ಕಾಲರಾ ಹರಡುವ ಭೀತಿ, ಗುಳೆ ಹೊರಟ ಜನರ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನ ಸಾವು!

By Suvarna NewsFirst Published Apr 8, 2024, 2:18 PM IST
Highlights

ಆಗ್ನೇಯ ಆಫ್ರಿಕಾದ ಮೊಜಾಂಬಿಕ್‌ ದೇಶದ ಉತ್ತರ ಕರಾವಳಿಯಲ್ಲಿ ದೋಣಿ ದುರಂತ ಸಂಭವಿಸಿ  90 ಕ್ಕೂ ಹೆಚ್ಚು ಜನರು ಜಲ ಸಮಾಧಿಯಾಗಿರುವ ಘಟನೆ ನಡೆದಿದೆ. 

ಮೊಜಾಂಬಿಕ್‌ (ಏ.08): ಆಗ್ನೇಯ ಆಫ್ರಿಕಾದ ಮೊಜಾಂಬಿಕ್‌ ದೇಶದ ಉತ್ತರ ಕರಾವಳಿಯಲ್ಲಿ ದೋಣಿ ದುರಂತ ಸಂಭವಿಸಿ  90 ಕ್ಕೂ ಹೆಚ್ಚು ಜನರು ಜಲ ಸಮಾಧಿಯಾಗಿರುವ ಘಟನೆ ನಡೆದಿದೆ.  ಭಾನುವಾರ ಈ ದುರಂತ ನಡೆದಿದ್ದು,ಪರಿವರ್ತನೆ ಮಾಡಿರುವ ಮೀನುಗಾರಿಕಾ ದೋಣಿಯಲ್ಲಿ ಸುಮಾರು 130 ಜನರನ್ನು ಹೊತ್ತೊಯ್ಯುತ್ತಿದ್ದ ವೇಳೆ, ನಂಪುಲಾ ಪ್ರಾಂತ್ಯದ ದ್ವೀಪವನ್ನು ತಲುಪಲು ಪ್ರಯತ್ನಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಣನೆಯಲ್ಲಿ ಈವರೆಗೆ 94 ಮಂದಿ ಮೃತಪಟ್ಟಿರುವ ಬಗ್ಗೆ ಜಾಗತಿಕ ಮಾಧ್ಯಮಗಳು ವರಿ ಮಾಡಿದ್ದು, 26 ಮಂದ ಕಾಣೆಯಾಗಿದ್ದಾರೆ. 5 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಸಮುದ್ರದ ಪರಿಸ್ಥಿತಿಗಳು ಕೆಟ್ಟದಾಗಿರುವ ಕಾರಣಕ್ಕೆ ಕಾರ್ಯಾಚರಣೆ ಕಷ್ಟಕರವಾಯ್ತು. 

ಬೋಟ್ ಕಿಕ್ಕಿರಿದು ಪ್ರಯಾಣಿಕರನ್ನು ಸಾಗಿಸಲು ಸೂಕ್ತವಲ್ಲದ ಕಾರಣ ಅದು ಮುಳುಗಿತು. ಸದ್ಯದ ಮಾಹಿತಿಯಂತೆ 90ಕ್ಕೂ ಅಧಿಕ ಜನರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ, ಬಲಿಯಾದರಲ್ಲಿ ಮಕ್ಕಳೇ ಹೆಚ್ಚು ಎಂದು ನಂಬುಲಾದ ರಾಜ್ಯ ಕಾರ್ಯದರ್ಶಿ ಜೈಮ್ ನೆಟೊ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮೊಜಾಂಬಿಕ್‌ ನಲ್ಲಿ ಸಾಂಕ್ರಾಮಿಕ ರೋಗ ಕಾಲರಾ ಹೆಚ್ಚುತ್ತಿದೆ ಎಂಬ ತಪ್ಪು ಮಾಹಿತಿಯಿಂದ ಉಂಟಾದ ಭೀತಿಯಿಂದಾಗಿ ಹೆಚ್ಚಿನವರು ವಲಸೆ ಹೊರಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.  ಸರ್ಕಾರದ ಅಂಕಿಅಂಶಗಳ ಪ್ರಕಾರ, ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದ ದೇಶವು ಅಕ್ಟೋಬರ್‌ನಿಂದ ಈವರೆಗೆ ಸುಮಾರು 15,000 ನೀರಿನಿಂದ ಹರಡುವ ವಿವಿಧ ಕಾಯಿಲೆಗಳಿಂದ ತತ್ತರಿಸಿದೆ. ಈವರೆಗೆ 32 ಸಾವುಗಳು ಸಂಭವಿಸಿದೆ. ನಂಬುಲಾ ಅತ್ಯಂತ ಕೆಟ್ಟ ಪೀಡಿತ ಪ್ರದೇಶವಾಗಿದೆ, ಇದು ಎಲ್ಲಾ ಪ್ರಕರಣಗಳಲ್ಲಿ ಮೂರನೇ ಒಂದು ಭಾಗವಾಗಿದೆ.

click me!