ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿಯುತ್ತಿರುವುದನ್ನು ದೃಢಪಟ್ಟ ನಂತರ ನಾವು ತಕ್ಷಣವೇ 2 ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆವು ಎಂದು ಕೋಸ್ಟಲ್ ಗಾರ್ಡ್ಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾರತೀಯ - ಅಮೆರಿಕ (Indian American) ಮೂಲದ ಹದಿಹರೆಯದ ಯುವಕನೊಬ್ಬ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ (United States of America) ಪ್ರಸಿದ್ಧ ಗೋಲ್ಡನ್ ಗೇಟ್ ಬ್ರಿಡ್ಜ್‌ನಿಂದ (Golden Gate Bridge) ಹಾರಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಬಾಲಕನ ಪೋಷಕರು (Parents) ಹಾಗೂ ಅಮೆರಿಕದ ಕೋಸ್ಟಲ್ ಗಾರ್ಡ್ಸ್ ಅಧಿಕಾರಿಗಳು (Coastal Guards Officials) ಸಹ ಈ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸೇತುವೆಯ ಮೇಲೆ 16 ವರ್ಷದ ಬಾಲಕನ ಸೈಕಲ್, ಫೋನ್ ಮತ್ತು ಬ್ಯಾಗ್ ಪತ್ತೆಯಾಗಿದ್ದು, 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಸಂಜೆ 4.58 ರ ಸುಮಾರಿಗೆ ಸೇತುವೆಯಿಂದ ಜಿಗಿದಿದ್ದಾನೆ ಎಂದು ಹೇಳಲಾಗಿದೆ.
ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿಯುತ್ತಿರುವುದನ್ನು ದೃಢಪಟ್ಟ ನಂತರ ನಾವು ತಕ್ಷಣವೇ 2 ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆವು ಎಂದು ಕೋಸ್ಟಲ್ ಗಾರ್ಡ್ಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಾಲಕ ಜೀವಂತನಾಗಿದ್ದಾನೆ ಎಂದು ನಂಬುವುದು ಕಷ್ಟ ಎಂದೂ ಹೇಳಲಾಗಿದೆ. ಇನ್ನು, ಭಾರತೀಯ ಮೂಲದ ಅಮೆರಿಕದ ವ್ಯಕ್ತಿ ಗೋಲ್ಡನ್ ಬ್ರಿಡ್ಜ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವುದು ಇದು ನಾಲ್ಕನೇ ಘಟನೆ ಎಂದು ಭಾರತೀಯ ಸಮುದಾಯದ ಮುಖಂಡ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.
ಇದನ್ನು ಓದಿ: ಕಲಬುರಗಿ: ಆತ್ಮಹತ್ಯೆಗೆ ಪ್ರಚೋದನೆ, ಮಹಿಳೆಗೆ ಜೈಲು ಶಿಕ್ಷೆ
ಇನ್ನು, ಗೋಲ್ಡನ್ ಗೇಟ್ ಸೇತುವೆಯ ಮೇಲಿನ ಆತ್ಮಹತ್ಯೆಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಲಾಭರಹಿತ ಸಂಸ್ಥೆ ಬ್ರಿಡ್ಜ್ ರೈಲ್ ಫೌಂಡೇಶನ್ ಪ್ರಕಾರ, ಕಳೆದ ವರ್ಷ 25 ಜನರು ಈ ಜಾಗದಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ ಮತ್ತು 1937 ರಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ ಬಳಿಕ ಸುಮಾರು 2,000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದೂ ಹೇಳಿದ್ದಾರೆ.
ಇನ್ನು, 1.7 ಮೈಲಿ ಉದ್ದದ ಸೇತುವೆಯ ಎರಡೂ ಬದಿಯಲ್ಲಿ 20 ಅಡಿ ಅಗಲದ ಕಬ್ಬಿಣದ ಜಾಲರಿ ರಚಿಸಲು ಅಲ್ಲಿನ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದೂ ತಿಳಿದುಬಂದಿದೆ. ಆದರೂ, ಈ ವರ್ಷದ ಜನವರಿ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಬೇಕಿತ್ತಾದರೂ, ಈ ಕಾರ್ಯ ನಿಗದಿತ ಅವಧಿಗಿಂತ ತುಂಬಾ ವಿಳಂಬವಾಗುತ್ತಿದೆ ಮತ್ತು ಅದರ ನಿರ್ಮಾಣ ವೆಚ್ಚವು 137.26 ಮಿಲಿಯನ್ ಯುರೋಗಳಿಂದ ಸುಮಾರು 386.64 ಮಿಲಿಯನ್ ಯುರೋಗಳಿಗೆ ಜಿಗಿದಿದೆ. ಈ ಯೋಜನೆಯ ಕೆಲಸ 2018 ರಲ್ಲಿ ಪ್ರಾರಂಭವಾಯಿತು ಎಂದೂ ವರದಿಯಾಗಿದೆ.
ಇದನ್ನೂ ಓದಿ: ಬಸವನಬಾಗೇವಾಡಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಮಹಿಳೆಯೊಬ್ಬರು ಕೌಟುಂಬಿಕ ಕಲಹದಿಂದ ನೊಂದು ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಗ್ರಾಮದ ರೇಣುಕಾ ಅಮೀನಪ್ಪ ಕೋನಿನ (26) ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳಾದ ಯಲ್ಲವ್ವ (2), ಅಮೃತಾ (1) ಅವರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ 2 ದಿನಗಳ ಹಿಂದೆ ಹಾರಿದ್ದು, ತಾಯಿ ಮತ್ತು ಒಂದು ಹೆಣ್ಣು ಮಗುವಿನ ಶವ ಸಿಕ್ಕಿದೆ.
ರೇಣುಕಾ ಅವರು ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದರು. ಜೊತೆಗೆ ತನ್ನ ಪುಟ್ಟಇಬ್ಬರು ಹೆಣ್ಣಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಎರಡು ದಿನಗಳ ಕಾಲ ಗಂಡನ ಮನೆಯವರು ರೇಣುಕಾ ಇಬ್ಬರು ಮಕ್ಕಳನ್ನು ಹುಡುಕಾಡಿದ ನಂತರ ಗಂಡನ ಮನೆಯವರು ಕಾಣೆಯಾಗಿದ್ದರ ಕುರಿತು ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಬಳಿಕ ಉಕ್ಕಲಿ ಗ್ರಾಮದ ಕಾಲುವೆಯಲ್ಲಿ ರೇಣುಕಾ ಹಾಗೂ ಒಂದು ಹೆಣ್ಣಮಗುವಿನ ಶವ ಪತ್ತೆಯಾಗಿತ್ತು.
ಇದನ್ನೂ ಓದಿ: ಪ್ರೀತಿಸಿದಾಕೆಗೆ ಮದುವೆ : ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ 17ರ ತರುಣ