ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ, ಸುದ್ದಿ ವೈರಲ್

By Santosh NaikFirst Published Jun 10, 2022, 5:16 PM IST
Highlights

ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಶುಕ್ರವಾರ ನಿಧನರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಷರಫ್ ನಿಧನರಾಗಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ಸಂಜೆಯ ವೇಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ದುಬೈ (ಜೂನ್ 10): ಗಂಭೀರ ಅನಾರೋಗ್ಯದ ಕಾರಣದಿಂದಾಗಿ ಸಾಕಷ್ಟು ವರ್ಷಗಳಿಂದ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಶುಕ್ರವಾರ ನಿಧನರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿವೆ. 

ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಪಾಕಿಸ್ತಾನ(Pakistan)ದ ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಜ್ ಮುಷರಫ್(Pervez Musharraf) ಅವರನ್ನು ದುಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ವೈದ್ಯಕೀಯ ವರದಿಗಳ ಪ್ರಕಾರ, ಮುಷರಫ್ ಹೃದಯ ಮತ್ತು ರಕ್ತದೊತ್ತಡದ ಸಮಸ್ಯೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪಾಕಿಸ್ತಾನ ಟುಡೆ ಪತ್ರಿಕೆ ಇತ್ತೀಚೆಗೆ ವರದಿ ಮಾಡಿತ್ತು.

2016 ರಿಂದಲೂ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ ಅವರು ದುಬೈನಲ್ಲಿ ವಾಸ ಮಾಡುತ್ತಿದ್ದರು. ಅಂದಿನಿಂದ ಅವರು ಸ್ವದೇಶವಾದ ಪಾಕಿಸ್ತಾನಕ್ಕೂ ಮರಳಿರಲಿಲ್ಲ. ಪಾಕಿಸ್ತಾನದಲ್ಲಿ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಪ್ರಕರಣವೂ ದಾಖಲಾಗಿತ್ತು. ವಿಚಾರಣೆಗೆ ಸ್ವದೇಶಕ್ಕೆ ಆಗಮಿಸುವಂತೆ ಕೋರ್ಟ್ ಹಲವು ಬಾರಿ ನೋಟಿಸ್ ನೀಡಿತ್ತು.

Message from Family:

He is not on the ventilator. Has been hospitalized for the last 3 weeks due to a complication of his ailment (Amyloidosis). Going through a difficult stage where recovery is not possible and organs are malfunctioning. Pray for ease in his daily living. pic.twitter.com/xuFIdhFOnc

— Pervez Musharraf (@P_Musharraf)


ಪಾಕಿಸ್ತಾನದ ಮಿಲಿಟರಿ ಜನರಲ್‌ ಆಗಿದ್ದ ಪರ್ವೇಜ್ ಮುಷರಫ್‌ ನಂತರ ಬಲವಂತದಿಂದ ಪ್ರಧಾನಿ ಕೈಯಿಂದ ಅಧಿಕಾರ ಕಿತ್ತುಕೊಂಡವರು. ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಲಿಟರಿ ಆಡಳಿತವನ್ನು ತಂದವರು. ಅದಾದ ನಂತರ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಮೇಲೂ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಅಧಿಕಾರ ಕಳೆದುಕೊಂಡ ನಂತರ ಪಾಕಿಸ್ತಾನ ತೊರೆದು ದುಬೈನಲ್ಲಿ ನೆಲೆಸಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಅವರು ದುಬೈನಲ್ಲಿ ಆಸ್ಪತ್ರೆ ಸೇರಿದ್ದರು.

 

ಮಾರ್ಚ್ 2016 ರಿಂದ ದುಬೈನಲ್ಲಿ ವಾಸಿಸುತ್ತಿರುವ ಮುಷರಫ್, 2007 ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ ದೇಶದ್ರೋಹದ ಆರೋಪವನ್ನು ಎದುರಿಸುತ್ತಿದ್ದಾರೆ, ಇದು ಶಿಕ್ಷಾರ್ಹ ಅಪರಾಧವಾಗಿದ್ದು, 2014 ರಲ್ಲಿ ದೋಷಾರೋಪಣೆ ಮಾಡಲಾಗಿತ್ತು. 1999 ರ ರಕ್ತರಹಿತ ದಂಗೆಯಲ್ಲಿ ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸುವ ಮೂಲಕ ಅವರು ಅಧಿಕಾರವನ್ನು ವಶಪಡಿಸಿಕೊಂಡರು. ಅವರು 2001 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಷರಫ್ 1999 ರಿಂದ 2008 ರವರೆಗೆ ಪಾಕಿಸ್ತಾನದ ಅಧಿಕಾರ ವಹಿಸಿಕೊಂಡಿದ್ದರು. ದೇಶಭ್ರಷ್ಟರಾಗಿ ದುಬೈನಲ್ಲಿ ವಾಸಿಸುತ್ತಿದ್ದರು.

ದೆಹಲಿಯಲ್ಲಿ ಹುಟ್ಟಿದ್ದ ಮುಷರಫ್: ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್, ಬಳಿಕ ಕರಾಚಿ ಹಾಗೂ ಇಸ್ತಾನ್ ಬುಲ್ ನಲ್ಲಿ ಬೆಳೆದರು.   ಅವರು ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತವನ್ನು ಅಧ್ಯಯನ ಮಾಡಿದರು ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿಯೂ ಶಿಕ್ಷಣ ಪಡೆದರು. ಪರ್ವೇಜ್ ಮುಷರಫ್ ಅವರು 1961 ರಲ್ಲಿ ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯನ್ನು ಪ್ರವೇಶಿಸಿದರು ಮತ್ತು 1964 ರಲ್ಲಿ ಪಾಕಿಸ್ತಾನದ ಸೇನೆಗೆ ನಿಯೋಜಿಸಲ್ಪಟ್ಟರು ಮತ್ತು ಅಫ್ಘಾನ್ ಆಂತರಿಕ ಯುದ್ಧದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.

ಸೆಪ್ಟೆಂಬರ್ 2001 ರಿಂದ 2007 ರಲ್ಲಿ ಮಿಲಿಟರಿಗೆ ರಾಜೀನಾಮೆ ನೀಡುವವರೆಗೆ, ಮುಷರಫ್ ಅವರ ಅಧ್ಯಕ್ಷ ಸ್ಥಾನವು ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಹಗರಣಗಳಿಂದ ಪ್ರಭಾವಿತವಾಗಿತ್ತು, ಇದು ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಸಮುದಾಯದಲ್ಲಿ ಅವರ ಅಧಿಕಾರದ ಕುರಿತಾಗಿ ಪ್ರಶ್ನೆ ಎತ್ತುವಂತೆ ಮಾಡಿತ್ತು. ಅಕ್ಟೋಬರ್ 2001 ರಲ್ಲಿ, ಇಬ್ಬರು ಭೌತವಿಜ್ಞಾನಿಗಳಾದ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಮತ್ತು ಚೌಧರಿ ಅಬ್ದುಲ್ ಮಜೀದ್ ಅವರನ್ನು ಬಂಧಿಸಲು FIA ನೇತೃತ್ವದ ತಂಡಕ್ಕೆ ಆದೇಶ ನೀಡಿದ್ದರು. 2000ರಲ್ಲಿ ಇವರಿಬ್ಬರು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು ಎನ್ನುವ ಆರೋಪವನ್ನು ಮುಷರಫ್ ಮಾಡಿದ್ದರು.

ಪಾಕ್ ಮಾಜಿ ಅಧ್ಯಕ್ಷರನ್ನು ಭೇಟಿಯಾದ 'KGF-2' ನಟ ಸಂಜಯ್ ದತ್; ಫೋಟೋ ವೈರಲ್

2007ರ ಆಗಸ್ಟ್ ವೇಳೆ ಪಾಕಿಸ್ತಾನದ ಶೇ. 64ರಷ್ಟು ಜನತೆ ಮುಷರಫ್ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಹೊಂದುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.  ಪರಮಾಣು ಸಮಸ್ಯೆಗಳು, ಲಾಲ್ ಮಸೀದಿ ಘಟನೆ, ವಾಯವ್ಯ ಪಾಕಿಸ್ತಾನದ ಜನಪ್ರಿಯವಲ್ಲದ ಯುದ್ಧ, ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರ ಅಮಾನತು ಮತ್ತು ಪ್ರತಿಸ್ಪರ್ಧಿಗಳಾದ ಬೆನಜೀರ್ ಭುಟ್ಟೋ ಮತ್ತು ನವಾಜ್ ಷರೀಫ್‌ರಿಂದ ವ್ಯಾಪಕವಾಗಿ ಹರಡಿದ ಟೀಕೆಗಳು ಸೇರಿದಂತೆ ವಿವಾದಗಳು ಮುಷರಫ್ ಅವರ ರಾಜಕೀಯ ವಲಯಗಳು ಮತ್ತು ವೈಯಕ್ತಿಕ ಚಿತ್ರಣವನ್ನು ಸಾರ್ವಜನಿಕವಾಗಿ ಇನ್ನಷ್ಟು ಹಾನಿ ಮಾಡಿದವು.

'ಶಿಕ್ಷೆಗೆ ಮುನ್ನ ಮುಷರ್ರಫ್‌ ಸತ್ತರೆ ಇಸ್ಲಾಮಾಬಾದಲ್ಲಿ 3 ದಿನ ನೇತು ಹಾಕಿ'

ಅಕ್ಟೋಬರ್ 2, 2007 ರಂದು, ಮುಷರಫ್ ಅವರು ಜನರಲ್ ತಾರಿಕ್ ಮಜಿದ್ ಅವರನ್ನು ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದರು ಮತ್ತು ಅಕ್ಟೋಬರ್ 8 ರಿಂದ ಜನರಲ್ ಅಶ್ಫಾಕ್ ಕಯಾನಿ ಅವರನ್ನು ಸೈನ್ಯದ ಉಪಾಧ್ಯಕ್ಷರಾಗಿ ಅನುಮೋದಿಸಿದರು. 28 ನವೆಂಬರ್ 2007 ರಂದು ಮುಷರಫ್ ಮಿಲಿಟರಿಗೆ ರಾಜೀನಾಮೆ ನೀಡಿದಾಗ, ಕಯಾನಿ ಸೇನಾ ಮುಖ್ಯಸ್ಥರಾಗಿದ್ದರು. ಆಗಸ್ಟ್ 18, 2008 ರಂದು, ಪರ್ವೇಜ್ ಮುಷರಫ್ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ಮರುದಿನ, ಅವರು ತಮ್ಮ ಒಂಬತ್ತು ವರ್ಷಗಳ ಆಡಳಿತವನ್ನು ಒಂದು ಗಂಟೆಯ ದೂರದರ್ಶನದ ಭಾಷಣದಲ್ಲಿ ಸಮರ್ಥಿಸಿಕೊಂಡರು. ಆದಾಗ್ಯೂ, ಈ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವು ಹೆಚ್ಚಾಗಿ ಅವರ ವಿರುದ್ಧವಾಗಿತ್ತು. ರಾಜೀನಾಮೆ ನೀಡಿದ ಒಂದು ದಿನದ ನಂತರ ನಡೆಸಿದ ಸಮೀಕ್ಷೆಯ ಪ್ರಕಾರ 63% ರಷ್ಟು ಪಾಕಿಸ್ತಾನಿಗಳು ಮುಷರಫ್ ಅವರ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿದರು ಮತ್ತು 15% ಜನರು ಮಾತ್ರ ಅತೃಪ್ತರಾಗಿದ್ದರು.

click me!