ವಿಶೇಷಚೇತನನಾದರೂ ವೀಲ್‌ಚೇರ್‌ನಲ್ಲಿ ಕುಳಿತು 10 ಟನ್‌ನ 2 ಟ್ರಕ್‌ ಎಳೆಯಬಲ್ಲ

Suvarna News   | Asianet News
Published : Mar 16, 2022, 11:19 AM IST
ವಿಶೇಷಚೇತನನಾದರೂ ವೀಲ್‌ಚೇರ್‌ನಲ್ಲಿ ಕುಳಿತು 10 ಟನ್‌ನ 2 ಟ್ರಕ್‌ ಎಳೆಯಬಲ್ಲ

ಸಾರಾಂಶ

10 ಟನ್‌ನ 2 ಟ್ರಕ್‌ ಎಳೆಯಬಲ್ಲ ವಿಶೇಷಚೇತನ ವಿಶ್ವದ ಶಕ್ತಿಶಾಲಿ ವ್ಯಕ್ತಿಯಾಗಲು ಪಣತೊಟ್ಟ ವ್ಯಕ್ತಿ ಸಾಧನೆ ಮಾಡಲು ಹೊರಟ ಡೇವಿಡ್ ವಾಲ್ಷ್

ಕೆಲವು ವಿಶೇಷ ವ್ಯಕ್ತಿಗಳಿರುತ್ತಾರೆ. ಅವರ ಸಾಧನೆ ಅಂಗವೈಕಲ್ಯವನ್ನು ಮೀರಿದ್ದು, ಕಣ್ಣು ಕಾಣಿಸದಿದ್ದರೂ ಕೆಲವರು ಸುಂದರವಾಗಿ ಹಾಡುತ್ತಾರೆ. ಕಿವಿ ಬಾಯಿ ಬರದಿದ್ದರೂ ಸುಂದರವಾಗಿ ಡಾನ್ಸ್‌ ಮಾಡುತ್ತಾರೆ. ಹೀಗೆ ತಮ್ಮ ದೇಹದ ವೈಕಲ್ಯವನ್ನು ಮೀರಿ ಸಾಧನೆ ಮಾಡಿದ ಅನೇಕರನ್ನು ಈಗಾಗಲೇ ನೋಡಿದ್ದೇವೆ. ಈಗ ಇಲ್ಲಿ ಹೇಳ ಹೊರಟಿರುವುದು ಕೂಡ ಅಂತಹದ್ದೇ ಒಂದು ವಿಶೇಷಚೇತನ ಸಾಧಕನ ಬಗ್ಗೆ. ಇವರ ಹೆಸರು ಡೇವಿಡ್ ವಾಲ್ಷ್ (David Walsh) ಮೂರು ಮಕ್ಕಳ ತಂದೆಯೂ ಆಗಿರುವ ಇವರು ವೀಲ್‌ಚೇರ್‌ನಲ್ಲಿ ಕುಳಿತುಕೊಂಡೆ ಎರಡು 10 ಟನ್‌ ತೂಕದ ಟ್ರಕ್‌ಗಳನ್ನು ಒಬ್ಬರೇ ಯಾರ ಸಹಾಯವಿಲ್ಲದೇ ಎಳೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಮೂಲಕ ವಿಶ್ವದ ಅತ್ಯಂತ ಬಲಿಷ್ಠ ವಿಶೇಷ ಚೇತನ ವ್ಯಕ್ತಿ ಎಂಬ ಸಾಧನೆ ಮಾಡಲು ಹೊರಟಿದ್ದಾರೆ.

ಡೇವಿಡ್ ವಾಲ್ಷ್ ಅವರಿಗೆ 2012ರಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ರೋಗ ಇದೆ ಎಂಬುದು ತಿಳಿದು ಬಂತು. ಆದರೆ ಕೇವಲ ಐದು ವರ್ಷಗಳ ನಂತರ, ಅವರು ಶಕ್ತಿಶಾಲಿ ವ್ಯಕ್ತಿ ಎನಿಸುವ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಹಲವಾರು ಸವಾಲುಗಳನ್ನು ಜಯಿಸಿದರು. 2016ರಲ್ಲಿ ಅವರು ಸೇನೆಯನ್ನು ತೊರೆದ ನಂತರ ಇವರ ಈ ಶಕ್ತಿಶಾಲಿಯಾಗಲು ತರಬೇತಿ ಕಾರ್ಯ ಆರಂಭವಾಯಿತು. ಅಲ್ಲದೇ ಅಂದಿನಿಂದಲೇ ಇದು ಅವರ ಜೀವನ ವಿಧಾನವಾಯಿತು.

 

ನಾನು ಜಿಮ್‌ಗೆ ಸೇರಿಕೊಂಡೆ ಮತ್ತು ವಸ್ತುಗಳ ಶಕ್ತಿಯ ಭಾಗವನ್ನು ನಿಜವಾಗಿಯೂ ಆನಂದಿಸಿದೆ, ನನ್ನನ್ನು ನನು ಶಕ್ತಿಶಾಲಿ ಎಂದು ಕಂಡುಕೊಂಡಿದ್ದರಿಂದ ನಾನು ಖುಷಿ ಪಡುವಂತಹ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎಂದು ಡೇವಿಡ್ ವಾಲ್ಷ್ ಹೇಳಿದರು ಎಂದು Metro.co.uk ಉಲ್ಲೇಖಿಸಿದೆ.

ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!
 

ಅವರು ಮಾಜಿ ಸೈನಿಕರಿಗಾಗಿ ಶಕ್ತಿಶಾಲಿ ವ್ಯಕ್ತಿ ಸ್ಪರ್ಧೆಯನ್ನು ಆಯೋಜಿಸಿದ್ದರು ಎಂದು ಡೇವಿಡ್ ವಾಲ್ಷ್ ಹೇಳಿದರು. ನಾನು ಮೊದಲ ಬಾರಿಗೆ ವಿಶೇಷಚೇತನರ ಸ್ಪರ್ಧೆಯಲ್ಲಿ ಭಾಗವಹಿಸಿದೆ ಹಾಗೂ ದಕ್ಷಿಣ ಇಂಗ್ಲೆಂಡ್‌ನ ಶಕ್ತಿಶಾಲಿ ವಿಶೇಷಚೇತನ ವ್ಯಕ್ತಿ ಎನಿಸಿದೆ. ಹಾಗೆಯೇ ಬ್ರಿಟನ್‌ನಲ್ಲಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅಲ್ಲಿ ಮೂರನೇ ಶಕ್ತಿಶಾಲಿ ವ್ಯಕ್ತಿಯಾದೆ ಎಂದು ಅವರು ಹೇಳಿದರು.

ಬಾಹ್ಯಾಕಾಶಕ್ಕೆ ಹೋಗ್ತಾರಾ ಜಗತ್ತಿನ ಮೊದಲ ವಿಶೇಷ ಚೇತನ ಗಗನಯಾತ್ರಿ?
2020 ರಲ್ಲಿ, ಅವರು ವಿಶ್ವದ ಪ್ರಬಲ ಅಂಗವಿಕಲ ವ್ಯಕ್ತಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು ಮತ್ತು ಎರಡನೇ ಸ್ಥಾನ ಪಡೆದರು. ಈ ವರ್ಷ, ಅವರು ಈ ಸ್ಪರ್ಧೆಯಲ್ಲಿ ಅಗ್ರಸ್ಥಾನವನ್ನು ಪಡೆಯುವ ಭರವಸೆಯನ್ನು ಹೊಂದಿದ್ದಾರೆ. ಏಕೆಂದರೆ ಇತ್ತೀಚೆಗೆ ಅವರು ಎರಡು 10-ಟನ್ ತೂಕದ ಟ್ರಕ್‌ಗಳನ್ನು ಗಾಲಿಕುರ್ಚಿಯಲ್ಲಿ ಕುಳಿತು ಯಾವುದೇ ಸಹಾಯವಿಲ್ಲದೆ ಎಳೆದು ಸಾಧನೆ ಮಾಡಿದ್ದು ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಾಲ್ಷ್ ಅವರು ತಮ್ಮ ರೋಗನಿರ್ಣಯದ ಮೊದಲು ಸ್ಟ್ರಾಂಗ್‌ಮೆನ್ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರು. ಆದರೆ 2014 ರಲ್ಲಿ ತರಬೇತಿ ಅವಧಿಯಲ್ಲಿ ಅವರ ಬಲಗೈ ಶಕ್ತಿ ಗುಂದಿದೆ ಎಂದು ತಿಳಿದು ಬಂದಾಗ ಆಘಾತಕ್ಕೊಳಗಾಗಿದ್ದರು

ಈ ಕೈ ಮರಗಟ್ಟುವಿಕೆ ಅವರ ದೇಹದ ಉಳಿದ ಭಾಗಗಳಿಗೆ ಹರಡಿದ ನಂತರ, ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳು ನಡೆದು ರೋಗ ನಿರ್ಣಯ ಬಹಿರಂಗವಾದವು. ರೋಗಲಕ್ಷಣಗಳು ಆರಂಭವಾದಾಗ, ನನ್ನ ಜೀವನದಲ್ಲಿ ನಾನು ಏನು ಮಾಡಲಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನಾನು ವೃತ್ತಿವಾರು ಮತ್ತು ಕೌಟುಂಬಿಕವಾಗಿಯೂ ಶಕ್ತಿಶಾಲಿ, ಬುದ್ಧಿವಂತನಾಗಿದ್ದೆ. ಆದರೆ ನಾನು ನನ್ನ ಬಗ್ಗೆ ತಿಳಿಯದೆ ಎಲ್ಲರನ್ನು ಅವಲಂಬಿಸಬೇಕಾದ ವ್ಯಕ್ತಿಯಾದೆ. ಆದರೆ ರಾತ್ರೋರಾತ್ರಿ ನನ್ನ ಮೌಲ್ಯದ ಬಗ್ಗೆ ನಾನು ತಿಳಿದುಕೊಂಡೆ ಎಂದು ಡೇವಿಡ್‌ ವಾಲ್ಷ್ ಹೇಳಿದರು.

ಹೀಗಾಗಿ ವರ್ಷಗಳ ಅಭ್ಯಾಸ ಮತ್ತು ತರಬೇತಿಯ ನಂತರ, ವಾಲ್ಷ್ ಈಗ ತನ್ನ ಶಕ್ತಿ ಮತ್ತು ಸ್ಟ್ರಾಂಗ್‌ಮ್ಯಾನ್ ತಂತ್ರಗಳನ್ನು ಮರಳಿ ಪಡೆದಿದ್ದಾರೆ. ಅವರು ಸರಕು ನಿರ್ವಹಣೆಯಲ್ಲಿ ವಾರದಲ್ಲಿ ಒಂದು ದಿನ ಕೆಲಸ ಮಾಡುತ್ತಾರೆ. ನಾನು ನನ್ನ ಅಂಗವೈಕಲ್ಯತೆಯನ್ನು ಒಪ್ಪಿಕೊಳ್ಳುವುದಕ್ಕೆ ಮತ್ತು  ನನ್ನ ರೋಗಲಕ್ಷಣಗಳೊಂದಿಗೆ ವ್ಯವಹರಿಸಲು ಕೆಲವು ವರ್ಷಗಳನ್ನೇ ತೆಗೆದುಕೊಂಡಿದ್ದೇನೆ ಎಂದು ವಾಲ್ಶ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!