ತಾಲಿಬಾನ್‌ಗೆ ಸೆರೆ ಸಿಕ್ಕರೆ ನನ್ನ ತಲೆಗೆ ಗುಂಡಿಕ್ಕಿ;ಭಾವಿ ಪತಿಗೆ ಸೂಚಿಸಿದ್ದ ಆಫ್ಘಾನ್ ಪಾಪ್ ಸ್ಟಾರ್ !

Published : Sep 12, 2021, 10:08 PM IST
ತಾಲಿಬಾನ್‌ಗೆ ಸೆರೆ ಸಿಕ್ಕರೆ ನನ್ನ ತಲೆಗೆ ಗುಂಡಿಕ್ಕಿ;ಭಾವಿ ಪತಿಗೆ ಸೂಚಿಸಿದ್ದ ಆಫ್ಘಾನ್ ಪಾಪ್ ಸ್ಟಾರ್ !

ಸಾರಾಂಶ

ತಾಲಿಬಾನ್ ಉಗ್ರರ ಕೈಯಲ್ಲಿ ಸಾಯುವುದಿಲ್ಲ, ಅದಕ್ಕೂ ಮೊದಲೇ ಸಾಯಿಸಿ ಭಾವಿ ಪತಿಗೆ ತಲೆಗೆ ಗುಂಡಿಕ್ಕಲು ಸೂಚಿಸಿದ್ದ ಆಫ್ಘಾನ್ ಪಾಪ್ ಸಿಂಗರ್ ಅದೃಷ್ಠವಶಾತ್ ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ದೇಶ ತೊರೆದ ಸ್ಟಾರ್

ಇಸ್ತಾಂಬುಲ್(ಸೆ.12): ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ವಿದೇಶಕ್ಕೆ ಹಾರಿದ ಆಫ್ಘಾನಿಸ್ತಾನ ಪಾಪ್ ಸ್ಟಾರ್ ಆರ್ಯನಾ ಸಯೀದ್  ಇತ್ತೀಚೆಗೆ ಭಾರಿ ಸದ್ದು ಮಾಡಿದ್ದರು. ಕಾಬೂಲ್ ಕೈವಶ ಮಾಡಿದ ಬಳಿಕ ಆಫ್ಘಾನಿಸ್ತಾನ ನರಕ್ಕಿಂತ ಕಡೆಯಾಯಿತು. ಈ ವೇಳೆ ಹಲವರು ದೇಶ ತೊರೆದರು. ಈ ಕಠಿಣ ಸಂದರ್ಭದಲ್ಲಿ ತಾಲಿಬಾನ್ ಉಗ್ರರ ಕೈಗೆ ಸಿಗದೆ ಇಸ್ತಾಂಬುಲ್‌ಗೆ ಹಾರಿದ ಆರ್ಯನಾ ಸಯೀದ್ ತಮ್ಮ ನೋವಿನ ಕಹಾನಿ ಹೇಳಿಕೊಂಡಿದ್ದಾರೆ.

ಗಾಯಗೊಂಡರೆ ತಲೆಗೆ ಗುಂಡಿಕ್ಕಿ ಆದರೆ ತಾಲಿಬಾನ್‌ಗೆ ಶರಣಾಗಲ್ಲ;ಸಿಬ್ಬಂದಿಗೆ ಅಮರುಲ್ಲಾ ಸಲೇಹ್ ಸೂಚನೆ!

ಟಿವಿ ಸ್ಟಾರ್, ಮ್ಯೂಸಿಕ್ ತಾರೆಯರು, ಕಾಮಿಡಿ, ಟಿಕ್‌ಟಾಕ್ ಸ್ಟಾರ್‌ಗಳನ್ನು ತಾಲಿಬಾನ್ ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿತ್ತು. ಅದರಲ್ಲೂ ಮಹಿಳಾ ಸ್ಟಾರ್ಸ್ ಜೀವಕ್ಕೆ ಅಪಾಯಕ ಕಟ್ಟಿಟ್ಟಬುತ್ತಿಯಾಗಿತ್ತು. ಈ ಸಂದರ್ಭದಲ್ಲಿ ಆರ್ಯನಾ ಸಯೀದ್ ತಾಲಿಬಾನ್ ಕೈಗೆ ಸಿಗದೆ ದೇಶ ತೊರೆದಿದ್ದಳು. ಇದೀಗ ಇಸ್ತಾಂಬುಲ್‌ನಲ್ಲಿ ಸುರಕ್ಷಿತವಾಗಿರುವ ಸಯೀದ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ ನನ್ನನು ಸಾಯಿಸುವ ಮುನ್ನವೇ ಗುಂಡಿಕ್ಕಿ ಸಾಯಿಸಿ ಎಂದು ಭಾವಿ ಪತಿಗೆ ನೀಡಿದ ಸೂಚನೆಯನ್ನು ನೆನಪಿಸಿಕೊಂಡಿದ್ದಾರೆ.

ತಾಲಿಬಾನ್ ಉಗ್ರರು ಮಹಿಳಾ ಪಾಪ್ ಸಿಂಗರ್ ಜೀವಂತವಾಗಿ ಉಳಿಸುವ ಯಾವುದೇ ಅವಕಾಶ ಇರಲಿಲ್ಲ. ಹೀಗಾಗಿ ನಾನು ನನ್ನ ಭಾವಿ ಪತಿಗೆ ಮನವಿ ಮಾಡಿದ್ದೆ. ಜೀವಂತವಾಗಿ ತಾಲಿಬಾನ್ ಉಗ್ರರು ನನ್ನನ್ನು ಹಿಡಿದು ಗುಂಡಿಕ್ಕಿ ಹತ್ಯೆ ಮಾಡುವ ಮೊದಲು, ನೀನೆ ತಲೆಗೆ ಗುಂಡಿಕ್ಕಿ ಸಾಯಿಸು ಎಂದು ಭಾವಿ ಪತಿಗೆ ಹೇಳಿದ್ದೆ. ಅದೃಷ್ಟವಶಾತ್ ಸುರಕ್ಷಿತವಾಗಿದ್ದೇನೆ ಎಂದು ಸಯೀದ್ ಹೇಳಿದ್ದಾರೆ.

ಪಂಜಶೀರ್‌ ಮೇಲೆ ತಾಲಿಬಾನ್ ದಾಳಿ; ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರನ ಹತ್ಯೆ!

ಸಯೀದ್ ತಾಲಿಬಾನ್ ಕಾಬೂಲ್‌ನತ್ತ ಧಾವಿಸಿದಾಗ ವಿದೇಶಕ್ಕೆ ಹಾರಲು ನಿರ್ಧರಿಸಿದ್ದರು. ಆಗಸ್ಟ್ 14ಕ್ಕೆ ವಿಮಾನ ಏರಿದ ಸಯೀದ್‌ಗೆ ಆಘಾತ ಕಾದಿತ್ತು. ಕಾಬೂಲ್ ತಾಲಿಬಾನ್ ಕೈವಶವಾದ ಕಾರಣ ವಿಮಾನ ಟೇಕ್ ಆಫ್ ಆಗಲೇ ಇಲ್ಲ. ಬಳಿಕ ರಕ್ಷಣಾ ಕಾರ್ಯ ಆರಂಭಗೊಂಡಿತು. ಹೀಗಾಗಿ ಆಗಸ್ಟ್ 19 ರಂದು ಇಸ್ತಾಂಬುಲ್‌ಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ