ಭೀಕರ ಅಪಘಾತದ ವೇಳೆ ಬೈಕ್‌ನ ಬ್ರೇಕ್ ಹ್ಯಾಂಡಲ್ 19 ವರ್ಷದ ತರುಣನ ಕಣ್ಣಿನೊಳಗೆ ಸೇರಿಕೊಂಡಿದ್ದು, ಕಠಿಣ ಶಸ್ತ್ರಚಿಕಿತ್ಸೆಯ ಮೂಲಕ ಈ ಬ್ರೇಕ್ ಹ್ಯಾಂಡಲ್ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಮಲೇಷ್ಯಾ: ಭೀಕರ ಅಪಘಾತದ ವೇಳೆ ಬೈಕ್‌ನ ಬ್ರೇಕ್ ಹ್ಯಾಂಡಲ್ 19 ವರ್ಷದ ತರುಣನ ಕಣ್ಣಿನೊಳಗೆ ಸೇರಿಕೊಂಡಿದ್ದು, ಕಠಿಣ ಶಸ್ತ್ರಚಿಕಿತ್ಸೆಯ ಮೂಲಕ ಈ ಬ್ರೇಕ್ ಹ್ಯಾಂಡಲ್ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮಲೇಷ್ಯಾದಲ್ಲಿ ಈ ಘಟನೆ ನಡೆದಿದೆ. ಆದರೂ ಅದೃಷ್ಟವಶಾತ್ ಈ ಯುವಕ ಕಣ್ಣಿನ ಯಾವುದೇ ದೃಷ್ಟಿ ದೋಷಗಳಿಲ್ಲದೇ ಪಾರಾಗಿದ್ದಾನೆ. ಕೆಲ ಮಿಲಿ ಮೀಟರ್‌ಗಳ ಅಂತರದಲ್ಲಿ ಕಣ್ಣಿನ ಗುಡ್ಡೆಗೆ ಈ ಬ್ರೇಕ್ ಹ್ಯಾಂಡಲ್ ತಗುಲದೇ ಪವಾಡಸದೃಶವಾಗಿ ಯುವಕ ಪಾರಾಗಿದ್ದಾನೆ.
ಅಪಘಾತಕ್ಕೆ ತುತ್ತಾದ ಯುವಕನಿಗೆ ಮಾಡಲಾದ ಸ್ಕ್ಯಾನಿಂಗ್ ಕಾಫಿಯ ಚಿತ್ರಗಳನ್ನು ಅಮೆರಿಕಾದ ನೇತ್ರ ವಿಜ್ಞಾನ ಜರ್ನಲ್‌ನಲ್ಲಿ ( American Journal of Ophthalmology Case) ಹಂಚಿಕೊಂಡ ವೈದ್ಯರು, ಅದು ಹೇಗೆ ಕೆಲವೇ ಮಿಲಿಮೀಟರ್‌ಗಳ ಅಂತರದಲ್ಲಿ ಅವನ ಕಣ್ಣುಗುಡ್ಡೆಯಿಂದ ಜಸ್ಟ್ ಮಿಸ್ ಆಯ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಅಪಘಾತವಾದಾಗ ಬ್ರೇಕ್ ಹ್ಯಾಂಡಲ್ ಯುವಕನ ಕಣ್ಣು ಸೇರಿದ್ದರಿಂದ ಬೈಕ್‌ನಿಂದ ಅದನ್ನು ಕಟ್ ಮಾಡಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ವೇಳೆ 19ರ ತರುಣನ ಕಣ್ಣು ಕೆಂಪಾಗಿತ್ತು ಮತ್ತು ಊದಿಕೊಂಡಿತ್ತು, ಬ್ರೇಕ್ ಹ್ಯಾಂಡಲ್ ನಂತರ ಬಲಗಣ್ಣಿನ ಕಣ್ಣು ಗುಡ್ಡೆಯ ಸಮೀಪದಲ್ಲಿ ವಿಚಿತ್ರವಾಗಿ ಚಾಚಿಕೊಂಡಿತ್ತು, ಆದರೆ ಅದು ಕಣ್ಣುಗುಡ್ಡೆಯನ್ನು ತಲುಪಿರಲಿಲ್ಲ. ಆದರೆ ಕಣ್ಣಿನ ರೆಟಿನಾಗೆ ಹಾನಿಯಾಗಿತ್ತು.
undefined
ಹೃದಯಕ್ಕೆ ಚುಚ್ಚಿದ್ದ 75 ಸೆಂಮೀ ಉದ್ದ ಕಬ್ಬಿಣದ ರಾಡ್ ತೆಗೆದ ವೈದ್ಯರು; 54 ವರ್ಷದ ವ್ಯಕ್ತಿಗೆ ಮರುಜನ್ಮ
ವಿವರವಾದ ಪರೀಕ್ಷೆ ಸ್ಕ್ಯಾನಿಂಗ್‌ನ ನಂತರ, ವೈದ್ಯರು ಹುಡುಗನ ಕಣ್ಣಿನ ರೆಟಿನಾವೂ ಹಾನಿಗೊಳಗಾಗಿವೆ ಅವುಗಳಿಗೆ ಮಬ್ಬು ಕವಿದಿದೆ ಎಂದು ಹೇಳಿದರು. ( ಕಣ್ಣಿನ ಹಿಂಭಾಗದಲ್ಲಿರುವ ನರ ಅಂಗಾಂಶವಾದ ಈ ರೆಟಿನಾಗಳು ಬೆಳಕಿನ ಸೂಕ್ಷ್ಮ ಪದರಗಳು ಚಿತ್ರಗಳನ್ನು ಸ್ವೀಕರಿಸುತ್ತವೆ ಮತ್ತು ಅವುಗಳನ್ನು ವಿದ್ಯುತ್ ಸಂಕೇತಗಳಾಗಿ ಕಳುಹಿಸುತ್ತವೆ).
ಈ ಹಾನಿಯ ಜೊತೆಗೆ 17 ಸೆಂ.ಮೀ ಉದ್ದದ ಈ ಬ್ರೇಕ್ ಹ್ಯಾಂಡಲ್ ಮೂಗಿನ ಸುತ್ತಲಿನ ಮೂಳೆಯ ಭಾಗವನ್ನು ಹಾನಿಗೊಳಿಸಿತ್ತು. ಅಲ್ಲದೇ ಇಸಿಜಿ ವೇಳೆ ಅವರ ಹೃದಯ ಬಡಿತವೂ ಪ್ರತಿ ನಿಮಿಷಕ್ಕೆ ಕೇವಲ 45 ರಿಂದ 48 ರಷ್ಟೆ ಹೊಡೆದುಕೊಳ್ಳುತ್ತಿವೆ ಎಂಬುದು ಪರಿಸ್ಥಿತಿಯ ವಿಷಮತೆಯನ್ನು ಸೂಚಿಸುತ್ತಿತ್ತು(ಸಾಮಾನ್ಯ ವ್ಯಕ್ತಿಯ ಹೃದಯವೂ ನಿಮಿಷಕ್ಕೆ 60 ರಿಂದ 100 ಬಾರಿ ಮಿಡಿಯುತ್ತದೆ)
ಅಯ್ಯೋ ಎಂಥಾ ಆಧ್ವಾನ! ಗೊಂದಲದಿಂದ ಬೇರೆ ಗರ್ಭಿಣಿಗೆ ಗರ್ಭಪಾತ ಮಾಡಿಸಿದ ವೈದ್ಯರು!
ಹೀಗಾಗಿ ಈ ಹುಡುಗನಿಗೆ ಕ್ಯುಲೋಕಾರ್ಡಿಯಾಕ್ ರಿಫ್ಲೆಕ್ಸ್ ಅಥವಾ ಒಸಿಆರ್ ಎಂದು ರೋಗನಿರ್ಣಯ ಮಾಡಲಾಯಿತು.ನಂತರ ಕೂಡಲೇ ಹುಡುಗನನ್ನು ಶಸ್ತ್ರಚಿಕಿತ್ಸೆ ನಡೆಸಲು ಕರೆದೊಯ್ದು, ಆತನ ಕಣ್ಣಿನ ಒಳಗೆ ಸೇರಿದ್ದ ಬ್ರೇಕ್ ಹ್ಯಾಂಡಲ್ ಅನ್ನು ತೆಗೆಯಲಾಯ್ತು. ಪರಿಣಾಮ ಯುವಕ ಅನಾಹುತದಿಂದ ಪಾರಾಗಿದ್ದು, ಪ್ರಸ್ತುತ ಆರೋಗ್ಯವಾಗಿದ್ದಾನೆ ಎಂದು ತಿಳಿದು ಬಂದಿದೆ.
( ಕ್ಯುಲೋಕಾರ್ಡಿಯಾಕ್ ರಿಫ್ಲೆಕ್ಸ್ ಅಂದರೆ ಒತ್ತಡ ಹಾಗೂ ಬಾಹ್ಯ ಸ್ನಾಯುಗಳ ಎಳೆತದ ನಂತರ ಹೃದಯ ಬಡಿತದಲ್ಲಿ ಶೇಕಡಾ 20ಕ್ಕಿಂತಲೂ ಇಳಿಕೆಯಾಗುವ ಸ್ಥಿತಿ. ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದ್ದು, ಇದು ಸೈನಸ್ ಬ್ರಾಡಿಕಾರ್ಡಿಯಾ, ಕಡಿಮೆ ಅಪಧಮನಿಯ ಒತ್ತಡ, ಆರ್ಹೆತ್ಮಿಯಾ, ಅಸಿಸ್ಟೋಲ್ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.)