ಕರ್ನಾಟಕ ರೀತಿ ಮುಂಬರುವ ವಿಧಾನಸಭೆ ಚುನಾವಣೆಗಳನ್ನೂ ಗೆಲ್ಲುತ್ತೇವೆ: ರಾಹುಲ್

Published : Jun 03, 2023, 07:23 AM IST
 ಕರ್ನಾಟಕ ರೀತಿ ಮುಂಬರುವ ವಿಧಾನಸಭೆ ಚುನಾವಣೆಗಳನ್ನೂ ಗೆಲ್ಲುತ್ತೇವೆ: ರಾಹುಲ್

ಸಾರಾಂಶ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ವಿಜಯದಿಂದ ಆನಂದ ತುಂದಿಲರಾಗಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಂಬರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ವಾಷಿಂಗ್ಟನ್‌:  ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಭರ್ಜರಿ ವಿಜಯದಿಂದ ಆನಂದ ತುಂದಿಲರಾಗಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಂಬರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ವಿರುದ್ಧ ದೇಶಾದ್ಯಂತ ಗುಪ್ತ ಅಲೆ (ಅಂಡರ್‌ಕರೆಂಟ್‌) ಇದ್ದು, 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ.

ಗುರುವಾರ ಅಮೆರಿಕದ ನ್ಯಾಷನಲ್‌ ಪ್ರೆಸ್‌ ಕ್ಲಬ್‌ (ಎನ್‌ಪಿಸಿ) ಹಾಗೂ ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಫ್ರಾಂಕ್‌ ಇಸ್ಲಾಂ (Frank Islam) ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರಿಗೆ ಶೇ.60ರಷ್ಟು ಭಾರತೀಯರು ಮತ ಹಾಕಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಿಜೆಪಿ ವಿರುದ್ಧ ಗುಪ್ತ ಅಲೆ ದೇಶಾದ್ಯಂತ ಬಲಗೊಳ್ಳುತ್ತಿದೆ. ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಅದು ಜನರನ್ನು ಅಚ್ಚರಿಗೆ ದೂಡಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ (RSS) ಹಾಗೂ ಬಿಜೆಪಿಯ (BJP) ಮಹಾರಥವನ್ನು ತಡೆದು ನಿಲ್ಲಿಸಲಾಗದು ಎಂದು ಜನರನ್ನು ನಂಬಿಸಲಾಗಿದೆ. ಆದರೆ ಅದು ಹಾಗಿಲ್ಲ. ನಾನು ಈಗಲೇ ಹೇಳುತ್ತೇನೆ. ಮುಂದಿನ ಮೂರ್ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜತೆ ನಾವು ನೇರವಾಗಿ ಹೋರಾಡುತ್ತೇವೆ. ಬಿಜೆಪಿಯನ್ನು ಧೂಳೀಪಟ ಮಾಡುತ್ತೇವೆ. ಕರ್ನಾಟಕದಲ್ಲಿ ಏನನ್ನು ಸಾಧಿಸಿದೇವೆಯೋ ಅದನ್ನೇ ಆ ರಾಜ್ಯಗಳಲ್ಲೂ ಮಾಡುತ್ತೇವೆ. ಆದರೆ ಭಾರತೀಯ ಮಾಧ್ಯಮಗಳನ್ನು ಈ ಬಗ್ಗೆ ಕೇಳಿ ನೋಡಿ. ಅವರು ಇದೆಲ್ಲಾ ಆಗುವುದಿಲ್ಲ ಎಂದೇ ಹೇಳುತ್ತಾರೆ’ ಎಂದು ರಾಹುಲ್‌ (Rahul Gandhi) ಹೇಳಿದರು. ವರ್ಷಾಂತ್ಯಕ್ಕೆ ಮಧ್ಯಪ್ರದೇಶ (Madhya Pradesh), ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಂ (Mizoram) ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಬೇಕಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿದೆ.

ಸಾಮಾನ್ಯ ವೀಸಾ: ಅಮೆರಿಕ ಏರ್‌ಪೋರ್ಟ್‌ನಲ್ಲಿ 2 ತಾಸು ಕಾದ ರಾಹುಲ್‌!

ಪ್ರಜಾಸತ್ತೆ ಅಪಾಯದಲ್ಲಿ

ಈ ನಡುವೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪುನರುಚ್ಚರಿಸಿದ ರಾಹುಲ್‌, ಭಾರತದ ಪ್ರಜಾಸತ್ತೆಯು ಇತರ ದೇಶಗಳಿಗೂ ಒಳ್ಳೆಯದನ್ನು ಮಾಡುತ್ತದೆ. ಆದರೆ ದೇಶದಲ್ಲಿನ ಪ್ರಜಾಸತ್ತೆ ಕುಸಿಯುತ್ತಿದ್ದು, ಜಾಗತಿಕ ಪರಿಣಾಮ ಬೀರುತ್ತದೆ. ಆದಾಗ್ಯೂ ಇದು ನಮ್ಮ ಆಂತರಿಕ ವಿಚಾರ. ಹೀಗಾಗಿ ಆಂತರಿಕವಾಗಿಯೇ ಇದರ ವಿರುದ್ಧ ಹೋರಾಡಿ ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಸೋಲಿಸಲು ಕರ್ನಾಟಕ ತಂತ್ರವೇ ಮಾದರಿ: ರಾಹುಲ್‌ ಗಾಂಧಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ