
ಅಮ್ಮಾನ್: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ 8ನೇ ದಿನವೂ ತೀವ್ರಗತಿಯಲ್ಲಿ ಸಾಗುತ್ತಿದ್ದು, ಶನಿವಾರ ಇರಾನ್ ಜೋರ್ಡಾನ್‌ನ ಮುವಫ್ಫಕ್ ಸಲ್ತಿ ವಾಯುನೆಲೆಯಲ್ಲಿ ಅಮೆರಿಕದ ಮಹತ್ವದ ಎಎನ್/ಟಿಪಿವೈ-2 ರಾಡಾರ್ ವ್ಯವಸ್ಥೆಯನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಈ ಹಾನಿಯನ್ನು ಸ್ವತಃ ಅಮೆರಿಕ ಅಧಿಕಾರಿಗಳೇ ದೃಢಪಡಿಸಿದ್ದಾರೆ. ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಒಳಪಟ್ಟ ಈ ರಾಡಾರ್ 27.5 ಸಾವಿರ ಕೋಟಿ ರು. ಬೆಲೆ ಹೊಂದಿದೆ. ಇದು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿ, ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಮಾರ್ಗದರ್ಶನ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಇದು ಧ್ವಂಸವಾಗಿರುವುದರಿಂದ, ಪಿಎಸಿ-3 ಕ್ಷಿಪಣಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಆದರೆ ಈ ಕ್ಷಿಪಣಿಗಳು ಸೀಮಿತ ಸಂಖ್ಯೆಯಲ್ಲಿವೆ. ಹೀಗಾಗಿ ಕೊಲ್ಲಿ ಪ್ರದೇಶದಲ್ಲಿ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
4 ದಿನಗಳ ಹಿಂದೆ ಕತಾರ್‌ನಲ್ಲಿದ್ದ ಎನ್/ಎಫ್‌ಪಿಎಸ್ -132 ರಾಡಾರ್ ವ್ಯವಸ್ಥೆಯನ್ನೂ ಇರಾನ್ ಕ್ಷಿಪಣಿಗಳು ಧ್ವಂಸಗೊಳಿಸಿದ್ಚದವು. ಇದರಿಂದ ಅಮೆರಿಕ ದಾಳಿ ಮತ್ತು ದಾಳಿ ತಡೆಗೆ ಭಾರೀ ಹೊಡೆತ ಬಿದ್ದಿತ್ತು. ಇದರಿಂದ ಅಂದಾಜು 10000 ಕೋಟಿ ರು.ನಷ್ಟವಾಗಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ