ಅಮೆರಿಕಾದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್(FBI) ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಮಹಿಳೆಯೊಬ್ಬರ ಪತ್ತೆಗೆ ಭಾರಿ ಬಹುಮಾನ ಘೋಷಿಸಿದ್ದಾರೆ.
ಡಲ್ಲಾಸ್: ಅಮೆರಿಕಾದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್(FBI) ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಮಹಿಳೆಯೊಬ್ಬರ ಪತ್ತೆಗೆ ಭಾರಿ ಬಹುಮಾನ ಘೋಷಿಸಿದ್ದಾರೆ. ಸಿಂಡಿ ರೋಡ್ರಿಗಸ್ ಸಿಂಗ್ ಎಂಬ ಮಹಿಳೆಯ ವಿರುದ್ಧ ತನ್ನ 6 ವರ್ಷದ ಸ್ವಂತ ಮಗನನ್ನು ಕೊಲೆ ಮಾಡಿದ ಆರೋಪವಿದ್ದು ಆಕೆಯ ಬಂಧನಕ್ಕೆ ಈಗ ತನಿಖಾ ಸಂಸ್ಥೆ ಸಾರ್ವಜನಿಕರ ನೆರವು ಕೇಳಿದ್ದು, ಆಕೆಯ ಫೋಟೋ ಹಾಗೂ ದೇಹದಲ್ಲಿನ ಗುರುತುಗಳ ವಿವರ ನೀಡಿದೆ. ಅಮೆರಿಕಾದ ಮೆಕ್ಸಿಕೋ ಹಾಗೂ ಭಾರತದೊಂದಿಗೆ ಸಂಬಂಧವನ್ನು ಹೊಂದಿರುವ ಸಿಂಡಿ ರೋಡ್ರಿಗಸ್ ಮಗನ ಹತ್ಯೆಯ ಬಳಿಕ ಗಂಡ ಹಾಗೂ ನಾಲ್ವರು ಇತರ ಮಕ್ಕಳ ಜೊತೆ ಭಾರತಕ್ಕೆ ತೆರಳುವ ವಿಮಾನವೇರಿದ್ದಾರೆ ಎಂದು ಎಫ್‌ಬಿಐ ಆರೋಪಿಸಿದೆ.
ಈಕೆಯ ಆರು ವರ್ಷದ ಮಗ 2022ರಿಂದಲೂ ಜೀವಂತವಾಗಿಲ್ಲ, ಟೆಕ್ಸಾಸ್‌ನ ಕುಟುಂಬ ಹಾಗೂ ಸುರಕ್ಷತಾ ಸೇವಾ ವಿಭಾಗದ ಮನವಿಯ ಮರೆಗೆ ಇವರ್‌ಮೆನ್ ಪೊಲೀಸ್ ಡಿಪಾರ್ಟ್‌ಮೆಂಟ್‌ನ ಅಧಿಕಾರಿಗಳು ಬಾಲಕನ ಪರವಾಗಿ 2023ರ ಮಾರ್ಚ್ 20ರಂದು ಮಕ್ಕಳ ಸುರಕ್ಷತಾ ತಪಾಸಣೆ ಮಾಡಿದ್ದರು. ಈ ತಪಾಸಣೆ ವೇಳೆ ರೋಡ್ರಿಗಸ್ ಸಿಂಗ್ ಅಧಿಕಾರಿಗಳ ಮುಂದೆ ಸುಳ್ಳು ಹೇಳಿದ್ದಳು.
ಬೆಂಗಳೂರು: ಪುತ್ರನ ಹತ್ಯೆಗೈದ ರೌಡಿಯ ಕೊಂದ ತಂದೆ, ಮಗನ ಕೊಲೆಗೆ ರಿವೇಂಜ್ ತೀರಿಸಿಕೊಂಡ ಅಪ್ಪ..!
ಆಕೆಯ ಆರು ವರ್ಷದ ಮಗು ತನ್ನ ಮೆಕ್ಸಿಕೋದಲ್ಲಿರುವ ಜೈವಿಕ ತಂದೆಯ ಜೊತೆ ವಾಸ ಮಾಡುತ್ತಿದೆ. ಹಾಗೂ 2022ರ ನವಂಬರ್‌ನಿಂದಲೂ ಮಗು ತಂದೆಯ ಬಳಿಯೇ ಇದೆ ಎಂದು ಆಕೆ ಅಧಿಕಾರಿಗಳ ಮುಂದೆ ಸುಳ್ಳು ಹೇಳಿದ್ದಳು. ಇದಾದ ನಂತರ 2023ರ ಮಾರ್ಚ್ 22 ರಂದು ರೋಡ್ರಿಗಸ್ ಹಾಗೂ ಆಕೆಯ ಗಂಡ ಆರು ಇತರ ಅಪ್ರಾಪ್ತ ಮಕ್ಕಳ ಜೊತೆ ಭಾರತಕ್ಕೆ ಬರುತ್ತಿದ್ದ ಅಂತಾರಾಷ್ಟ್ರೀಯ ವಿಮಾನವನ್ನೇರಿದ್ದರು. ಆದರೆ ಈ ವೇಳೆ ರೋಡ್ರಿಗಸ್‌ನ ನಾಪತ್ತೆಯಾಗಿದ್ದ ಬಾಲಕ ಇವರ ಜೊತೆಗೆ ಇರಲಿಲ್ಲ. ಹಾಗೂ ಆತ ವಿಮಾನವೇರಿಲ್ಲ.
ಇದಾದ ನಂತರ 2023ರ ಆಕ್ಟೋಬರ್‌ನಲ್ಲಿ ಸಿಂಡಿ ರೋಡ್ರಿಗಜ್ ಸಿಂಗ್ ವಿರುದ್ಧ ಟೆಕ್ಸಾಸ್‌ನ ಪೋರ್ಟ್ವರ್ತ್‌ನಲ್ಲಿ ಇರುವ ಟರಾಂಟ್ ಕೌಂಟಿ ಜಿಲ್ಲಾ ನ್ಯಾಯಾಲಯವೂ ಕೊಲೆ ಪ್ರಕರಣ ದಾಖಲಿಸಿತು. ಮುಂದೆ 2023ರ ನವಂಬರ್ 2 ರಂದು ನ್ಯಾಯಾಲಯದ ವಿಚಾರಣೆ ಎದುರಿಸುವುದನ್ನು ತಪ್ಪಿಸಿಕೊಳ್ಳಲು ಆಕೆ ಕಳ್ಳಾಟವಾಡಲು ಶುರು ಮಾಡಿದ ನಂತರ ಅಮೆರಿಕಾದ ಜಿಲ್ಲಾ ನ್ಯಾಯಾಲಯವೂ ಸಿಂಡಿ ರೋಡ್ರಿಗಸ್ ಸಿಂಗ್ ಬಂಧನಕ್ಕೆ ಪೆಡರಲ್ ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಡಲ್ಲಾಸ್‌ನ ಎಫ್‌ಬಿಐ ವಿಶೇಷ ಏಜೆಂಟ್ ಉಸ್ತುವಾರಿ ಚಡ್ ಯಾರ್ಬ್ರೋಗ್ ಅವರು ಮಾಧ್ಯಮ ಹಾಗೂ ಸಾರ್ವಜನಿಕರ ಬಳಿ ಸಿಂಡಿ ರೋಡ್ರಿಗಸ್ ಸಿಂಗ್ ಬಂಧನಕ್ಕೆ ಆಕೆ ಎಲ್ಲಿದ್ದಾಳೆ ಎಂದು ಪತ್ತೆ ಮಾಡುವುದಕ್ಕೆ ಮನವಿ ಮಾಡಿದ್ದಾರೆ.
10 ವರ್ಷದ ಮಗನ ಮೇಲೆ ಕುಳಿತು ಆತನ ಉಸಿರು ನಿಲ್ಲಿಸಿದ 150 ಕೆಜಿ ತೂಕದ ತಾಯಿ
ಸಿಂಡಿ ರೋಡ್ರಿಗಸ್ ಸಿಂಗ್ ತನ್ನ ಸ್ವಂತ ಮಗನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಈಕೆಯ ಹುಡುಕಿ ಕೊಟ್ಟವರಿಗೆ ಉತ್ತಮ ಜನಮನ್ನಣೆ, ಸನ್ಮಾನ ಹಾಗೂ ಭಾರಿ ಮೊತ್ತದ ಬಹುಮಾನ ನೀಡಲಾಗುತ್ತದೆ. ಮತ್ತು ಎಫ್‌ಬಿಐ ಫೋರ್ಟ್ ವರ್ತ್ ರೆಸಿಡೆಂಟ್ ಏಜೆನ್ಸಿಯ ಅಪರಾಧ ಪತ್ತೆ ತಂಡ, ಎವರ್‌ಮನ್ ಪೊಲೀಸ್ ಇಲಾಖೆ, ಟ್ಯಾರಂಟ್ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಟೆಕ್ಸಾಸ್ ಡಿಪಿಎಸ್ ಟೆಕ್ಸಾಸ್ ರೇಂಜರ್ಸ್‌ಗಳಿರುವ ಅನುಭವಿ ತನಿಖಾಧಿಕಾರಿಗಳ ತಂಡವು ಅವಳನ್ನು ಬಂಧಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊನೆಯದಾಗಿ ರೋಡ್ರಿಗಸ್ ಇತರ ಆರು ಅಪ್ರಾಪ್ತ ಮಕ್ಕಳು ಹಾಗೂ ಗಂಡನ ಜೊತೆ ಭಾರತದ ವಿಮಾನವೇರುವ ವೇಳೆ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ. 1985ರಲ್ಲಿ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಜನಿಸಿದ ಆಕೆಗೆ ಪ್ರಸ್ತುತ 39 ವರ್ಷ. ಈಕೆ ಐದು ಅಡಿ ಒಂದು ಇಂಚು ಅಥವಾ 3 ಇಂಚಿನ ನಡುವಿನ ಎತ್ತರ ಹೊಂದಿದ್ದಾಳೆ. 120ರಿಂದ 140 ಪೌಂಡ್ ತೂಗುತ್ತಾಳೆ. ಸಾಧಾರಣ ಮಧ್ಯಮ ಮೈಬಣ್ಣ ಹೊಂದಿದ್ದಾಳೆ. ಬೆನ್ನು ಎರಡು ಕಾಲುಗಳು, ಬಲ ತೋಳು ಬಲ ಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಕಂದು ಬಣ್ಣದ ಕಣ್ಣು ಹಾಗೂ ಕಂದು ಬಣ್ಣದ ತಲೆ ಕೂದಲನ್ನು ಹೊಂದಿದ್ದಾಳೆ ಎಂದು ಎಫ್‌ಬಿಐ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ.