸಗೊಂಡಿದೆ.ಗುಂಡು ಹಾರಿಸುತ್ತಾ ದೇವಸ್ಥಾನದೊಳಕ್ಕೆ ಪ್ರವೇಶಿಸಿದ ಕಿಡಿ ಗೇಡಿಗಳು ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ.  ಪಾಕಿಸ್ತಾನ ಪೊಲೀಸರು ಸ್ಥಳಕ್ಕೆ  ಧಾವಿಸುವಷ್ಟರಲ್ಲೇ ಕಿಡಿ ಗೇಡಿಗಳು ದೇವಸ್ಥಾನ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. 

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿರುವ ಕಾಶ್ಮೋರ ಎಂಬಲ್ಲಿ ಡಕಾಯಿತರು ರಾಕೆಟ್‌ ಲಾಂಚರ್‌ ಬಳಸಿ ದೇವಾಲಯವೊಂದರ ಮೇಲೆ ದಾಳಿ ಮಾಡಿದ್ದಾರೆ. ಅದರಲ್ಲಿನ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಹಿಂದೂಗಳಲ್ಲಿ ಭಯ ಮೂಡಿಸಬೇಕೆಂದೇ ಹೀಗೆ ಮಾಡಿದ್ದಾರೆ ಎಂದು ‘ದ ಡಾನ್‌’ ಪತ್ರಿಕೆ ವರದಿ ಮಾಡಿದೆ.

PubG ಲವ್‌: ನಾನೀಗ ಹಿಂದೂ, ಭಾರತವೀಗ ನಂದೇ ಎಂದ ಪಾಕ್‌ನಿಂದ ಓಡಿ ಬಂದ ಮಹಿಳೆ!

ಆದರೆ ಸಂಪ್ರದಾಯದ ಅನ್ವಯ ಈ ದೇಗುಲ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಹೀಗಾಗಿ ದಾಳಿ ವೇಳೆ ಯಾವುದೇ ಭಕ್ತರು ಇರಲಿಲ್ಲ. ಮೇಲಾಗಿ ಡಕಾಯಿತರು ಹಾರಿಸಿದ ರಾಕೆಟ್‌ ಸ್ಫೋಟಗೊಂಡಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಪರಾರಿಯಾದ ಡಕಾಯಿತರಿಗೆ ಶೋಧ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಲ್ಲಾ ದಾನ ಮಾಡಿ ಡಿ.25ಕ್ಕೆ ಜಗತ್ತು ಅಂತ್ಯ, ಪುಂಗಿ ಬಿಟ್ಟು ₹80 ಲಕ್ಷ ಕಾರು ಖರೀದಿಸಿದ ಘಾನಾ ಪ್ರವಾದಿ
Islamic ಮೂಲಭೂತವಾದಿಗಳ ನೆಚ್ಚಿನ ಬಾಂಗ್ಲಾ ಸುಂದರಿ ಬೀದಿಪಾಲು: ಹಿಂದೂಗಳೇ ಕಾಪಾಡಿ ಅಂತಿರೋದ್ಯಾಕೆ?