ಇಂದು ಆಫ್ಘನ್‌ ಸರ್ಕಾರ ರಚನೆ : ಹೊಸ ನಾಯಕ ಯಾರು?

Kannadaprabha News   | stockphoto
Published : Sep 03, 2021, 08:51 AM ISTUpdated : Sep 03, 2021, 09:14 AM IST
ಇಂದು ಆಫ್ಘನ್‌ ಸರ್ಕಾರ ರಚನೆ  : ಹೊಸ ನಾಯಕ ಯಾರು?

ಸಾರಾಂಶ

20 ವರ್ಷಗಳ ಬಳಿಕ ಅಮೆರಿಕದಿಂದ ದೇಶವನ್ನು ಮರುವಶ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದ ತಾಲಿಬಾನ್‌   ಉಗ್ರ ಸಂಘಟನೆ ದೇಶದಲ್ಲಿ ಹೊಸ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ

ಕಾಬೂಲ್‌ (ಸೆ.03): 20 ವರ್ಷಗಳ ಬಳಿಕ ಅಮೆರಿಕದಿಂದ ದೇಶವನ್ನು ಮರುವಶ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದ ತಾಲಿಬಾನ್‌ ಉಗ್ರ ಸಂಘಟನೆ, ಇಂದು ದೇಶದಲ್ಲಿ ಹೊಸ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅಷ್ಘಾನಿಸ್ತಾನದ ಹೊಸ ಸರ್ಕಾರದ ನಂ.1 ನಾಯಕನಾಗಿ ಧಾರ್ಮಿಕ ಮುಖಂಡ ಮುಲ್ಲಾ ಹೈಬತುಲ್ಲಾಹ್‌ ಅಖುಂಜಾದಾನನ್ನು ನೇಮಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಇರಾನ ಮಾದರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ.

‘ಹೊಸ ಸರ್ಕಾರದ ರಚನೆ ಬಹುತೇಕ ಪೂರ್ಣಗೊಂಡಿದ್ದು ಹೊಸ ‘ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಅಷ್ಘಾನಿಸ್ತಾನ’ ಸರ್ಕಾರ ಜನರಿಗೆ ಹೊಸ ಮಾದರಿ ಸರ್ಕಾರವನ್ನು ನೀಡಲಿದೆ. ತಾಲಿಬಾನ್‌ನ ನಿಷ್ಠಾವಂತ ಕಮಾಂಡರ್‌ ಅಖುಂಜಾದಾನನ್ನು ಹೊಸ ದೇಶದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ತಾಲಿಬಾನ್‌ ಸಾಂಸ್ಕೃತಿಕ ಸಂಸ್ಥೆಯ ಸದಸ್ಯ ಅನಾಮುಲ್ಲಾ ಸಮಘಾನಿ ಟೊಲೊ ಸುದ್ದಿವಾಹಿನಿಗೆ ಹೇಳಿದ್ದಾನೆ.

ತಾಲಿಬಾನ್‌ ಆಕ್ರಮಣ ಸಂಭ್ರಮಿಸಿದ ಭಾರತೀಯ ಮುಸ್ಲಿಮರಿಗೆ ಶಾ ತರಾಟೆ

ಇರಾನ್‌ ಮಾದರಿ ಸರ್ಕಾರದಲ್ಲಿ ದೇಶದ ಅಧ್ಯಕ್ಷ, ಸಂಸತ್‌, ಪ್ರಧಾನಿಗಿಂತಲೂ ಧಾರ್ಮಿಕ ನಾಯಕರಿಗೆ ಅತ್ಯುನ್ನತ ಸ್ಥಾನವಿರುತ್ತದೆ. ಈ ಅತ್ಯುನ್ನತ ನಾಯಕನ ಪಟ್ಟವನ್ನೇ ಇದೀಗ ಅಖುಂಜಾದಾಗೆ ನೀಡಲಾಗಿದೆ. ಈತನ ಅಡಿಯಲ್ಲಿ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಕಾರ್ಯ ನಿರ್ವಹಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ