6ನೇ ಮಹಡಿಯಿಂದ ಬಿದ್ದು ಬದುಕುಳಿದ ಬೆಕ್ಕು : ಕಾರಿನ ಗಾಜು ಪುಡಿ ಪುಡಿ

By Anusha KbFirst Published Jun 3, 2023, 1:18 PM IST
Highlights

ಬೆಕ್ಕು ತನ್ನ ಮಾಲೀಕರ ಜೊತೆ ಬಾಲ್ಕನಿ ಗೋಡೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಕಟ್ಟಡದ ಆರನೇ ಮಹಡಿಯಿಂದ ಜಾರಿ ಕೆಳಗೆ ಬಿದ್ದಿದೆ.  ಇತ್ತ ಬೆಕ್ಕು ಬಿದ್ದ ರಭಸಕ್ಕೆ ಕೆಳಗೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಮನುಷ್ಯರೇನಾದರೂ ಆಯತಪ್ಪಿ 6ನೇ ಮಹಡಿಯಿಂದ ಬಿದ್ದರೆ ಏನಾಗ್ಬಹುದು. ಬಹುತೇಕ ಜೀವನೇ ಹೋಗ್ಬಹುದು. ಒಂದು ವೇಳೆ ಜೀವಂತವಾಗಿದ್ರು ಸೊಂಟ ಮುರಿದು ಕೈಕಾಲುಗಳ ಸ್ವಾಧೀನ ತಪ್ಪುವುದಂತೂ ಪಕ್ಕಾ. ಹಾಗೆಯೇ ಇಲ್ಲೊಂದು ಬೆಕ್ಕು, ಆಯತಪ್ಪಿ ಕಟ್ಟಡದ 6ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಹೀಗೆ ಕೆಳಗೆ ಬಿದ್ದಿದ್ದರಿಂದ  ಬೆಕ್ಕಿನ ಸೊಂಟ ಮುರಿತ ಅಥವಾ ಸತ್ತೇ ಹೋಯ್ತ ಅಂತ ಗಾಬರಿಯಾದ್ರೆ ನಮ್ಮ ಊಹೆ ತಪ್ಪು. ಇಲ್ಲಿ ಬೆಕ್ಕಿಗೇನು ಆಗಿಲ್ಲ ಪವಾಡ ಸದೃಶವಾಗಿ ಬೆಕ್ಕು ಪಾರಾಗಿದ್ದು, ಸಾಲದಕ್ಕೆ ಮೇಲಿನಿಂದ ಬೆಕ್ಕು ಬಿದ್ದ ಕಾರಣಕ್ಕೆ ಕೆಳಗೆ ನಿಲ್ಲಿಸಿದ ಕಾರಿನ ಗಾಜು ಕಲ್ಲೆಸೆದಂತೆ ಪುಡಿ ಪುಡಿಯಾಗಿದೆ. 

ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  ಈ ಬೆಕ್ಕು ತನ್ನ ಮಾಲೀಕರ ಜೊತೆ ಬಾಲ್ಕನಿ ಗೋಡೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಕಟ್ಟಡದ ಆರನೇ ಮಹಡಿಯಿಂದ ಜಾರಿ ಕೆಳಗೆ ಬಿದ್ದಿದೆ.  ಇತ್ತ ಬೆಕ್ಕು ಬಿದ್ದ ರಭಸಕ್ಕೆ ಕೆಳಗೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ.  ಕಾರಿನ ಮಾಲೀಕ ಅಪಿವತ್ ಟೊಯೊಥಕ (Apiwat Toyothaka) ಈ ವಿಚಾರವನ್ನು ಶಿಫು ಎಂಬ ಹೆಸರಿನ ಟಾಮ್‌ಕ್ಯಾಟ್ ನ ಫೋಟೋ ಸಮೇತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕಾಂಡೋಮಿನಿಯಂ ಮ್ಯಾನೇಜರ್ ಬೆಳಗ್ಗೆ 7 ಗಂಟೆಗೆ ನನಗೆ ಕರೆ ಮಾಡಿ ಬೆಕ್ಕೊಂದು ತಮ್ಮ ಕಾರಿನ ಮೇಲೆ ಬಿದ್ದಿದ್ದರಿಂದ ಕಾರಿನ ಗಾಜು ಒಡೆದು ಹೋಗಿದೆ ಎಂದು ಹೇಳಿದ್ದಾರೆ. ಇದರಿಂದ ನನಗೆ ಗೊಂದಲವಾಯ್ತು.  ಕೇವಲ ಬೆಕ್ಕು ಬಿದ್ದಿದ್ದರಿಂದ ಕಾರಿನ ಗಾಜು ಒಡೆಯಲು ಹೇಗೆ ಸಾಧ್ಯ ಎಂದು ನಾನು ಗೊಂದಲಕ್ಕೊಳಗಾಗಿದ್ದೆ. ಆದರೆ ಈ ಬೆಕ್ಕು 8.5 ಕಿಲೋಗ್ರಾಂಗಳಷ್ಟು ತೂಕವಿತ್ತು ಹಾಗೂ ನನ್ನ ಕಾರಿನ ಗಾಜು ಒಡೆದು ಹೋಗಲು ಕಾರಣವಾಯ್ತು' ಎಂದು ಅವರು ಬರೆದುಕೊಂಡಿದ್ದಾರೆ.

 

ಗಮನಾರ್ಹ ಸಂಗತಿಯೆಂದರೆ, ಮೇ 27 ರಂದು ಬೆಕ್ಕು ತನ್ನ ಮಾಲೀಕರ ಜೊತೆ ಬಾಲ್ಕನಿ ಗೋಡೆಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾಗ ಜಾರಿ ಕೆಳಗೆ ಬಿದ್ದಿದೆ. ಈ ಬಗ್ಗೆ ಕಾರಿನ ಮಾಲೀಕರಿಗೆ ತಿಳಿಸಿದಾಗ, ಅವರು ಘಟನಾ ಸ್ಥಳಕ್ಕೆ ಬಂದು ನೋಡಿದಾಗ  ಕಾರಿನ ಹಿಂಬದಿಯ ಗಾಜು ಒಡೆದು ಹೋಗಿರುವುದು ಕಂಡು ಬಂದಿದೆ. ನಂತರ ಬೆಕ್ಕನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಾಗಿದೆ. ಈ ವೇಳೆ ಬೆಕ್ಕಿನ ಮೂಳೆಗಳು ಮುರಿದಿದ್ದು, ಮೂಗು ಊದಿಕೊಂಡಿರುವುದು ಸ್ಕ್ಯಾನಿಂಗ್‌ನಲ್ಲಿ ಗೊತ್ತಾಗಿದೆ. ಆದರೆ ಬೆಕ್ಕಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಗಾಯಾಳುಗಳು ತಿಳಿಸಿದ್ದಾರೆ.  ಕಾರಿಗೆ ಹಾನಿಯಾಗಿದ್ದರೂ,  ಈ ಘಟನೆ ಉದ್ದೇಶಪೂರ್ವಕವಾಗಿಲ್ಲದ ಕಾರಣ ಕಾರಿನ ಮಾಲೀಕರು ಕೋಪಗೊಂಡಿಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಕಾರು ಹಾಗೂ ಬೆಕ್ಕಿನ ಫೋಟೋ ಹಾಕಿದ ಬಳಿಕ ಅನೇಕರು ಬೆಕ್ಕಿನ ಸ್ಥಿತಿ ಬಗ್ಗೆ ಕೇಳಲು ಶುರು ಮಾಡಿದ್ದಾರೆ. ನಂತರ ಬೆಕ್ಕಿನ ಬಗ್ಗೆ ಅವರು ಮತ್ತೆ ಫೋಟೋ ಶೇರ್ ಮಾಡಿಕೊಂಡು ಅದರ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

Astrology Tips: ಬೆಕ್ಕಿಗ್ಯಾಕಿಲ್ಲ ಪೂಜೆ… ಅದು ಯಾರ ವಾಹನ?

 ಅವರು ಕೋಪಗೊಳ್ಳಲಿಲ್ಲ ಎಂದು ಟೊಯೊಥಕ್ ಹೇಳಿದರು. ಬೆಕ್ಕಿನ ಬಗ್ಗೆ ಅನೇಕರು ಚಿಂತಿತರಾದ ನಂತರ ಅವರು ನಂತರ ತಮ್ಮ ಅನುಯಾಯಿಗಳು ಮತ್ತು ಅವರ ಸ್ನೇಹಿತರಿಗೆ ಶಿಫುವಿನ ಸ್ಥಿತಿಯನ್ನು ನವೀಕರಿಸಿದರು. ಆದರೆ ಬೆಕ್ಕಿನ ಮಾಲೀಕರಿಗೆ  1,000 THB (ಸುಮಾರು ₹ 2,382) ದಂಡ ವಿಧಿಸಲಾಗಿದೆ ಏಕೆಂದರೆ ಅವರು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಬೆಕ್ಕುಗಳ ಅಥವಾ ಯಾವುದೇ ಸಾಕುಪ್ರಾಣಿಗಳನ್ನು ಸಾಕಲು ಅನುಮತಿ ಇಲ್ಲ. 

ಮನೆಗೆ ಬೆಕ್ಕು ಬಂದು ಸೇರಿಕೊಂಡರೆ ಏನರ್ಥ? ಧರ್ಮಗ್ರಂಥಗಳು ಹೇಳುವುದೇನು?

 

click me!