
ನಾಯಿಗಳು ತಮ್ಮ ಯಜಮಾನರಿಗೆ ನಿಷ್ಠೆ ಮತ್ತು ಬೇಷರತ್ತಾದ ಪ್ರೀತಿಗೆ ಹೆಸರುವಾಸಿ. ಇದನ್ನು ಸಾಬೀತುಪಡಿಸುವ ಅನೇಕ ಸುದ್ದಿಗಳನ್ನು ನಾವು ನೋಡಿದ್ದೇವೆ. ಅಂತಹದ್ದೇ ಒಂದು ನಾಯಿ ಮೂ ಡೇಂಗ್. ಆದರೆ, ಅವನ ದುಃಖಕ್ಕೆ ಈಗ ಅಂತ್ಯ ಸಿಕ್ಕಿದೆ. ವಜಿರಲೋಂಗ್‌ಕಾರ್ ರಾಜನ ಸೋದರ ಸೊಸೆ ಮತ್ತು ಥೈಲ್ಯಾಂಡ್‌ನ ರಾಜಕುಮಾರಿ ಸಿರಿಭಾ ಚುಡಾಬೋರ್ನ್ ಮೂ ಡೇಂಗ್‌ನನ್ನು ದತ್ತು ತೆಗೆದುಕೊಂಡಿದ್ದಾರೆ.
ಡ್ಯೂಟಿ ಟೈಮಲ್ಲಿ ನಿದ್ದೆ ಮಾಡಿದ ಪೊಲೀಸ್ ಡಾಗ್‌ಗೆ ಇಯರೆಂಡ್ ಬೋನಸ್ ಕಟ್ ...!
ಮೂ ಡೇಂಗ್‌ನ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ತನ್ನ ಯಜಮಾನ ಮೃತಪಟ್ಟಿದ್ದಾರೆಂದು ತಿಳಿಯದೆ 7-Eleven ಅಂಗಡಿಯ ಮುಂದೆ ಕಾಯುತ್ತಿದ್ದ. ಯಜಮಾನ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವನು ಅಲ್ಲೇ ಇದ್ದ. ದಿನಗಳು ಕಳೆದಂತೆ, ಮೂ ಡೇಂಗ್‌ನ ಕಥೆ ತಿಳಿದ ಜನರು ಅವನಿಗೆ ಬೇಕಾದ ಆರೈಕೆ ನೀಡಿದರು. 7-Eleven ಅಂಗಡಿಯ ಸಿಬ್ಬಂದಿ ಆಹಾರ ನೀಡಿದರು. ಜೊತೆಗೆ ಆಟಿಕೆಗಳನ್ನು ಸೇರಿದಂತೆ ಹಲವು ವಸ್ತುಗಳನ್ನು ಜನರು ಅವನಿಗೆ ನೀಡಿದರು. ಆದರೆ, ಯಜಮಾನ ಬಾರದ ದುಃಖ ಅವನನ್ನು ಬಿಟ್ಟು ಹೋಗಲಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಮೂ ಡೇಂಗ್ ನ ಕಥೆ ಥಾಯ್ ರಾಜಕುಮಾರಿ ಸಿರಿಭಾಳ ಗಮನ ಸೆಳೆಯಿತು. ಹೀಗಾಗಿ, ಅವರು ನಾಯಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ತಮ್ಮ ಫೇಸ್‌ಬುಕ್ ಪುಟದ ಮೂಲಕ ಈ ವಿಷಯವನ್ನು ಸಿರಿಭಾ ತಿಳಿಸಿದರು. ಮೂ ಡೇಂಗ್‌ನ ಅಭಿಮಾನಿಗಳು ಅವನ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಸಿರಿಭಾ ಹೇಳಿದರು. ಅವನ ದೈಹಿಕ ಸ್ಥಿತಿ ಮಾತ್ರವಲ್ಲ, ಅವನ ಮಾನಸಿಕ ಸ್ಥಿತಿ ಕೂಡ ತನ್ನನ್ನು ಸ್ಪರ್ಶಿಸಿದೆ ಎಂದು ಸಿರಿಭಾ ಹೇಳಿದರು.
'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?
ಇಲ್ಲಿನ ಮೂ ಡೇಂಗ್‌ಗೆ ಸ್ಟೋರಿಯು ಜಪಾನ್‌ನ ಹಚಿಕೋ ಕಥೆಯನ್ನು ನೆನಪಿಸಿದೆ ಯಜಮಾನ ಮೃತಪಟ್ಟಿದ್ದಾರೆಂದು ತಿಳಿಯದೆ ಹತ್ತು ವರ್ಷಗಳ ಕಾಲ ಅವರ ಬರುವಿಕೆಗಾಗಿ ಕಾಯುತ್ತಿದ್ದ ನಿಷ್ಠಾವಂತ ನಾಯಿ 'ಹಚಿಕೋ'. ಜಪಾನ್‌ನ ಹಚಿಕೋ ಕಥೆ ತುಂಬಾ ಪ್ರಸಿದ್ಧವಾಗಿದೆ. ಹಾಲಿವುಡ್ ನಲ್ಲಿ ಸಿನೆಮಾ ಕೂಡ ಬಂದಿದೆ.
ಏನು ಹಚಿಕೋ ಕಥೆ: ಹಚಿಕೋ ಒಂದು ಅನಾಥ ನಾಯಿ, ಇದು ಜಪಾನ್ ನ ಒಬ್ಬ ಕೃಷಿ ಪ್ರೊಫೆಸರ್ ಕೈಗೆ ಸಿಕ್ಕಿತ್ತು. ಅವರ ಆರೈಕೆಯಲ್ಲೇ ಬೆಳೆದ ಶ್ವಾನದ ಕಥೆ ಇದು. ಆ ನಾಯಿ ಪ್ರತಿದಿನವೂ ಅವರು ಓಡಾಡುತ್ತಿದ್ದ ರೈಲಿನಲ್ಲಿ ಸಿಕ್ಕಿತ್ತು.ಅವರ ಆರೈಕೆ, ಪ್ರೀತಿಯಲ್ಲಿ ಬೆಳೆದ ಹಚಿಕೋ ಪ್ರೊಫೆಸರ್ ಪ್ರತಿದಿನ ಕೆಲಸ ಮುಗಿಸಿಕೊಂಡು ಬರುವಾಗ ಯಜಮಾನನಿಗಾಗಿ ಕಾಯುತ್ತಿತ್ತು. ಅದೊಂದು ದಿನ ಕಾಲೇಜಿನಲ್ಲಿ ಪ್ರೊಫೆಸರ್ ಮೃತಪಟ್ಟ ಹೀಗಾಗಿ ರೈಲಿನಲ್ಲಿ ಆತ ಬರಲೇ ಇಲ್ಲ. ತನ್ನ ಯಜಮಾನನಿಗಾಗಿ ಬರೋಬ್ಬರಿ 10 ವರ್ಷಗಳ ಕಾಲ ಹಚಿಕೋ ಕಾದು ಒಂದು ದಿನ ಅಲ್ಲೇ ಸಾವು ಕಂಡಿತು. ಇಂದಿಗೂ ಈ ನಾಯಿಯ ಕಥೆ ಜಪಾನ್‌ನಲ್ಲಿ ಜಾಲ್ತಿಯಲ್ಲಿದೆ ಮತ್ತು ಈ ನಾಯಿಗಾಗಿ ಪ್ರತಿಮೆಯನ್ನು ಕೆತ್ತಲಾಗಿದೆ. 2023ರಲ್ಲಿ ನೂರನೇ ವರ್ಷಾಚರಣೆಯನ್ನು ಮಾಡಿತ್ತು. ಇಂದಿಗೆ ಟೋಕಿಯೋದ ಶಿಬುಯಾ ಅಂತರಾಷ್ಟ್ರೀಯ ರೈಲ್ವೆ ನಿಲ್ದಾಣದಲ್ಲಿ ಹಚಿಕೋ ನ ಕಂಚಿನ ಪ್ರತಿಮೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ