ತಪ್ಪಾಗಿರಬಹುದು, ಆದರೆ ಭಾರತವನ್ನು ಖಂಡನೆ ಮಾಡೋದಿಲ್ಲ ಎಂದ ಮಾಲ್ಡಿವ್ಸ್!

By Santosh NaikFirst Published Jun 10, 2022, 7:21 PM IST
Highlights

ಪ್ರವಾದಿ ಮೊಹಮದ್ ಹಾಗೂ ಇಸ್ಲಾಂ ಅನ್ನು ಅವಮಾನ ಮಾಡುವ ದೃಷ್ಟಿಯಿಂದ ಬಿಜೆಪಿ ನಾಯಕರು ಆಡಿರುವ ಮಾತುಗಳನ್ನು ನಾವು ಖಂಡನೆ ಮಾಡುತ್ತೇವೆ. ಅವರಿಂದ ಈ ತಪ್ಪು ಆಗಿರಬಹುದು. ಆದರೆ, ಈ ವಿಚಾರದಲ್ಲಿ ಭಾರತ ಸರ್ಕಾರವನ್ನು ನಾವು ಖಂಡಿಸೋದಿಲ್ಲ ಎಂದು ಮಾಲ್ಡಿವ್ಸ್ ಸರ್ಕಾರ ಹೇಳಿದೆ.
 

ಮಾಲೆ (ಜೂನ್ 10): ಪ್ರವಾದಿ ಮೊಹಮದ್ ಪೈಗಂಬರ್ (prophet muhammad paigambar) ಕುರಿತಾಗಿ ಬಿಜೆಪಿಯ (BJP) ಮಾಜಿ ನಾಯಕರ ವಿವಾದಿತ ಹೇಳಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ಮಾಡಲಾಗಿದೆ. ವಿಶ್ವದ ಬಹುತೇಕ ಗಲ್ಫ್ ರಾಷ್ಟ್ರಗಳು (Gulf Nations) ಭಾರತವನ್ನು ಟೀಕಿಸಿದೆ. ಆದರೆ, ಮುಸ್ಲಿ ಪ್ರಾಬಲ್ಯವಿರುವ ಭಾರತದ ಬುಡದಲ್ಲೇ ಇರುವ ಮಾಲ್ಡಿವ್ಸ್ (Maldives) ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಲ್ಡಿವ್ಸ್ ಸರ್ಕಾರದ ಮೌನ ಕೂಡ ವಿಶ್ವದಲ್ಲಿ ಸುದ್ದಿಯಾಗಿದೆ.

ಇಸ್ಲಾಮಿಕ್ (Islamic Nation) ರಾಷ್ಟ್ರವಾಗಿದ್ದರೂ, ಈ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡದಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. , ಇದಕ್ಕೆ ಕಾರಣ ಮಾಲ್ಡೀವ್ಸ್‌ನ ಆಡಳಿತಾರೂಢ ಸರ್ಕಾರ ಭಾರತದ ಪರವಾಗಿದೆ. ಜೂನ್ 6 ರಂದು, ಮಾಲ್ಡೀವ್ಸ್ ನ ವಿರೋಧ ಪಕ್ಷವು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗಳ ಬಗ್ಗೆ ಸಂಸತ್ತಿನಲ್ಲಿ ತುರ್ತು ನಿರ್ಣಯವನ್ನು ಮಂಡಿಸಿತು.

ಈ ನಿರ್ಣಯವನ್ನು ಮಂಡಿಸುವಾಗ, ವಿರೋಧ ಪಕ್ಷದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಸಂಸದ ಆಡಮ್ ಷರೀಫ್ ಒಮರ್, ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ಹೇಳಿಕೆಯನ್ನು ಖಂಡಿಸಿದ್ದರು. ಇದರ ನಂತರ ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಅದೇ ದಿನದ ಸಂಜೆ ಸರ್ಕಾರವು ಆತುರದ ಹೇಳಿಕೆಯನ್ನು ನೀಡಿತು.

ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಕೆಲವು ಬಿಜೆಪಿ ನಾಯಕರು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ನಮಗೂ ಕಳವಳವಿದೆ ಎಂದು ಭಾರತದ ಪರ ಸೋಲಿಹ್ ಸರ್ಕಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯ ಕುರಿತಾಗಿ ಭಾರತದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಯ ಕ್ರಮವನ್ನು ಸ್ವಾಗತಿಸಿದೆ. ಇಲ್ಲಿ ತಪ್ಪಾಗಿರಬಹುದು. ಆದರೆ, ಇದೊಂದೇ ಕಾರಣಕ್ಕೆ ಭಾರತ ಸರ್ಕಾರವನ್ನು ಖಂಡನೆ ಮಾಡೋದಿಲ್ಲ ಎಂದು ಆಡಳಿತಾರೂಢ ಎಂಡಿಪಿ ಹೇಳಿದೆ.

ಭಾರತ ಪರ ಇರುವ ಸೊಲಿಹ್ ಸರ್ಕಾರ: ಮಾಲ್ಡಿವ್ಸ್ ಸಂಪೂರ್ಣವಾಗಿ ಇಸ್ಲಾಮಿಕ್ ದೇಶ. ಇಬ್ರಾಹಿಂ ಮೊಹಮದ್ ಸೊಲಿಹ್ ಇದರ ಅಧ್ಯಕ್ಷ . ಪುಟ್ಟ ದೇಶವಾಗಿರುವ ಮಾಲ್ಡಿವ್ಸ್ "ಇಂಡಿಯಾ ಫರ್ಸ್ಟ್' ಎನ್ನುವ ಧೋರಣೆ ಅಳವಡಿಸಿಕೊಂಡಿದೆ. ಮಾಲ್ಡಿವ್ಸ್ ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯೆಮೆನ್, ಮಾಲ್ಡಿವ್ಸ್ ದೇಶವು "ಇಂಡಿಯಾ ಫರ್ಸ್ಟ್'  ಬದಲಾಗಿ ಇಂಡಿಯಾ ಔಟ್ ಎನ್ನುವ ಧ್ಯೇಯವನ್ನು ಅಭಿಯಾನ ಮಾಡಬೇಕು ಎಂದು ಕರೆ ನೀಡಿದ್ದರು. ಆದರೆ, ಇದಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಕುಟುಂಬ ಸದಸ್ಯರ ಜತೆ ಬಿಎಸ್‌ವೈ ಮೂರು ದಿನ ಮಾಲ್ಡೀವ್ಸ್ ಪ್ರವಾಸ

ಕಳೆದ ಏಪ್ರಿಲ್ ನಲ್ಲಿ ಮಾಲ್ಡಿವ್ಸ್ ನಲ್ಲಿ ಭಾರತ ವಿರೋಧಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯಕೂಡದು ಎಂದು ಸೊಲಿಹ್ ಸರ್ಕಾರ ಹೇಳಿತ್ತು. ಕರ್ನಾಟಕದಲ್ಲಿ ಆರಂಭವಾಗಿದ್ದ ಹಿಜಾಬ್ ಗಲಾಟೆ ಕೂಡ ಮಾಲ್ಡಿವ್ಸ್ ಗೆ ತಲುಪಿತ್ತು. ಮಾಲ್ಡಿವ್ಸ್ ನ ಸೋಷಿಯಲ್ ಮೀಡಿಯಾಗಳಲ್ಲಿ ಇದರ ಕುರಿತಾಗಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಒಐಸಿ ದೇಶಗಳು, ಕುವೈತ್, ಬಹರೇನ್, ಪಾಕಿಸ್ತಾನ ಹಾಗೂ ಅಮೆರಿಕ ಕೂಡ ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬ್ಯಾನ್ ಅನ್ನು ಖಂಡಿಸಿದ್ದವು. ಇದು ಧರ್ಮದ ಮೇಲಿನ ಆಕ್ರಮಣ ಎಂದು ಹೇಳಿತ್ತು. ಆದರೆ, ಮಾಲ್ಡಿವ್ಸ್ ಮಾತ್ರ ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿರಲಿಲ್ಲ. ಈ ಬಾರಿಯೂ ಮಾಲ್ಡಿವ್ಸ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಮಾಹಿತಿ ನೀಡದೇ ಸಮುದ್ರ ಮಾರ್ಗದಲ್ಲಿ ಮಾಲ್ಡೀವ್ಸ್ ಮಾಜಿ ಅಧ್ಯ​ಕ್ಷ ಭಾರತಕ್ಕೆ!

ಮಾಲ್ಡಿವ್ಸ್ ನ ವಿರೋಧ ಪಕ್ಷ ಸಂಸತ್ತಿನಲ್ಲಿ ಖಂಡನಾ ನಿರ್ಣಯವನ್ನು ಮಂಡನೆ ಮಾಡಿತ್ತು. "ಮುಸ್ಲಿಂ ರಾಷ್ಟ್ರವಾಗಿ ನಾವು ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ಒಂದೇ ಒಂದು ಮಾತನ್ನಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ವಿಶ್ವದ ಬಹುತೇಕ ಮುಸ್ಲಿಂ ರಾಷ್ಟ್ರಗಳು ಇದನ್ನು ಖಂಡನೆ ಮಾಡಿವೆ' ಎಂದು ನಿರ್ಣಯದಲ್ಲಿ ಹೇಳಲಾಗಿತ್ತು. ಆದರೆ, ಮಾಲ್ಡಿವ್ಸ್ ನ ಸಂಸತ್ತು ಈ ಖಂಡನಾ ನಿರ್ಣಯಕ್ಕೆ ಅನುಮೋದನೆ ನೀಡಲು ನಿರಾಕರಿಸಿದೆ. ಅದರಲ್ಲೂ ಮಾಲ್ಡಿವ್ಸ್ ಸಂಸತ್ತಿನ 33 ಸಂಸದರ ಭಾರತವನ್ನು ಈ ವಿಚಾರದಲ್ಲಿ ಖಂಡಿಸಲು ನಿರಾಕರಿಸಿದ್ದರು.

click me!