
ವಾಷಿಂಗ್ಟನ್(ಜ.29) ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಕ ಸರ್ಕಾರ ಉಚಿತವಾಗಿ ಕಾಂಡೋಮ್ ವಿತರಿಸುತ್ತಿದೆ. ಇತ್ತ ಅಮೆರಿಕ ಕೂಡ ಇದೇ ರೀತಿ ಉಚಿತ ಕಾಂಡೋಮ್ ನೀಡುತ್ತಿದೆ. ಆದರೆ ಅಮೆರಿಕ ತನ್ನ ದೇಶದಲ್ಲಿ ಮಾತ್ರವಲ್ಲ, ಆರ್ಥಿಕವಾಗಿ ಸಶಕ್ತವಾಗಿಲ್ಲದ ದೇಶಗಳಿಗೂ ಅಮೆರಿಕ ಕಾಂಡೋಮ್ ವಿತರಿಸಲು ಕೋಟಿ ಕೋಟಿ ರೂಪಾಯಿ ನೆರವು ನೀಡುತ್ತಿದೆ. ಈ ಪೈಕಿ ಪ್ಯಾಲೆಸ್ತಿನ್‌ನ ಗಾಜಾಪಟ್ಟಿಯಲ್ಲಿ ಅಮೆರಿಕ ಉಚಿತವಾಗಿ ಕಾಂಡೋಮ್ ವಿತರಿಸುತ್ತಿದೆ. ಆದರೆ ಜೋ ಬೈಡೆನ್ ನೀಡುತ್ತಿದ್ದ 50 ಮಿಲಿಯನ್ ಅಮೆರಿನ್ ಡಾಲರ್ ಮೊತ್ತವನ್ನು ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಗಾಜಾ ಪಟ್ಟಿಗೆ ಅಮೆರಿಕ ಕಾಂಡೋಮ್ ವಿತರಿಸಲು ಆರ್ಥಿಕ ನೆರವು ನೀಡುವುದಿಲ್ಲ ಎಂದಿದೆ.
ಈಗಾಗಲೇ ಡೋನಾಲ್ಡ್ ಟ್ರಂಪ್ ಸರ್ಕಾರ ಹಲವು ದೇಶಗಳಿಗೆ ನೀಡುತ್ತಿದ್ದ ಆರ್ಥಿಕ ನರವನ್ನು ನಿಲ್ಲಿಸಿದೆ. ತನ್ನ ದೇಶದ ಮೇಲಿನ ಹೊರೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ. ಆದರೆ ಗಾಜಾ ಪಟ್ಟಿಗೆ ಕಾಂಡೋಮ್ ವಿತರಿಸಲು ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ನಿಲ್ಲಿಸಿರುವುದರ ಹಿಂದೆ ಆರ್ಥಿಕ ಹೊರೆ ಕಾರಣವಲ್ಲ. ಇದಕ್ಕೆ ಮುಖ್ಯ ಕಾರಣ ಹಮಾಸ್.
ಕಾಂಡೋಮ್ ಆರ್ಡರ್‌ನಲ್ಲಿ ಬೆಂಗಳೂರು ನಂ.1, ರಾತ್ರಿ 10 ರಿಂದ 11ರ ಹೊತ್ತಲ್ಲೇ ಹೆಚ್ಚು ಬೇಡಿಕೆ!
ಅಮೆರಿಕದ ಡೋನಾಲ್ಡ್ ಟ್ರಂಪ್ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶೀಯೆನ್ಸಿ(DOGE) ತಂಡದ ಮುಖ್ಯಸ್ಥ ಎಲಾನ್ ಮಸ್ಕ್ ನೀಡಿದ ವರದಿ ಆಧರಿಸಿ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗಾಜಾ ಪಟ್ಟಿ ಜನತೆಗೆ ಇನ್ಮುಂದೆ ಉಚಿತ ಕಾಂಡೋಮ್ ಸಿಗುವುದಿಲ್ಲ. ಇತ್ತೀಚೆಗೆ ಎಲಾನ್ ಮಸ್ಕ್ ನೇತೃತ್ವದ ತಂಡ ಮಹತ್ವದ ವರದಿ ನೀಡಿದೆ. ಈ ಪೈಕಿ ಜೋ ಬೈಡೆನ್ ಸರ್ಕಾರ ಗಾಜಾ ಪಟ್ಟಿಗೆ ಕಾಂಡೋಮ್ ವಿತರಿಸಲು 50 ಮಿಲಿಯನ್ ಅಮೆರಿಕ ಡಾಲರ್ ಮೊತ್ತದ ನೆರವು ನೀಡುತ್ತಿತ್ತು. ಆದರೆ ಈ ಕಾಂಡೋಮ್‌ಗಳು ಗಾಜಾ ಪಟ್ಟಿ ಜನರಿಗೆ ಲಭ್ಯವಾಗುತ್ತಿರಲಿಲ್ಲ. ಇದನ್ನು ಉಗ್ರ ಗುಂಪುಗಳು, ಶಸಸ್ತ್ರ ಪಡೆಗಳು ಕೈವಶ ಮಾಡಿಕೊಳ್ಳುತ್ತಿತ್ತು ಎಂದು ವರದಿ ನೀಡಿದೆ.
ಕಾಂಡೋಮ್‌ಗೆ ನೀಡುತ್ತಿರುವ ಹಣ ಸಮಪರ್ಕವಾಗಿ ಬಳಕೆಯಾಗುತ್ತಿಲ್ಲ. ಇದನ್ನು ಹಮಾಸ್ ಉಗ್ರರು ಬಳಸುತ್ತಿದ್ದಾರೆ. ಇನ್ನು ಉಚಿತವಾಗಿ ವಿತರಿಸುವ ಕಾಂಡೋಮ್ ಕೂಡ ದಾಳಿಗೆ ಬಳಸಲಾಗುತ್ತಿದೆ. ಹಮಾಸ್ ಉಗ್ರರು ಲಾರ್ಜ್ ಕಾಂಡೋಮ್‌ಗಳನ್ನು ಬಳಸುತ್ತಿದ್ದಾರೆ. ಇದು ದಾಳಿಗೆ ಬಳಕೆ ಮಾಡುತ್ತಿದ್ದಾರೆ. ಅಮೆರಿಕ ಕೊಟ್ಟ ಕಾಂಡೋಮ್‌ನ್ನು ಇಸ್ರೇಲ್ ವಿರುದ್ಧ ದಾಳಿಗೆ ಬಳಸುತ್ತಿರುವುದು ಸರಿಯಲ್ಲ ಎಂದು DOGE ವರದಿ ನೀಡಿದೆ.ಕಾಂಡೋಮ್ ಹೆಸರಿನಲ್ಲಿ ಗಾಜಾ ಪಟ್ಟಿಯಲ್ಲಿ ಅವ್ಯವಹಾರಗಳು ನಡೆದಿದೆ.
ಎಲಾನ್ ಮಸ್ಕ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಹಮಾಸ್ ಉಗ್ರರು ಕಾಂಡೋಮ್‌ಗಳನ್ನು ಶಸ್ತ್ರಾಸ್ತ್ರದಲ್ಲಿ ಬಳಸುತ್ತಿದ್ದಾರೆ. ಶಸ್ತ್ರಗಳ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕಾಂಡೋಮ್ ಬಳಸಲಾಗುತ್ತಿದೆ. ಹಮಾಸ್ ಉಗ್ರರು ಮ್ಯಾಗ್ನಮ್ ಕಾಂಡೋಮ್ ಬಳಸುತ್ತಿದ್ದಾರೆ. ಈ ಬ್ರ್ಯಾಂಡ್ ಎಕ್ಸ್‌ಟ್ರಾ ಲಾರ್ಜ್ ಕಾಂಡೋಮ್ ಬಳಸುತ್ತಿದ್ದಾರೆ. ಯಾಕೆ ಈ ರೀತಿ ಎಂದು ಮಸ್ಕ್ ಪ್ರಶ್ನಿಸಿದ್ದಾರೆ. ಅಮೆರಿಕ ತೆರಿಗೆದಾರರ ಹಣವನ್ನು ಗಾಜಾದಲ್ಲಿ ಕಾಂಡೋಮ್ ವಿತರಿಸಲು ಬಳಸಬೇಕೇ? ಈ ಕಾಂಡೋಮ್‌ಗಳನ್ನು ಉಗ್ರರು ತಮ್ಮ ಶಸ್ತ್ರಾಸ್ತ್ರಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಮೆರಿಕದ ಪ್ರತಿಯೊಬ್ಬನಿಗೂ ಮಾಡಿದ ಮೋಸವಾಗಿದೆ. ಇಂತಹ ಪ್ರಕ್ರಿಯೆಗೆ ಅಮೆರಿಕ ನಾಗರೀಕ ಜೊತೆಗೆ ನಿಲ್ಲುವುದಿಲ್ಲ. ಹೀಗಾಗಿ ಗಾಜಾಗೆ ಕಾಂಡೋಮ್ ಆರ್ಥಿಕ ನೆರವು ನಿಲ್ಲಿಸಿದ್ದು ಸರಿ ಅನ್ನೋ ಮಾತುಗಳು ಕೇಳಿಬಂದಿದೆ.
50 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಗಾಜಾ ಪಟ್ಟಿಗಾಗಿ ಅಮೆರಿಕ ಖರ್ಚು ಮಾಡುತ್ತಿದೆ ಅನ್ನೋ ವರದಿಬೆನ್ನಲ್ಲೇ ಇದು ಸತ್ಯಕ್ಕೆ ದೂರ ಅನ್ನೋ ಮಾತಗಳು ಕೇಳಿಬಂದಿದೆ. ಗಾಜಾ ಪಟ್ಟಿಯಲ್ಲರುವ ಜನಸಂಖ್ಯೆ ಕೇವಲ 2 ಮಿಲಿಯನ್. ಹೀಗಾಗಿ ಕಾಂಡೋಮ್‌ಗೆ 50 ಮಿಲಿಯನ್ ಖರ್ಚು ಮಾಡಲು ಸಾಧ್ಯವೇ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಹೆಂಡ್ತಿ ಮುಖ ನೋಡೋದು ಅನಿವಾರ್ಯವಲ್ಲ, L&T ಮುಖ್ಯಸ್ಥರಿಗೆ ಕಾಂಡೋಮ್ ಜಾಹೀರಾತು ಠಕ್ಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ