30 ದಾಟಿದವರನ್ನು ನಿಷೇಧಿಸಿದ ಬಾರ್‌: ಕಾರಣ ಕೇಳಿದ್ರೆ ಒಂದ್ ಪೆಗ್ ಜಾಸ್ತಿ ಕುಡಿತೀರಾ!

By Anusha KbFirst Published Jan 24, 2023, 9:22 PM IST
Highlights

 ಥೈಲ್ಯಾಂಡ್‌ನ  ಬಾರೊಂದು ಅಪ್ರಾಪ್ತರನ್ನು ಬಿಟ್ಟು 30 ದಾಟಿದವರಿಗೆ ನಿಷೇಧ ಹೇರಿದೆ.  ನಿಷೇಧ ಏಕೆ ಹೇರಿದೆ ಎಂಬ ಕಾರಣ ತಿಳಿದರೆ 30 ದಾಟಿದ ಕುಡುಕರು ಚಿಂತೆಗೆ ಒಳಗಾಗಿ ಇನ್ನು ಒಂದು ಪೆಗ್‌ ಎಕ್ಸ್ಟ್ರಾ ಕುಡಿಯುವುದಂತು ಪಕ್ಕಾ..! 

ಬಾರ್ ಪಬ್‌ಗಳಿಗೆ ತೆರಳುವುದಕ್ಕೆ  ಅಪ್ರಾಪ್ತರಿಗೆ ನಿಷೇಧ ಹೇರುವ ನಿಯಮವಿದೆ.  ಹರೆಯದ ಮಕ್ಕಳು ಚಟಕ್ಕೆ ಬಿದ್ದು, ಆರೋಗ್ಯ ಹಾಳು ಮಾಡಿಕೊಳ್ಳದಿರಲಿ ಎಂಬ ಕಾರಣಕ್ಕೆ ಒಂದೊಂದು ದೇಶದಲ್ಲಿ  ಒಂದೊಂದು ತರ ಅಬಕಾರಿ ಕಾನೂನಿದೆ. ಇದರಂತೆ ಅಪ್ರಾಪ್ತರು ಮದ್ಯ ಸೇವಿಸುವಂತಿಲ್ಲ. ಬಾರ್ ಪಬ್‌ಗಳಿಗೆ ಹೋಗುವಂತಿಲ್ಲ.  ಆದರೆ  ಥೈಲ್ಯಾಂಡ್‌ನ  ಬಾರೊಂದು ಅಪ್ರಾಪ್ತರನ್ನು ಬಿಟ್ಟು 30 ದಾಟಿದವರಿಗೆ ನಿಷೇಧ ಹೇರಿದೆ.  ನಿಷೇಧ ಏಕೆ ಹೇರಿದೆ ಎಂಬ ಕಾರಣ ತಿಳಿದರೆ 30 ದಾಟಿದ ಕುಡುಕರು ಚಿಂತೆಗೆ ಒಳಗಾಗಿ ಇನ್ನು ಒಂದು ಪೆಗ್‌ ಎಕ್ಸ್ಟ್ರಾ ಕುಡಿಯುವುದಂತು ಪಕ್ಕಾ..! 

30 ದಾಟಿದವರು ಸಾಕಷ್ಟು ಟ್ರೆಂಡಿ ಆಗಿಲ್ಲ ಎಂಬ ಕಾರಣಕ್ಕೆ  ಬಾರ್‌ಗೆ ಪ್ರವೇಶ ನಿಷೇಧಿಸಿರುವುದಾಗಿ ಥೈಲ್ಯಾಂಡ್‌ನ  ಈ ಬಾರ್ ಹೇಳಿದ್ದು,  ಇದರಿಂದ ಬಾರ್ ಗ್ರಾಹಕರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.   1991 ನಂತರ ಹುಟ್ಟಿದ್ದವರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಎಂದು ಈ ಬಾರ್ ಹೇಳಿದೆ. Zync Rangsit ಎಂಬ ಹೆಸರಿನ ಬಾರೇ ಈಗ  30 ದಾಟಿದವರ ಆಕ್ರೋಶಕ್ಕೆ ತುತ್ತಾಗಿರುವ ಥೈಲ್ಯಾಂಡ್‌ನ ಬಾರ್ & ರೆಸ್ಟೋರೆಂಟ್‌.  

93ನೇ ವಯಸ್ಸಿನಲ್ಲಿ 4ನೇ ಮದುವೆಯಾದ ಅಮೆರಿಕಾದ ಚಂದ್ರಯಾನಿ... ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

ಥೈಲ್ಯಾಂಡ್‌ನ (Thailand) ರಾಜಧಾನಿ ಬ್ಯಾಂಕಾಕ್‌ನ (Bangkok) ಹೊರವಲಯದಲ್ಲಿರುವ ಪಾಥುಮ್ ಥಾನಿ ಪ್ರಾಂತ್ಯದಲ್ಲಿ ಈ ಬಾರ್ ಇದೆ. ತನ್ನ ಗುರುತಿನ ಚೀಟಿ ನೋಡಿದ ಬಳಿಕ ನನಗೆ 36 ವರ್ಷ ಎಂದು ತಿಳಿದು ಬಾರ್‌ನ ಕಾವಲುಗಾರರು ನನಗೆ ಪ್ರವೇಶ ನಿರಾಕರಿಸಿದರು ಎಂದು ವ್ಯಕ್ತಿಯೊಬ್ಬರು ದೂರಿದ್ದು,  ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಅವರು ಆ ಸ್ಥಳದಿಂದ ಹೊರ ನಡೆದಿದ್ದಾರೆ. 

ವಯಸ್ಸಾದವರಿಗೆ ಪ್ರವೇಶವಿಲ್ಲ ಎಂಬ ನೀತಿ ಜಾರಿಗೆ ಬರುವ ಮೊದಲು, ಅವರು ತಿಂಗಳಿಗೊಮ್ಮೆ ಈ ಕ್ಲಬ್‌ಗೆ ಭೇಟಿ ನೀಡುತ್ತಿದ್ದರು. ಆದರೆ ಅವರು ಇತ್ತೀಚೆಗೆ ಈ ಪಬ್ & ಬಾರ್‌ಗೆ ಭೇಟಿ ನೀಡಿದಾಗ  1991 ರ ನಂತರ ಜನಿಸಿದ ವಿದ್ಯಾರ್ಥಿಗಳು ಅಥವಾ ಗ್ರಾಹಕರಿಗೆ ಮಾತ್ರ ಒಳಗೆ ಪ್ರವೇಶಿಸಲು ಅನುಮತಿ ಎಂದು  ಬಾರ್ ಸಿಬ್ಬಂದಿ ತಿಳಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತೋಳದಂತೆ ಕಾಣಿಸಲು 18 ಲಕ್ಷ ವೆಚ್ಚ ಮಾಡಿದ ವ್ಯಕ್ತಿ

ನ್ಯೂಸ್‌ವೀಕ್ ವರದಿ ಮಾಡಿರುವ ಇನ್ನೊಂದು ಪ್ರಕರಣದಲ್ಲಿ  ಅಮೆರಿಕಾದಲ್ಲಿ  30 ವರ್ಷ ಆಗಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರಿಗೆ ಬಾರ್‌ಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು.  ಕ್ಯಾಲಿಫೋರ್ನಿಯಾದ (California) ಲಾಸ್ ಏಂಜಲೀಸ್‌ನಲ್ಲಿರುವ (Los Angeles) ಮೆಲೊಡಿ ಬಾರ್ (Melody Bar) ಮತ್ತು ಗ್ರಿಲ್, 30 ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನ ಜನರಿಗೆ ನಿಷೇಧ ಹೇರಿ 30 ದಾಟಿದವರಿಗೆ ಮಾತ್ರ ಅನುಮತಿ ನೀಡಿತ್ತು. 

click me!