ಮೆಟ್ರೋ ಹಳಿ ಮೇಲೆ ಬಿದ್ದು ವಿಲ ವಿಲ ಒದ್ದಾಡ್ತಿದ್ದವನ ರಕ್ಷಿಸಿದ ಯುವಕ : ವಿಡಿಯೋ

By Anusha KbFirst Published Jun 10, 2022, 4:46 PM IST
Highlights

600 ವೋಲ್ಟ್ ಕರೆಂಟ್ ಸಂಚರಿಸುವ ಮೆಟ್ರೋ ರೈಲು ಹಳಿಯ ಮೇಲೆ ಪ್ರಯಾಣಿಕನೋರ್ವ ಅಚಾನಕ್‌ ಆಗಿ ಬಿದ್ದು ಒದ್ದಾಡಿದ ಘಟನೆ ಅಮೆರಿಕಾದ ಚಿಕಾಗೋದಲ್ಲಿ ನಡೆದಿದೆ. 

600 ವೋಲ್ಟ್ ಕರೆಂಟ್ ಸಂಚರಿಸುವ ಮೆಟ್ರೋ ರೈಲು ಹಳಿಯ ಮೇಲೆ ಪ್ರಯಾಣಿಕನೋರ್ವ ಅಚಾನಕ್‌ ಆಗಿ ಬಿದ್ದು ಒದ್ದಾಡಿದ ಘಟನೆ ಅಮೆರಿಕಾದ ಚಿಕಾಗೋದಲ್ಲಿ ನಡೆದಿದೆ. ಮೆಟ್ರೋ ರೈಲುಗಳು ವಿದ್ಯುತ್‌ ಶಕ್ತಿಯ ಮೂಲಕ ಓಡುವ ರೈಲುಗಳಾಗಿದ್ದು, ರೈಲು ಹಳಿಗಳ ಮೇಲೆ ಸದಾ ವಿದ್ಯುತ್ ಸಂಚಾರವಿರುತ್ತದೆ. ಆದರೆ ವ್ಯಕ್ತಿಯೊಬ್ಬ ಅಚಾನಕ್ ಆಗಿ ವಿದ್ಯುತ್ ಲೇನ್ ಮೇಲೆ ವಿಲ ವಿಲ ಒದ್ದಾಡಿದ್ದು, ಫ್ಲಾಟ್‌ಫಾರ್ಮ್‌ನಲ್ಲಿದ್ದ ಸಹ ಪ್ರಯಾಣಿಕನೋರ್ವ ಓಡಿ ಬಂದು ತನ್ನ ಜೀವವನ್ನು ಲೆಕ್ಕಿಸದೇ ಯುವಕನನ್ನು ರಕ್ಷಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ತನ್ನ ಜೀವವನ್ನು ಪಣಕ್ಕಿಟ್ಟು ಈ ಯುವಕನ ರಕ್ಷಿಸಿದ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸಮಾರಂಭದಲ್ಲಿ ಯುವಕನನ್ನು ಸನ್ಮಾನಿಸಲಾಗಿದೆ. ಯುವಕನನ್ನು ರಕ್ಷಿಸಿದ ಯುವಕನನ್ನು  ಚಿಕಾಗೋದ (Chicago)  20 ವರ್ಷದ ಟೋನಿ ಪೆರ್ರಿ (Tony Perry) ಎಂದು ಗುರುತಿಸಲಾಗಿದೆ.  

Namma Metro Passes ಅಧಿಕಾರಿಗಳ ದರ್ಬಾರ್, ಪ್ರಯಾಣಿಕರಿಂದ ಬೀಕಾಬಿಟ್ಟಿ ವಸೂಲಿ!

ಯುವಕ ವ್ಯಕ್ತಿಯನ್ನು ರಕ್ಷಿಸುತ್ತಿರುವ ದೃಶ್ಯವು ಸ್ಥಳೀಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಟ್ರಾಕ್‌ನಲ್ಲಿ ಹರಿಯುತ್ತಿದ್ದ ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕ ಟ್ರಾಕ್ ಮೇಲೆ ಬಿದ್ದು ವಿಲ ವಿಲ ಒದ್ದಾಡುತ್ತಿದ್ದಾನೆ. ಇದನ್ನು ನೋಡಿ ಕೂಡಲೇ ಕೆಳಗೆ ಜಿಗಿದ ಯುವಕ ತನ್ನ ಪ್ರಾಣದ ಹಂಗನ್ನು ತೊರೆದು ಟ್ರಾಕ್‌ನಲ್ಲಿ ಬಿದ್ದಿದ್ದ ಯುವಕನನ್ನು ರಕ್ಷಿಸುತ್ತಾನೆ. ಈ ವೇಳೆ ಇದನ್ನು ನೋಡುತ್ತಿರುವ ಇತರರು ಆತನನ್ನು ಸ್ಪರ್ಶಿಸುವುದರಿಂದ ನೀವು ಕೂಡ ವಿದ್ಯುತ್ ಶಾಕ್‌ಗೆ ಒಳಗಾಗಬಹುದು ಜಾಗರೂಕರಾಗಿರಿ ಎಂದು ಹೇಳುತ್ತಾರೆ. ಆದರೆ ಯಾರ ಮಾತನ್ನು ಲೆಕ್ಕಿಸದೇ ಟೋನಿ ಪೆರ್ರಿ ಯುವಕನ ರಕ್ಷಣೆಗೆ ಧಾವಿಸಿ ಬರುತ್ತಾರೆ. 

Direct Tax Collection: ದಾಖಲೆಯ ನೇರ ತೆರಿಗೆ ಸಂಗ್ರಹ; ಮೆಟ್ರೋ ನಗರಗಳಲ್ಲಿ ಮುಂಬೈಗೆ ಪ್ರಥಮ, ಬೆಂಗಳೂರಿಗೆ ದ್ವಿತೀಯ ಸ್ಥಾನ

ನಂತರ ಅವನು ದೇಹವನ್ನು ಟ್ರ್ಯಾಕ್‌ಗಳಿಂದ ಹೊರಗೆ ಸರಿಸಲು ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಾನೆ. ಆ ವ್ಯಕ್ತಿಗೆ ಅವನ ದೇಹದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ, ನಾನು ಟ್ರ್ಯಾಕ್‌ಗೆ ಬಂದಾಗ ಯಾರೋ ಅವನನ್ನು ಮುಟ್ಟಬೇಡಿ ಎಂದು  ಹೇಳುವುದನ್ನು ಕೇಳಿದೆ. ಆದರೆ ನಾನು ಅವನತ್ತ ನಡೆಯುತ್ತಲೇ ಇದ್ದೆ ಅಲ್ಲದೇ ಆತನನ್ನು ರಕ್ಷಿಸಲು ಸಾಧ್ಯವಾಯಿತು. ಆ ವ್ಯಕ್ತಿ ಬದುಕಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು CBS ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಪೆರ್ರಿ ಹೇಳಿದ್ದಾರೆ. ನಂತರ ಟೋನಿ ಪೆರ್ರಿ ಅವರನ್ನು ಸ್ಥಳೀಯ ಸಮಾರಂಭದಲ್ಲಿ ಗೌರವಿಸಲಾಯಿತು. ಅಲ್ಲಿ ಅವರಿಗೆ ಸ್ಥಳೀಯ ಉದ್ಯಮಿಯೊಬ್ಬರು ಹೊಚ್ಚ ಹೊಸ ಆಡಿ A6 ಕಾರನ್ನು ಸಹ ಉಡುಗೊರೆಯಾಗಿ ನೀಡಿದರು.

ಸಿಬಿಎಸ್ ನ್ಯೂಸ್ ಪ್ರಕಾರ, ಆ ವ್ಯಕ್ತಿ ತನ್ನ ಮೇಲೆ ಉಗುಳಿದ ಇನ್ನೊಬ್ಬ ಪ್ರಯಾಣಿಕನೊಂದಿಗೆ ಜಗಳ ಮಾಡುತ್ತಾ ಹಳಿಗಳ ಮೇಲೆ ಬಿದ್ದಿದ್ದಾರೆ. ನಂತರ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ತನ್ನ ಎಡಗಾಲಿನಲ್ಲಿ ಸುಟ್ಟಗಾಯ ಮತ್ತು ಬಾಯಿಯಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದು,  ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ರೈಲು ಹಳಿಗಳ ಮೇಲೆ ಬಿದ್ದು ಅವಘಡಗಳಾಗುತ್ತಿರುವುದು ಇದೇ ಮೊದಲೇನಲ್ಲ. ಅನೇಕರು ತಮ್ಮ ಕೈ ಕಾಲುಗಳನ್ನು ಕಳೆದು ಕೊಂಡು ಅರೆಜೀವವಾದ ಅನೇಕ ಘಟನೆಗಳು ನಾವು ನೋಡಿದ್ದೇವೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಮ್ಮ ಮೆಟ್ರೋ ನಿಗಮ ಗ್ರೀನ್ ಸಿಟಿ ಉತ್ತೇಜಿಸಲು ಮೆಟ್ರೋ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಜೊತೆಗೆ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ. BMRCL ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ಮೆಟ್ರೋ ರೈಲಿನ ಕೊನೆಯ ಬೋಗಿಯಲ್ಲಿ ಮಡಚುವ ಸೈಕಲ್ (foldable bicycles) ಕೊಂಡೊಯ್ಯಬಹುದು ಎಂದು ಹೇಳಿದೆ.

click me!